Advertisement

ಪೌರಕಾರ್ಮಿಕ ಅನಧಿಕೃತ ಗೈರುಹಾಜರಿಗೆ ಶಿಸ್ತುಕ್ರಮ ಅನಿವಾರ್ಯ: ಮಧುರಾ ಎಚ್ಚರಿಕೆ

05:51 PM Mar 01, 2022 | Suhan S |

ಸಾಗರ: ಇಲ್ಲಿನ ನಗರಸಭೆ ಆವರಣಕ್ಕೆ  ಮಂಗಳವಾರ ಬೆಳಗಿನ ಅವಧಿಯಲ್ಲಿ ದಿಢೀರ್ ಭೇಟಿ ನೀಡಿದ ನಗರಸಭಾಧ್ಯಕ್ಷೆ ಮಧುರಾ ಶಿವಾನಂದ್ ಪೌರಕಾರ್ಮಿಕರ ಹಾಜರಿ ದಾಖಲೆ ಪರಿಶೀಲನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪೌರಕಾರ್ಮಿಕರು ನಗರಸಭೆಯ ಅಧಿಕಾರಿಗಳಿಗೆ ಪೂರ್ವ ಮಾಹಿತಿ ನೀಡದೆ ಗೈರಾಗುತ್ತಿದ್ದಾರೆ ಎಂಬ ಮಾಹಿತಿ ಇದೆ. ರಜೆ ಪತ್ರ ನೀಡದೆ ಹಾಗೂ ಮಾಹಿತಿ ನೀಡದೆ ಗೈರಾದವರ ಮೇಲೆ ಶಿಸ್ತುಕ್ರಮ  ಅನಿವಾರ‍್ಯ. ಅನಾರೋಗ್ಯ ಅಥವಾ ತುರ್ತು ಕಾರ‍್ಯ ಇದ್ದ ಸಂದರ್ಭ ಮುಂಚಿತವಾಗಿ ತಿಳಿಸಬೇಕು. ಬದಲಿ ವ್ಯವಸ್ಥೆ ಮಾಡಿಕೊಡಬೇಕು. ಅನಧಿಕೃತ ಗೈರಾದವರಿಗೆ ಸವಲತ್ತು ನೀಡಲಾಗುವದಿಲ್ಲ ಎಂದರು.

ಪೌರಕಾರ್ಮಿಕರು ಅನಧಿಕೃತ ಗೈರಾಗುವ ಬಗ್ಗೆ ಪ್ಯಾಕೇಜ್ ಗುತ್ತಿಗೆದಾರರು ಗಮನ ಹರಿಸಬೇಕು. ಆಕಸ್ಮಿಕ ಅವಘಢ ಸಂಭವಿಸಿದರೆ ಅನಧಿಕೃತವಾಗಿ ಬದಲಿ ವ್ಯವಸ್ಥೆಯಲ್ಲಿ ಕರ್ತವ್ಯಕ್ಕೆ ಹಾಜರಾದ ಪೌರಕಾರ್ಮಿಕರಿಗೆ ಸೂಕ್ತ ಸೌಲಭ್ಯ ನೀಡಲು ಸಾಧ್ಯವಾಗುವುದಿಲ್ಲ. ನಗರ ವಿಸ್ತಾರವಾಗಿದ್ದು, ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇದೆ. ಜತೆಗೆ ಅನಧಿಕೃತವಾಗಿ ಗೈರಾದರೆ ನಗರ ನೈರ್ಮಲ್ಯ ಕಾರ‍್ಯಕ್ಕೆ ಅಡಚಣೆಯಾಗುತ್ತದೆ ಎಂದರು.

ಪರಿಸರ ವಿಭಾಗದ ರಚನಾ, ಪೌರಕಾರ್ಮಿಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next