ಉಡುಪಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀ ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Advertisement
ಈ ಕ್ಷೇತ್ರಕ್ಕೆ ನಾನು ಅನೇಕ ಬಾರಿ ಆಗಮಿಸಿದ್ದೇನೆ. ಈ ಕ್ಷೇತ್ರದ ಮಹಿಮೆ ಆಗಾಧವಾದುದು. ಈ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಮುಂಡ್ಕೂರು ದೇವಿಯನ್ನು ದುರ್ಗತಿ ನಾಶಿನಿ ಎಂದೂ ಕರೆಯುತ್ತಾರೆ. ಈ ದುರ್ಗಾ ದೇವಿಯ ಅನುಗ್ರಹ ಸದಾ ನಿಮ್ಮೊಡನೆ ಇರಲಿ ಮತ್ತು ದೇವಿ ಆರಾಧಕರಿಗೆ ಶ್ರೀರಕ್ಷೆಯಾಗಲಿ ಎಂದು ವಿಶ್ವೇಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.ವಿದ್ಯಾವಲ್ಲಭ ತೀರ್ಥರು ಅನುಗ್ರಹಿಸಿ ತುಳುನಾಡಿನ ಯಾವುದೇ ದೇವಸ್ಥಾನಗಳಿಗೆ ಬಂಟ ಸಮುದಾಯದ ಕೊಡುಗೆ ಅಪಾರವಿದೆ. ಅದ್ದರಿಂದಲೇ ನಮ್ಮ ತುಳುನಾಡಿನಲ್ಲಿ ಅಲ್ಲಲ್ಲಿ ದೇವಸ್ಥಾನಗಳು ರಾರಾಜಿಸುತ್ತಿವೆ. ದೇವರನ್ನು ದೃಢವಾಗಿ ನಂಬಿದವರಿಗೆ ಎಂದೂ ಕಷ್ಟಕಾರ್ಪಣ್ಯಗಳು ಬರುವುದಿಲ್ಲ ಎಂದರು.
Related Articles
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಎಂಆರ್‌ಜಿ ಗ್ರೂಪ್ ಬೆಂಗಳೂರು ಕಾರ್ಯಾಧ್ಯಕ್ಷ ಮತ್ತು ಮುಂಬಯಿ ಉದ್ಯಮಿ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ, ವೇಧಮೂರ್ತಿ ಅನಂತ ಕೃಷ್ಣ ಆಚಾರ್ಯ ಮುಂಡ್ಕೂರು, ಮುಂಡ್ಕೂರು ದೊಡ್ಡಮನೆ ಸೀತಾರಾಮ ಶೆಟ್ಟಿ, ಮುಂಡ್ಕೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸಾಂತ್ರಾಲಗುತ್ತು ಎಂ.ವಾದಿರಾಜ ಶೆಟ್ಟಿ, ಬ್ರಹ್ಮ ಕಲಶೋತ್ಸವ ಸಮಿತಿ ಮುಂಬಯಿ ಇದರ ಗೌರವ ಅಧ್ಯಕ್ಷ ಎಂ. ಜಿ. ಕರ್ಕೇರ, ನಿವೃತ್ತ ಕಸ್ಟಮ್ಸ್ ಅಧಿಕಾರಿ ಎರ್ಮಾಳ್ ರೋಹಿತ್ ಹೆಗ್ಡೆ, ಬಂಟರ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಮುಂಡ್ಕೂರು ವಿದ್ಯಾವರ್ಧಕ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಳೆಪಾಡಿ, ಮುಂಡ್ಕೂರು ಎಜುಕೇಶನ್ ಆ್ಯಂಡ್ ಸೋಶಿಯಲ್ ವೆಲ್ಫೆàರ್ ಟ್ರಸ್ಟ್‌ನ ಅಧ್ಯಕ್ಷ ಪ್ರಸಾದ್ ಎಂ. ಶೆಟ್ಟಿ ಅಂಗಡಿಗುತ್ತು, ಆ್ಯಡ್‌ರೋವಿಟ್ ಕೋರೊಗ್ರೇಟರ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಯಾಧ್ಯಕ್ಷ ರಾಜೇಂದ್ರ ಶೆಟ್ಟಿ, ಸಮಾಜ ಸೇವಕ ಮುನಿಯಾಲು ಉದಯಕುಮಾರ್ ಶೆಟ್ಟಿ ಮತ್ತು ಮುಂಬಯಿ ಸಮಿತಿಯ ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವದ ಪ್ರಧಾನ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಸೇರಿದಂತೆ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಂಬಯಿ ಸಮಿತಿ ಗೌರವಾಧ್ಯಕ್ಷ ಎಂ. ಜಿ. ಕರ್ಕೆàರ ಸ್ವಾಗತಿಸಿದರು. ಬಾಲಕೃಷ್ಣ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಯಿನಾಥ್ ಶೆಟ್ಟಿ ಮತ್ತು ಅರುಣ್ ಕುಮಾರ್ ಭಟ್ ಸಭಾ ಕಾರ್ಯಕ್ರಮ ನಿರೂಪಿಸಿದರು. ಮುಂಬಯಿ ಸಮಿತಿ ಕಾರ್ಯದರ್ಶಿ ಸದಾಶಿವ ತಾಡ್ಯಾರು ವಂದಿಸಿದರು.
Advertisement
ಅನಿರೀಕ್ಷಿತವಾಗಿ ದೇವರ ಸೇವೆ ಮಾಡುವ ಭಾಗ್ಯ ನನ್ನ ಪಾಲಿಗೆ ಒದಗಿದೆ. ಇದನ್ನು ತಲೆಬಾಗಿಸಿ ಸ್ವೀಕರಿಸಿ ನನ್ನಿಂದಾದಷ್ಟು ಉತ್ತಮ ರೀತಿಯಲ್ಲಿ ನಿಭಾಯಿಸಿದ ತೃಪ್ತಿ ನನಗಿದೆ. ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಪುಣ್ಯಪ್ರದ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಮುಂಬಯಿ ಸಮಿತಿ ಚಿರಋಣಿಯಾಗಿದೆ. ದುರ್ಗಾ ಪರಮೇಶ್ವರಿ ದೇವಿಯ ಕೃಪಾಕಟಾಕ್ಷ ಎಲ್ಲರಿಗಿರಲಿ. ಭವಿಷ್ಯದಲ್ಲೂ ದೇವತಾ ಕಾರ್ಯಗಳಿಗೆ ಎಲ್ಲರ ಪ್ರೋತ್ಸಾಹ, ಸಹಕಾರ ಸದಾಯಿರಲಿ. -ರತ್ನಾಕರ ಶೆಟ್ಟಿ ಮುಂಡ್ಕೂರು,
ಅಧ್ಯಕ್ಷರು , ಬ್ರಹ್ಮಕಲಶೋತ್ಸವ ಮುಂಬಯಿ ಸಮಿತಿ ಚಿತ್ರ-ವರದಿ : ರೊನಿಡಾ ಮುಂಬಯಿ