Advertisement

16 ವರ್ಷದ ಬಳಿಕ ಒಂದಾದ ʼಮುಂಗಾರು ಮಳೆʼ ನಿರ್ದೇಶಕ- ನಿರ್ಮಾಪಕ: ಮತ್ತೆ ಬರೆಯುತ್ತಾರಾ ದಾಖಲೆ?

06:52 PM Jun 09, 2024 | Team Udayavani |

ಬೆಂಗಳೂರು: ʼಮುಂಗಾರು ಮಳೆʼ ನಟ ಗಣೇಶ್‌ ಅವರಿಗೆ ʼಗೋಲ್ಡನ್‌ ಸ್ಟಾರ್‌ʼ ಎನ್ನುವ ನೇಮ್‌ – ಫೇಮ್‌ ತಂದುಕೊಟ್ಟ ಸಿನಿಮಾವೆಂದರೆ ತಪ್ಪಾಗದು. ಈ ಸಿನಿಮಾದಿಂದ ಗಣೇಶ್‌ ಸ್ಯಾಂಡಲ್‌ ವುಡ್‌ ಪ್ರೇಕ್ಷಕರ ಮನದಲ್ಲಿ ʼಗೋಲ್ಡನ್‌ ಸ್ಟಾರ್‌ʼ ಆಗಿ ನೆಲೆಸಿದರು.

Advertisement

2006 ರಲ್ಲಿ ತೆರೆಕಂಡ ʼಮುಂಗಾರು ಮಳೆʼ ಇಂದಿಗೂ ಚಂದನವನದ ಎವರ್‌ ಗ್ರೀನ್‌ ಸಿನಿಮಾಗಳಲ್ಲಿ ಒಂದು. ಸಿನಿಮಾದ ಹಾಡು, ಕಥೆ, ಗಣೇಶ್‌, ಪೂಜಾ ಗಾಂಧಿಯ ಅಭಿನಯ, ಸಂಭಾಷಣೆ ಹೀಗೆ ಎಲ್ಲಾ ವಿಭಾಗದಲ್ಲೂ ʼಮುಂಗಾರು ಮಳೆʼ ಹಿಟ್‌ ಆಗಿತ್ತು.

100ಕ್ಕೂ ಹೆಚ್ಚಿನ ದಿನಗಳ ಕಾಲ ಕೆಲ ಥಿಯೇಟರ್‌ ನಲ್ಲಿ ಸಿನಿಮಾ ಓಡಿತ್ತು. ಯುವಜನರ ಮನದಲ್ಲಂತೂ ಚಿತ್ರದ ಹಾಡುಗಳು ಕೆಲ ವರ್ಷಗಳವರೆಗೆ ಅಚ್ಚಾಗಿ ಉಳಿದಿತ್ತು. ಇದೀಗ ʼಮುಂಗಾರು ಮಳೆʼ ನಿರ್ದೇಶಕ ಹಾಗೂ ನಿರ್ಮಾಪಕ ಮತ್ತೆ ಒಂದಾಗಿ ಸಿನಿಮಾವೊಂದನ್ನು ಮಾಡಲಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ.

ʼಮುಂಗಾರು ಮಳೆʼ ಸಿನಿಮಾಕ್ಕೆ ಬಂಡವಾಳ ಹಾಕಿದ್ದ ಇ. ಕೃಷ್ಣಪ್ಪ ಹಾಗೂ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಯೋಗರಾಜ್ ಭಟ್ ಹೊಸ ಸಿನಿಮಾವನ್ನು ಮಾಡಲಿದ್ದಾರೆ ಎಂದು ʼಸಿನಿಮಾ ಎಕ್ಸ್‌ ಪ್ರೆಸ್‌ʼ ವರದಿ ತಿಳಿಸಿದೆ.

ಹೊಸ ಸಿನಿಮಾದ ಪ್ರೀ ಪ್ರೊಡಕ್ಷನ್‌ ಕೆಲಸ ಶುರುವಾಗಿದ್ದು, ಹೊಸ ಮುಖಗಳು ಸಿನಿಮಾದಲ್ಲಿರಲಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ  ಈ ತಿಂಗಳ ಕೊನೆಯಲ್ಲಿ ಚಿತ್ರದ ಚಿತ್ರೀಕರಣ ಆರಂಭಗೊಳ್ಳಲಿದೆ ಎಂದು ವರದಿ ತಿಳಿಸಿದೆ.

Advertisement

ʼಮುಂಗಾರು ಮಳೆʼ  ಸ್ಯಾಂಡಲ್‌ ವುಡ್‌ ನಲ್ಲಿ ದಾಖಲೆ ಬರೆದಿತ್ತು. ಭಟ್ರು ಹಾಗೂ ಕೃಷ್ಣಪ್ಪ ಮತ್ತೆ ಜೊತೆಯಾಗಿದ್ದು ಮತ್ತೆ ದಾಖಲೆ ಬರೆಯುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.

ಮುಂದಿನ ದಿನಗಳಲ್ಲಿ ಯೋಗರಾಜ್‌ ಭಟ್‌ ಈ ಬಗ್ಗೆ ಅಧಿಕೃತವಾಗಿ ಹೇಳಲಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next