Advertisement

ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಲು ಆಗ್ರಹ

01:59 PM Mar 27, 2021 | Team Udayavani |

ಮುಳಬಾಗಿಲು: ನಿಷೇಧದ ನಡುವೆಯೂ ನಗರದ ಅಂಗಡಿ, ಹೋಟೆಲ್‌, ಬೇಕರಿ, ಮಾರುಕಟ್ಟೆಗಳಲ್ಲಿಅತಿ ಹೆಚ್ಚು ಪ್ಲಾಸ್ಟಿಕ್‌ ಬಳಕೆ ಮಾಡುತ್ತಿದ್ದಾರೆ.ಪ್ರತಿನಿತ್ಯ ಉಂಟಾಗುವ ಕಸದಲ್ಲಿ ಶೇ.90ರಷ್ಟುಪ್ಲಾಸ್ಟಿಕ್‌ ಕಂಡು ಬರುತ್ತಿದೆ. ಇದರಿಂದ ಅಧಿಕಾರಿಗಳು ಕಟ್ಟುನಿಟ್ಟಾಗಿ ಪ್ಲಾಸ್ಟಿಕ್‌ ಬಳಕೆಗೆಕಡಿವಾಣ ಹಾಕಬೇಕು ಎಂದು ಸರ್ವಾನುಮತದಿಂದ ಒತ್ತಾಯಿಸಿದರು.

Advertisement

ನಗರದ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ರಿಯಾಜ್‌ ಅಹಮದ್‌ ಅಧ್ಯಕ್ಷತೆಯಲ್ಲಿ ಸಾಮಾನ್ಯಸಭೆ ನಡೆಯಿತು. ನಗರದಲ್ಲಿ ಬೀದಿ ನಾಯಿಗಳು,ಹಂದಿಗಳು ಮತ್ತು ಕೋತಿಗಳ ಉಪಟಳ ಹೆಚ್ಚಾಗಿದೆ.ಇದಕ್ಕೆ ಕಡಿವಾಣ ಹಾಕಬೇಕು ಎಂದು ಸದಸ್ಯಮಹಮದ್‌ ಜಬೀವುಲ್ಲಾ ಒತ್ತಾಯಿಸಿದರು. 15ದಿನಗಳಲ್ಲಿ ಕಡಿವಾಣ ಹಾಕುವುದಾಗಿ ಪೌರಾಯುಕ್ತ ಶ್ರೀನಿವಾಸ್‌ಮೂರ್ತಿ ಸಭೆಗೆ ತಿಳಿಸಿದರು.

ಚಾಲನಾ ಪರವಾನಗಿ ಇಲ್ಲದಿದ್ದರೆ ಕ್ರಮ: ನಗರಸಭೆ ಚಾಲಕರು ವಾಹನಗಳಿಗೆ ತುಂಬಿಸುವಡೀಸೆಲ್‌ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.ಇದಕ್ಕೆ ಕಡಿವಾಣ ಹಾಕಲು ಮೂವರು ಸದಸ್ಯರತಂಡವನ್ನು ಪರಿಶೀಲನೆಗೆ ನಿಯೋಜಿಸಿದರು. ಕೆಲವುವಾಹನ ಚಾಲಕರಿಗೆ ಚಾಲನಾ ಪರವಾನಗಿ ಇಲ್ಲ.ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತೀರ್ಮಾನಿಸಿದರು.

ಕ್ರಿಯಾ ಯೋಜನೆ ತಯಾರಿಸಿ: 2021-22ನೇ ಸಾಲಿನ ಹಣಕಾಸು ಯೋಜನೆಯಡಿ ನಗರಸಭೆಗೆ 2ಕೋಟಿ 71 ಲಕ್ಷ ರೂ., ಅನುದಾನ ಹಂಚಿಕೆಯಾಗಿದೆ.ಸರ್ಕಾರಿ ಮಾರ್ಗಸೂಚಿಗಳಂತೆ ಕ್ರಿಯಾಯೋಜನೆಯನ್ನು ತಯಾರಿಸಿ, ಪ್ರಸ್ತಾವನೆಯನ್ನುಜಿಲ್ಲಾಧಿಕಾರಿಗಳ ಅನುಮೋದನೆಗೆ ಸಲ್ಲಿಸಲುಸಭೆಯಲ್ಲಿ ಚರ್ಚಿಸಲಾಯಿತು. ಎಸ್‌ಎಫ್ಸಿ ಮುಕ್ತನಿಧಿಯಡಿ ನಗರಸಭೆಗೆ 1 ಕೋಟಿ 2 ಲಕ್ಷ ರೂ., ಅನುದಾನ ಹಂಚಿಕೆಯಾಗಿದೆ.

2021-22ನೇ ಸಾಲಿನಿಂದ ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಚಾಲ್ತಿ ಸಾಲಿನ ಮಾರುಕಟ್ಟೆ ದರಗಳಂತೆಆಸ್ತಿ ತೆರಿಗೆ ವಿಧಿಸಿ ಜಾರಿಗೊಳಿಸುವ ಬಗ್ಗೆ ಸಭೆಯಲ್ಲಿಅನುಮೋದನೆಯಾಗುವಂತೆ ಚರ್ಚಿಸಲಾಯಿತು,ನಗರಸಭಾ ವ್ಯಾಪ್ತಿಯ ವಾರ್ಡ್‌ಗಳಿಗೆ ಬೀದಿ ದೀಪಅಳವಡಿಕೆ, ನೀರು ಸರಬರಾಜು, ಕೊಳವೆ ಬಾವಿಗಳ ದುರಸ್ತಿಗೆ ತೀರ್ಮಾನಿಸಿದರು.

