Advertisement
ಅಕ್ರಮಗಳನ್ನು ತಡೆಯಲು ಲೋಕಸಭೆ ಚುನಾವಣೆ ಸಂದರ್ಭ ಇಲ್ಲಿ ಪೊಲೀಸ್ ಚೆಕ್‌ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, ಚುನಾವಣೆ ಮುಗಿದರೂ ಇನ್ನೂ ತೆರವುಗೊಂಡಿಲ್ಲ.
Related Articles
Advertisement
ಇಲ್ಲಿನ ಮೂರೂ ಕಡೆಗಳ ರಸ್ತೆಗಳಿಗೆ ಅಸಮರ್ಪಕವಾಗಿ ಬ್ಯಾರಿಕೇಡ್ ಇಡಲಾಗಿದೆ. ಸಚ್ಚೇರಿಪೇಟೆ ಕಡೆಯಿಂದ ಕಿನ್ನಿಗೋಳಿಗೆ ತಿರುಗುವ ರಸ್ತೆಯನ್ನು ಮುಚ್ಚಲಾಗಿದ್ದು ಆ ಕಡೆ ಪ್ರಯಾಣಿಸುವ ವಾಹನಗಳು ಸರ್ಕಲ್ ಹಾಕಿಯೇ ಮುಂದುವರಿಯಬೇಕಾದ್ದರಿಂದ ಗಡಿಬಿಡಿಯಲ್ಲಿ ವಾಹನ ಚಾಲಕರಿಂದ ನಿರಂತರ ಅಪಘಾತಗಳು ನಡೆಯುತ್ತಿವೆ. ಅಲ್ಲದೆ ರಸ್ತೆಯುದ್ದಕ್ಕೂ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರಿಂದ ಹನಿ ಮಳೆಗೆ ದ್ವಿಚಕ್ರ ಸವಾರರು ಎದರುರಿನ ವಾಹನಗಳ ವೇಗವನ್ನರಿಯದೆ ಬ್ಯಾರಿಕೇಡ್‌ಗೆ ಅಪ್ಪಳಿಸಿದ ಘಟನೆಗಳೂ ಇವೆ.
ಬ್ಯಾರಿಕೇಡ್‌ಗಳು ಬೆಳ್ಮಣ್‌ನವು
ಇಲ್ಲಿ ತಿಂಗಳುಗಟ್ಟಲೆ ಆಳವಡಿಸಲಾಗಿರುವ ಹೆಚ್ಚಿನ ಬ್ಯಾರಿಕೇಡ್‌ಗಳು ಬೆಳ್ಮಣ್‌ನದ್ದಾಗಿವೆ. ಸಂಘ ಸಂಸ್ಥೆಗಳು ಉದಾರವಾಗಿ ನೀಡಿದ್ದ ಅವುಗಳನ್ನು ಇದೀಗ ಮುಂಡ್ಕೂರು-ಜಾರಿಗೆಕಟ್ಟೆಯಲ್ಲಿರಿಸಲಾಗಿದ್ದು ಬೆಳ್ಮಣ್ ಪೇಟೆಯಲ್ಲಿ ಬ್ಯಾರಿಕೇಡ್‌ಗಳಿಲ್ಲ.
ಜಾರಿಗೆಕಟ್ಟೆ ಚೆಕ್‌ಪೋಸ್ಟ್ ತೆರವಿಗೂ ಆಗ್ರಹ
ಚುನಾವಣೆ ಸಂದರ್ಭ ಹಾಕಲಾದ ಚೆಕ್‌ಪೋಸ್ಟ್ ತೆರವುಗೊಳಿಸಿ ಯಥಾಸ್ಥಿತಿ ಮುಂದುವರಿಸಲು ಜನರು ಆಗ್ರಹಿಸಿದ್ದಾರೆ. ಇಲ್ಲೀಗ ಸಂಚಾರ ನಿಯಮ ಉಲ್ಲಂಘನೆ ಮಾಡುವ ಚಾಲಕರನ್ನು ಹಿಡಿಯಲಾಗುತ್ತಿದೆಯೇ ವಿನಾ ಬೇರೇನೂ ಉಪಯೋಗವಿಲ್ಲ. ಅದನ್ನು ಚೆಕ್‌ಪೋಸ್ಟ್ ಇಲ್ಲದೆಯೂ ಮಾಡಬಹುದು. ಆದ್ದರಿಂದ ಚೆಕ್‌ಪೋಸ್ಟ್ ಮತ್ತು ತೊಂದರೆಯಾಗುತ್ತಿರುವ ಬ್ಯಾರಿಕೇಡ್‌ಗಳನ್ನೂ ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
– ಶರತ್ ಶೆಟ್ಟಿ ಮುಂಡ್ಕೂರು