ಚೆನ್ನೈ : ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಅಸಂಸದೀಯ ಪದ ಬಳಕೆ ಮಾಡಿದ್ದಕ್ಕಾಗಿ ಡಿ ಎಮ್ ಕೆ ಸಂಸದ ದಯಾನಿಧಿ ಮಾರನ್ ಅವರ ವಿರುದ್ಧ ಎಐಎಡಿಎಂಕೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಜಯಲಲಿತಾ ಹಾಗೂ ಪ್ರಧಾನಿಯವರ ವಿರುದ್ಧ ನಿಂದನೀಯ ಹಾಗೂ ಅಸಂಸದೀಯ ಪದಗ್ಳನ್ನು ಬಳಕೆ ಮಾಡಿ ಅವರ ವ್ಯಕ್ತಿತ್ವಕ್ಕೆ ದಯಾನಿಧಿ ಧಕ್ಕೆ ತರುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಆಯೋಗಕ್ಕೆ ಎಐಎಡಿಎಂಕೆ ದೂರು ಸಲ್ಲಿಸಿದೆ.
ಎರಡು ವರ್ಷಗಳ ಹಿಂದೆ ಎಐಎಡಿಎಂಕೆ ಸಚಿವ ಕೆ. ರಾಜೇಂದ್ರ ಬಾಲಜಿ ಅವರು ಪ್ರಾಸಕ್ಕಾಗಿ ಮೋದಿ ಈಸ್ ಅವರ್ ಡ್ಯಾಡಿ ಎಂದು ಹೇಳಿದ್ದನ್ನು ಉಲ್ಲೇಖಿಸಿ ಮಾರ್ಚ 28 ರಂದು ಕಿನಾತುಕಡವ್ ಚುನಾವಣಾ ಕ್ಷೆತ್ರದಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ದಯಾನಿಧಿ ಮಾರನ್, , ಜಯಲಲಿತಾ ಅವರು ಅಮ್ಮ, ಮೋದಿ ಅಪ್ಪ ಅಂತೆ. ಇದು ಯಾವ ರೀತಿಯ ಸಂಬಂಧವೆಂದು ಕೇಳಿದ್ದರು ಎಂದು ಎಐಎಡಿಎಂಕೆ ಜಂಟಿ ಕಾರ್ಯದರ್ಶಿ ಆರ್ ಎಂ ಬಾಬು ಮುರುಗವೇಲ್ ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಹಾಗೂ ಜಯಲಲಿತಾ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿದ ದಯಾನಿಧಿ ಮಾರನ್ ಅಪರಾಧ ಪ್ರಕರಣವನ್ನು ದಾಖಲಿಸಬೇಕು. ಚುನಾವಣಾ ಪ್ರಚಾರದಲ್ಲಿ ಅವರು ಭಾಗಿಯಾಗದಂತೆ ನಿಷೇಧ ಹೇರಬೇಕು ಎಂದು ಮುರುಗವೇಲ್ ಹೇಳಿದ್ದಾರೆ.
ಓದಿ : ರಾಜ್ಯದಲ್ಲಿ ಯಾವುದೇ ಲಾಕ್ ಡೌನ್, ಕರ್ಪ್ಯೂ ಇಲ್ಲ: ಸರ್ಕಾರದ ಸ್ಪಷ್ಟ