Advertisement
ಮುಖ್ಯ ಶಿಕ್ಷಕಿ ಪೂರ್ಣಿಮಾ ಭಟ್ ಅವರ ಹೊಸಕಲ್ಪನೆಯಂತೆ ಈ ಕಾರ್ಯ ನಡೆದಿದ್ದು, ಶಾಲೆಗೆ ರಜೆ ಸಿಕ್ಕ ಬಳಿಕ ಬಾವಿಯ ಬಗ್ಗೆ , ಅಕ್ಷರ ದಾಸೋಹದ ಕೊಠಡಿ ಹಾಗೂ ಶಾಲೆಗಳ ಪ್ರಮುಖ ಪರಿಕರಗಳ ಬಗ್ಗೆ ಯಾರೂ ಗಮನ ಕೊಡುವುದಿಲ್ಲ. ಗಿಡಗಂಟಿಗಳು ಬೆಳೆದ ಬಾವಿಯನ್ನು ಸ್ವತ್ಛಗೊಳಿಸಿದರೆ ಶಾಲಾರಂಭದ ಸಂದರ್ಭ ಮಳೆಗೆ ಬಾವಿ ತುಂಬುತ್ತದೆ. ಅದೇ ರೀತಿ ಶಾಲೆಯ ಅಕ್ಷರ ದಾಸೋಹ ಕೊಠಡಿ, ಪರಿಕರಗಳನ್ನೂ ಒಪ್ಪ ಓರಣವಾಗಿರಿಸಿದರೆ ಶಾಲಾರಂಭದ ಸಂದರ್ಭ ಇವುಗಳ ಬಳಕೆಗೆ ಇನ್ನಷ್ಟು ಸುಲಭವಾಗುತ್ತದೆ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.
ಶಾಲಾರಂಭದ ಸಂದರ್ಭ ಶಾಲೆಯ ಸ್ಥಿತಿ ಭೂತ ಬಂಗಲೆಯಂತಾಗಬಾರದೆಂದು ರಜೆಗೆ ಮುನ್ನವೇ ಶಾಲೆಯ ವಸ್ತುಗಳ ನಿರ್ವಹಣೆಯ ಬಗ್ಗೆ ಗಂಭೀರವಾಗಿ ಚಿಂತಿಸಿ ಈ ಕ್ರಮ ಕೈಗೊಂಡಿದ್ದೇವೆ. ಶಾಲೆಯ ಇತರ ಶಿಕ್ಷಕರು, ಪೋಷಕರು ಸಹಕರಿಸುತ್ತಿದ್ದಾರೆ.
-ಪೂರ್ಣಿಮಾ ಭಟ್, ಮುಖ್ಯ ಶಿಕ್ಷಕಿ