Advertisement
ಸಾಮಾನ್ಯವಾಗಿ ದೇಹದ ತೂಕ, ಗಾತ್ರ, ಆಕಾರ ಎತ್ತರ ಮೊದಲಾದವು ನಮ್ಮ ವಂಶವಾಹಿನಿಗಳೇ ನಿರ್ಧರಿಸುತ್ತವೆ.ಒಂದು ವೇಳೆ ನೀವು ಚಿಕ್ಕಂದಿನಿಂದಲೇ ಸಣಕಲರಾಗಿದ್ದರೆ, ನಿಮ್ಮ ವಂಶವಾಹಿನಿಗಳು ಸಣಕಲಾಗಿರುವಂತೆಯೇ ದೇಹವನ್ನು ನಿಯಂತ್ರಿಸುತ್ತಿದ್ದು, ನಿಮ್ಮ ಯಾವುದೇ ಪ್ರಯತ್ನಗಳು ಹೆಚ್ಚಿನ ಫಲ ನೀಡಲಾರವು. ಆದರೆ ಈ ವಂಶವಾಹಿನಿಯ ಮಾಹಿತಿಗಳು ದೇಹದ ಇತರ ಎಲ್ಲ ಅಂಶಗಳನ್ನು ನಿರ್ಧರಿಸಿದರೂ ಸ್ನಾಯುಗಳನ್ನು ಮಾತ್ರ ಹೆಚ್ಚಿಸಿ ಹುರಿಗಟ್ಟಿಸಬಹುದು. ತನ್ಮೂಲಕ ದೇಹದ ಗಾತ್ರ ಹಾಗೂ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಹಾಗಾಗಿ ಸಣಕಲು ವ್ಯಕ್ತಿಗಳೂ ಸೂಕ್ತ ವ್ಯಾಯಾಮ, ಆಹಾರಾಭ್ಯಾಸಗಳ ಮೂಲಕ ತಮ್ಮ ತೂಕವನ್ನು ಹೆಚ್ಚಿಸಿಕೊಳ್ಳಬಹುದು.
ಉದ್ವೇಗವನ್ನು ತಡೆದುಕೊಳ್ಳಿ
ಸಣಕಲು ವ್ಯಕ್ತಿಗಳ ತೂಕ ಅತಿ ಕಡಿಮೆ ಇದ್ದು ಯಾವುದೇ ಕಠಿನ ಕಾರ್ಯ ಮಾಡಲು ಹೋದಾಗ ಇದು ತನ್ನಿಂದ ಸಾಧ್ಯವೇ ಎಂಬ ಅಳುಕು ಮೂಡಿರುತ್ತದೆ. ಉದ್ದೇಶ ಒಳ್ಳಯದೇ ಇದ್ದರೂ, ಪ್ರಾರಂಭವನ್ನು ಎಲ್ಲಿಂದಾದರೂ ಆರಂಭಿಸಲೇಬೇಕಲ್ಲವೇ? ಅದಕ್ಕಾಗಿ ತಮ್ಮ ತೂಕದ ಬಗ್ಗೆ ಅಳುಕು ಮತ್ತು ಕೀಳರಿಮೆಯನ್ನು ಮೊದಲು ತೊಡೆದುಹಾಕಬೇಕು.
Related Articles
ಸ್ನಾಯುಗಳ ಬೆಳವಣಿಗೆ ಕನಿಷ್ಠ ಅಥವಾ ಅಗತ್ಯಕ್ಕೆ ತಕ್ಕಷ್ಟು ಮಾತ್ರವೇ ಆಗುತ್ತದೆ. ವಾಸ್ತವವಾಗಿ ವ್ಯಾಯಮವೆಂದರೆ ಸ್ನಾಯುಗಳನ್ನು ಕನಿಷ್ಠ ಅಗತ್ಯಕ್ಕೂ ಹೆಚ್ಚಿನ ಅಗತ್ಯಕ್ಕೆ ಒಳಪಡಿಸಿ ಮೆದುಳಿಗೆ ಇಲ್ಲಿ ಸ್ನಾಯುಗಳ ಬೆಳವಣಿಗೆಯ ಅಗತ್ಯವಿದೆ ಎಂದು ಸೂಚಿಸುವುದೇ ಆಗಿದೆ. ಇದಕ್ಕಾಗಿ ಸುಮಾರು ಮೂರರಿಂದ ಐದು ಸೆಟ್ ಬೆಂಚ್ ಪ್ರಸ್ ಬಳಸಿ ದೇಹದ ಪ್ರಮುಖ ಸ್ನಾಯುಗಳನ್ನು ಕೆಲಸಕ್ಕೆ ಹಚ್ಚಬೇಕು. ಕ್ವಾಡ್ರಿಸೆಪ್ಸ್ ಸ್ನಾಯುಗಳಿಗಾಗಿ ಸ್ಕ್ವಾಟ್ ವ್ಯಾಯಾಮವನ್ನು ಮಾಡಬಹುದು.
Advertisement
ದಿನವಿಡೀ ಸಾಕಷ್ಟು ನೀರು ಕುಡಿಯುತ್ತಿರಿ
ನೀರಿನ ಅಗತ್ಯತೆಯನ್ನು ಬೇರಾವ ಆಹಾರವೂ ಪೂರೈಸಲು ಸಾಧ್ಯವಿಲ್ಲ. ನೀರು ಕಡಿಮೆ ಕುಡಿಯು ತ್ತಿದ್ದಿರೋ ಅದನ್ನು ಮರೆತು ಬಿಟ್ಟು, ಈಗ ನೀರಡಿ ಕೆಯಾಗದಿದ್ದರೂ ಸರಿ, ಪ್ರತಿ ಗಂಟೆಗೊಮ್ಮೆ ಲೋಟವಾದರೂ ನೀರು ಕುಡಿಯುತ್ತಿರಬೇಕು. ಏಕೆಂದರೆ ಸ್ನಾಯುಗಳು ಸುಮಾರು ಎಪ್ಪತ್ತು ಶೇಕಡ ನೀರಿನಿಂದ ಕೂಡಿವೆ. ಸಣಕಲರಲ್ಲಿ ಸ್ನಾಯುಗಳು ಕಡಿಮೆ ಇರುವ ಕಾರಣ ಇವರಿಗೆ ನೀರಿನ ಅಗತ್ಯತೆಯೂ ಕಡಿಮೆಯೇ ಇದ್ದು ನೀರಡಿಕೆಯೂ ಕಡಿಮೆಯೇ ಇರುತ್ತದೆ. ಅದ್ದರಿಂದ ದಿನವಿಡೀ ಕೊಂಚಕೊಂಚವಾಗಿ ನೀರು ಕುಡಿಯುವ ಅಭ್ಯಾಸ ಮಾಡಿಕೊಡಿಕೊಳ್ಳಿ. – ಕಾರ್ತಿಕ್ ಚಿತ್ರಾಪುರ