Advertisement

ಲಾಕ್‌ಡೌನ್‌ನಿಂದ ಆರ್ಥಿಕ ನಷ್ಟ: ಲಾಕ್‌ಡೌನ್‌ವೇಳೆ ಸಾರ್ವಜನಿಕ ಸಂಚಾರ ನಿಷೇಧಿಸಿದ್ದ ಕಾರಣಆರ್ಥಿಕ ನಷ್ಟವಾಗಿದೆ. ಇದರಿಂದ 2021-22ನೇಸಾಲಿಗೆ ಮಾರುಕಟ್ಟೆ, ಖಾಸಗಿ ಬಸ್‌ ನಿಲ್ದಾಣ,ಸಾರ್ವಜನಿಕ ಶೌಚಾಲಯ ಸುಂಕವನ್ನು ಯಾವುದೇಹರಾಜು ಮೂಲಕ ವಿಲೇವಾರಿ ಮಾಡದೇ ಹಾಗೂಹೆಚ್ಚುವರಿ ಹಣ ಪಾವತಿಸಿಕೊಳ್ಳದೇ ಸಹಕಾರ ನೀಡಲು ತೀರ್ಮಾನಿಸಿದರು.

ಆಯವ್ಯಯ ಮಂಡನೆ: 2021-22ನೇ ಸಾಲಿನಆಯವ್ಯಯ ಅಂದಾಜು ಪಟ್ಟಿಯನ್ನು ಅಧ್ಯಕ್ಷರಿಯಾಜ್‌ ಅಹಮದ್‌ ಮಂಡನೆ ಮಾಡಿದ್ದು, 2021-22ನೇ ಸಾಲಿನಲ್ಲಿ 20,13,434 ರೂ. ಉಳಿಕೆಬಜೆಟ್‌ ಮಂಡನೆಯಾಗಿದೆ. 2021ನೇ ಮಾರ್ಚ್‌ಅಂತ್ಯದ ಪ್ರಾರಂಭಿಕ ಶುಲ್ಕ 3,72,21,099 ರೂ.ಗಳಿದ್ದು, 2021-22ನೇ ಸಾಲಿನ ನಿರೀಕ್ಷಿತ ಆದಾಯ25,00,21,400 ರೂ.ಗಳಾಗಿದ್ದು, ನಿರೀಕ್ಷಿತ ಖರ್ಚು 28,52,29,065 ರೂ.ಗಳಾಗಿರುತ್ತದೆ.

ಸದಸ್ಯ ಡಿ.ಸೋಮಣ್ಣ ನಗರಸಭೆ ಸಭಾಂಗಣದಲ್ಲಿಡಾ.ಬಿ.ಆರ್‌.ಅಂಬೇಡ್ಕರ್‌ ಭಾವ ಚಿತ್ರವನ್ನುಪ್ರತಿಷ್ಠಾಪಿಸಿದರು. ಕೆಲವು ಸದಸ್ಯರು ಡಾ.ಬಿ.ಆರ್‌.ಅಂಬೇಡ್ಕರ್‌ ಜೀವನ ಚರಿತ್ರೆ ಕುರಿತುಮಾತನಾಡಿದರು. ನಗರಸಭೆ ಪೌರಾಯುಕ್ತಜಿ.ಶ್ರೀನಿವಾಸಮೂರ್ತಿ, ಉಪಾಧ್ಯಕ್ಷೆ ಭಾಗ್ಯಮ್ಮ,ಸದಸ್ಯರಾದ ರಾಜಶೇಖರ್‌, ಎಂ.ಪ್ರಸಾದ್‌,ವಜೀರ್‌, ಎಂ.ಜೆ.ಮಲ್ಲಿಕಾರ್ಜುನ, ಶಂಕರ್‌,ಮಹಮದ್‌ ಜಬೀವುಲ್ಲಾ, ಅಕ್ಮಲ್‌ಬೇಗ್‌, ಪದ್ಮಜ ಹಾಜರಿದ್ದರು.

ನೀರಿನ ಸಮಸ್ಯೆ ಹೆಚ್ಚಾಗದಂತೆ ಎಚ್ಚರವಹಿಸಿ :

ಬೇಸಿಗೆ ಪ್ರಾರಂಭವಾಗಿದೆ. ಇದರಿಂದ ನೀರಿನ ಸಮಸ್ಯೆ ಹೆಚ್ಚಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಶಾಸಕ ಎಚ್‌.ನಾಗೇಶ್‌ ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು. ಎಲ್ಲಾ ವಾರ್ಡ್‌ಗಳಿಗೂ ಅಧ್ಯಕ್ಷ ಹಾಗೂ ಆಯುಕ್ತರು ಭೇಟಿ ನೀಡಿ, ಅಲ್ಲಿ ನೀರಿನ ಸಮಸ್ಯೆ ಸೇರಿದಂತೆ ಮೂಲಸೌಲಭ್ಯಗಳ ಕೊರತೆ ಕುರಿತು ವರದಿ ನೀಡಬೇಕು. ಯಾವುದೇ ವಾರ್ಡ್  ನಲ್ಲಿ ನೀರಿನ ಅಭಾವ ಇದ್ದರೂ ಸಾರ್ವಜನಿಕರು ನಗರಸಭೆ ಸದಸ್ಯರಿಗೆ ತಿಳಿಸಿದರೆ, ಕೂಡಲೇ ಹೊಸ ಬೋರ್‌ವೆಲ್‌ ಕೊರೆಸಲಾಗುವುದು ಎಂದು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next