Advertisement

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮುಂಡಾಜೆ ಬಲ್ಯಾರ್‌ ಕಾಪು ಸೇತುವೆ

11:19 PM May 17, 2020 | Sriram |

ಮುಂಡಾಜೆ: ಬೆಳ್ತಂಗಡಿ ತಾ| ಮುಂಡಾಜೆ ಗ್ರಾ.ಪಂ. ವ್ಯಾಪ್ತಿಯ ಸೋಮಂತಡ್ಕದಿಂದ ಕಲ್ಮಂಜ ಮೂಲಕ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಬಲ್ಯಾರ್‌ ಕಾಪು ಸೇತುವೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

Advertisement

ಜಿ.ಪಂ. ನಿಂದ ಬಲ್ಯಾರ್‌ ಕಾಪು ಎಂಬಲ್ಲಿ 40 ಮೀ. ಉದ್ದದ 2 ಮೀ. ಅಗಲದ ಸೇತುವೆ ಮೃತ್ಯುಂಜಯ ನದಿಗೆ ಹಲವಾರು ವರ್ಷದ ಹಿಂದೆ ಅಡ್ಡಲಾಗಿ ಕಟ್ಟಿದ್ದು, ಇದರಲ್ಲಿ  ವಾಹನಗಳು ಹಾಗೂ ಪಾದಚಾರಿಗಳು ಓಡಾಡುತ್ತಾರೆ.

ಕಲ್ಮಂಜ ಗ್ರಾಮಕ್ಕೆ ಹತ್ತಿರದ ಸಂಪರ್ಕ ಕಲ್ಪಿಸುವ ಈ ಸೇತುವೆಗೆ ಕಳೆದ ಮಳೆಗಾಲದಲ್ಲಿ ಭೀಕರ ಪ್ರವಾಹಕ್ಕೆ ಕೊಚ್ಚಿಕೊಂಡು ಹೋದ ಮರಗಳ ಹೊಡೆತದಿಂದ ಕಬ್ಬಿಣದ ಪೈಪ್‌ಗ್ಳಿಂದ ನಿರ್ಮಿಸಿರುವ ಒಂದು ಬದಿಯ ತಡೆಗೋಡೆಯು ಸುಮಾರು 7 ಮೀ. ನಷ್ಟು ತುಂಡಾಗಿ ಹೋಗಿದೆ. ಇದರಿಂದ ಈಗ ಅಷ್ಟು ಜಾಗದಲ್ಲಿ ತಡೆಗೋಡೆ ಇಲ್ಲದೆ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿದೆ. ಒಂದಿಷ್ಟು ಎಚ್ಚರ ತಪ್ಪಿದರೂ ನದಿಗೆ ಬೀಳುವ ಸಾಧ್ಯತೆ ಇದೆ.

ಸಾಮಾನ್ಯ ದಿನಗಳಲ್ಲಿ ಶಾಲಾ ಮಕ್ಕಳು ಹೆಚ್ಚಾಗಿ ಸಂಚರಿಸುವ ಈ ಸೇತುವೆ ಮಳೆಗಾಲದಲ್ಲಿ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಹಾಗಾಗಿ ಶೀಘ್ರ ಸೇತುವೆಯ ತಡೆಗೋಡೆ ದುರಸ್ತಿ ಕೆಲಸ ಆಗಬೇಕೆಂದು ಊರವರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next