Advertisement

ಮೊದಲಿಯಾರ್ ದೊಡ್ಡ ಇತಿಹಾಸ ಇರುವ ಸಮುದಾಯ: ಸಿಎಂ ಬೊಮ್ಮಾಯಿ

12:02 PM May 08, 2022 | Team Udayavani |

ಬೆಂಗಳೂರು: ಮೊದಲಿಯಾರ್ ದೊಡ್ಡ ಇತಿಹಾಸ ಇರುವ ಸಮುದಾಯ, ತಮಿಳುನಾಡು ಇರಲಿ ಕರ್ನಾಟಕ ಇರಲಿ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ.

Advertisement

ಪ್ರಕಾಶ ನಗರ ದಲ್ಲಿ ನಡೆದ ಮೊದಲಿಯಾರ್ ಸಂಘದ ವಜ್ರ ಮಹೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು,  ಮೊದಲಿಯಾರ್ ದೊಡ್ಡ ಇತಿಹಾಸ ಇರುವ ಸಮುದಾಯ, ತಮಿಳುನಾಡು ಇರಲಿ ಕರ್ನಾಟಕ ಇರಲಿ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಮೈಸೂರು ಸಂಸ್ಥಾನ ಇತಿಹಾಸದಲ್ಲಿ ಒಳ್ಳೆಯ ಹೆಜ್ಜೆ ಗುರುತು ಇಟ್ಟು ಹೋಗಿದ್ದಾರೆ. ರಾಮ ಸ್ವಾಮಿ ಮೊದಲಿಯಾರ್ ಅವರ ಪಾತ್ರ ಬಹಳ ಮುಖ್ಯ.ಬಹಳಷ್ಟು ಕಟ್ಟಡಕ್ಕೆ ಮೊದಲಿಯಾರ್ ಸಮುದಾಯ ಹೆಸರು ಇಟ್ಟಿದ್ದಾರೆ ಎಂದರು.

ವಿಧಾನಸೌಧದ ನಿರ್ಮಾಣದಲ್ಲಿ ಮೊದಲಿಯಾರ್ ಸಮುದಾಯ ನಾಯಕರು ಬಹಳ ಪಾತ್ರ ವಹಿಸಿದ್ದಾರೆ. ಬೆಂಗಳೂರು ‌ನಿರ್ಮಾದಲ್ಲಿ ಐತಿಹಾಸಿಕ ವಾಗಿದೆ ಮೊದಲಿಯಾರ್ ಸಮುದಾಯ. ಶಿಕ್ಷಣದಲ್ಲೂ ಬಹಳ ಮುಂದಿದೆ. ಐಎಎಸ್, ಐಪಿಎಸ್ ನಲ್ಲೂ ಮೊದಲಿಯಾರ್ ಸಮುದಾಯ ಬಹಳ ಹೆಸರು ಮಾಡಿದ್ದಾರೆ. ಸ್ವಾವಲಂಬನೆ ಜತೆಗೆ ಸ್ವಾಭಿಮಾನ ಸಮುದಾಯ ಕೂಡ ಆಗಿದ್ದಾರೆ ಎಂದರು.

ಬಹಳಷ್ಟು ವಿದ್ಯಾಸಂಸ್ಥೆಗಳನ್ನು ನಿರ್ಮಾಣ ಮಾಡಿ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.ನಾನು ನಿಮ್ಮ ಸಮುದಾಯಕ್ಕೆ ಮನವಿ ಮಾಡುತ್ತೇನೆ. ಈ ನಾಡ ಕಟ್ಟಲು ನಿಮ್ಮ ಮಾರ್ಗದರ್ಶನ ಮತ್ತು ಸೇವೆ ಅವಶ್ಯಕತೆ ಇದೆ. ಮಹಿಳೆಯರಿಗೆ ಹಾಗೂ ಯುವಕರಿಗೆ ಒಳ್ಳೆಯ ಯೋಜನೆ ಇದೆ. ಶಿಕ್ಷಣ ವ್ಯವಸ್ಥೆಯಲ್ಲೂ ಕೂಡ ಮೊದಲಿಯಾರ್ ಸಮುದಾಯದ ಬೆಂಬಲ ಇದೆ ಎಂದರು.

6500 ಸಾವಿರ ಶಾಲ ಕಟ್ಟಡ ನಿರ್ಮಾಣ ಮಾಡುತ್ತಿದ್ದೇವೆ. ಇದು ದಾಖಲೆ, ಯಾವ ಸರ್ಕಾರ ಕೂಡ ಮಾಡಿಲ್ಲ.ಇದೊಂದು ಕ್ರಾಂತಿ ಕಾರಿ ಹೆಜ್ಜೆ ಇಟ್ಟಿದ್ದೇವೆ. ಅತೀ ಹೆಚ್ಚು ಶುಲ್ಕ ಸಂಗ್ರಹ ಮಾಡುವುದು ಖಾಸಗಿ ಶಾಲೆಗಳು. ಇದಕ್ಕೊಂದು ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಸಂಘ ಸಂಸ್ಥೆಗಳ ಮೂಲ ಬಡ ಜನರಿಗೆ ಶಿಕ್ಷಣ ನೀಡಬೇಕು. ಸಂಘ ಸಂಸ್ಥೆಗಳು ಮುಂದೆ ಬಂದರೆ ಸರ್ಕಾರ ಸಹಾಯ ಮಾಡುತ್ತದೆ ಎಂದರು.

Advertisement

ದುಡಿಮೆಗೆ ಹಾಗೂ ತಂತ್ರಜ್ಞಾನಕ್ಕೆ ಬಹಳ ಮಹತ್ವ ನೀಡುತ್ತೀರಿ. ಮಿಷನರಿ ವಿಚಾರದಲ್ಲಿ ನಿಮ್ಮ ಸಮುದಾಯ ಬಹಳಷ್ಟು ಕೆಲಸ‌ಮಾಡಿದೆ. ನಾನು ಕೂಡ ಈ ಸಮುದಾಯದ ಜೊತೆಗೆ 40 ವರ್ಷದ ಸ್ನೇಹ ಇದೆ. ವಜ್ರ ಮಹೋತ್ಸವ ಆಚರಿಸುತ್ತಿದ್ದು ಈ ಸಮುದಾಯ ಕೂಡ ವಜ್ರದಂತೆ ಗಟ್ಟಿಯಾಗಿದೆ‌ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next