Advertisement

ಮುಂಡರಗಿ: ಬೈಕ್‌ ನಲ್ಲಿ ಹೋಗುತ್ತಿದಾಗ ಆಯತಪ್ಪಿ ಬಿದ್ದು ಸವಾರ ಸಾವು

11:15 AM Sep 22, 2022 | Team Udayavani |

ಮುಂಡರಗಿ: ಬೈಕ್‌ ನಲ್ಲಿ ಹೋಗುತ್ತಿದ್ದ ಸಂದರ್ಭ ಆಯತಪ್ಪಿ ಬಿದ್ದು ಸವಾರನೊಬ್ಬ ಸಾವನ್ನಪ್ಪಿದ ಘಟನೆ ತಾಲೂಕಿನ ಬೂದಿಹಾಳ – ಬೆಣ್ಣಿಹಳ್ಳಿ ರಸ್ತೆಯಲ್ಲಿ ಸೆ. 21 ರ ತಡರಾತ್ರಿ ಸಂಭವಿಸಿದೆ.

Advertisement

ಬೈಕ್‌ ಸವಾರ ಬೀಡನಾಳ ಗ್ರಾಮದ ನಿವಾಸಿ ಮಾಯಪ್ಪ ಬೀರಪ್ಪ ವಡ್ಡಟ್ಟಿ (38) ಎಂದು ತಿಳಿದು ಬಂದಿದೆ.

ಮಾಯಪ್ಪನು ಗೌಂಡಿ ಕೆಲಸದ ನಿಮಿತ್ತ ಬೂದಿಹಾಳ ಗ್ರಾಮಕ್ಕೆ ಹೋಗಿ ಮರಳಿ ಬರುವಾಗ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next