Advertisement
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಗರಸಭೆಯಿಂದ ಆಯೋಜಿಸಿದ್ದ ಆಯವ್ಯಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
Related Articles
Advertisement
ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಪ್ರತಿಕ್ರಿಯಿಸಿ, ಅಮೃತ್ ಯೋಜನೆಯಲ್ಲಿ ನಲ್ಲಿಗಳಿಗೆ ಮೀಟರ್ ಅಳವಡಿಸುವುದೇ ಆದ್ಯತೆಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ನಲ್ಲಿಗಳಿಗೆ ಮೀಟರ್ ಹಾಕಿದರೆ ಕಂದಾಯವೂ ಬರುತ್ತದೆ, ಜತೆಗೆ ನೀರು ಪೋಲಾಗುವುದಿಲ್ಲ ಎಂದರು.
ಸದಸ್ಯ ಭಾಸ್ಕರ್ ಮಾತನಾಡಿ, ಪ್ರತಿ ತಿಂಗಳು ಸಾಮಾನ್ಯ ಸಭೆ ನಡೆಸಬೇಕು. ಸ್ಥಾಯಿ ಸಮಿತಿ ರಚನೆಯಾಗಬೇಕು. ಆದರೆ, ಅಧಿಕಾರಿಗಳು ಹಾಗೂ ನಗರಸಭೆ ಅಧ್ಯಕ್ಷರು ಯಾಕೆ ವಿಳಂಬ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಈ ವೇಳೆ ಸದಸ್ಯವೆಂಕಟೇಶ್ ಮಾತನಾಡಲು ಯತ್ನಿಸಿದಾಗ ಕೆಲ ಸದಸ್ಯರು, ನೀವ್ಯಾಕೆ ಮಾತನಾಡುತ್ತಿರಿ, ಅಧ್ಯಕ್ಷರು ಉತ್ತರ ಕೊಡಲಿ ಎಂದು ಆಗ್ರಹಿಸಿದರು. ಈ ವೇಳೆ ಮಾತಿನ ಚಕಮಕಿಯಾಯಿತು.
ಅಧ್ಯಕ್ಷೆ ತಿಪ್ಪಮ್ಮ ಮಾತನಾಡಿ, ಮುಂದೆ, ಪ್ರತಿ ತಿಂಗಳು ಸಭೆ ನಡೆಸೋಣ ಎಂದು ಸಮಾಧಾನಪಡಿಸಿದರು. ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಧ್ಯೆ ಪ್ರವೇಶಿಸಿ ಅಧ್ಯಕ್ಷರಿಗೆ ನಿಯಮಗಳನ್ನು ಅಧಿಕಾರಿಗಳು ತಿಳಿಸಿಕೊಡಬೇಕು. ವೆಂಕಟೇಶ್ ಕೂಡಾ ತಿಳಿಸಿಕೊಡಬಹುದು, ತಪ್ಪೇನಿಲ್ಲ ಎಂದು ಹೇಳಿದರು. ಇದೇ ವೇಳೆ ಪ್ರತಿ ತಿಂಗಳ 1ನೇ ತಾರೀಕು ಸಾಮಾನ್ಯ ಸಭೆ ನಡೆಸಲು ದಿನಾಂಕ ನಿಗದಿಪಡಿಸಲಾಯಿತು. ನಗರಸಭೆ ವ್ಯಾಪ್ತಿಯ ವಿದ್ಯುತ್ ಸಂಬಂಧಿ ಕೆಲಸಗಳಿಗೆ ಪ್ರತ್ಯೇಕವಾಗಿ ಒಬ್ಬ ಇಂಜಿನಿಯರ್ ನೇಮಕ ಮಾಡಿಕೊಳ್ಳಬೇಕು. ವಿದ್ಯುತ್ ಕಂಬ ಸ್ಥಳಾಂತರ ಮತ್ತಿತರೆ ಕೆಲಸಗಳು ವಿಳಂಬವಾಗುತ್ತಿವೆ ಎಂದು ಹೇಳಿದರು. ಈ ಕುರಿತುಸರ್ಕಾರಕ್ಕೆ ಪತ್ರ ಬರೆಯಲು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಆಯುಕ್ತರಿಗೆ ಸೂಚಿಸಿದರು.