Advertisement

Mumbai: ಝೀಕಾ ರೋಗಿ ಪತ್ತೆ

12:02 AM Aug 24, 2023 | Team Udayavani |

ಮುಂಬಯಿ: ಮುಂಬಯಿ ಮಹಾನಗರ ಪಾಲಿಕೆಯ ಎಂ ವೆಸ್ಟ್‌ ವಾರ್ಡ್‌ ವ್ಯಾಪ್ತಿಯಲ್ಲಿ ಝೀಕಾ ರೋಗಿಯೊಬ್ಬರು ಪತ್ತೆಯಾಗಿದ್ದಾರೆ. ರೋಗಿಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ರೋಗಿ ಪತ್ತೆಯಾದ ಪ್ರದೇಶದ ನಾಗರಿಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

Advertisement

ಮುಂಬಯಿ ಮಹಾನಗರ ಪಾಲಿಕೆಯ ಎಂ ವೆಸ್ಟ್‌ವಿಭಾಗದ ಕಚೇರಿಯಲ್ಲಿರುವ ಚೆಂಬೂರು ಪ್ರದೇಶದಲ್ಲಿ ವೃದ್ಧರೊಬ್ಬರು ಝೀಕಾ ಸೋಂಕಿಗೆ ಒಳಗಾಗಿರುವುದು ಗಮನಕ್ಕೆ ಬಂದಿದೆ. ರೋಗಿ ಯನ್ನು ತತ್‌ಕ್ಷಣವೇ ಮನಪಾ ಆಸ್ಪತ್ರೆಗೆ ದಾಖ ಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ವ್ಯಕ್ತಿಯ ಸ್ಥಿತಿ ಈಗ ಸ್ಥಿರವಾಗಿದೆ. ಈ ವ್ಯಕ್ತಿಯ ಮಾಹಿತಿ ಪಡೆ ಯಲಾಗಿದ್ದು, ಆತನ ಕುಟುಂಬದ ಕೆಲವರು ವಿದೇ ಶದಿಂದ ಬಂದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೆ ಒಳ ಪಡಿಸಲಾಗಿದೆ. ಅದೇ ರೀತಿ ಈ ವಯೋವೃದ್ಧರು ವಾಸಿಸುವ ಪ್ರದೇಶದ ನಾಗರಿಕರು ಮತ್ತು ಸುತ್ತ ಮುತ್ತಲಿನ ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ ಝೀಕಾ ಸೋಂಕು ಪತ್ತೆಯಾಗಿಲ್ಲ ಎಂದು ಮುಂಬಯಿ ಮಹಾನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮೊದಲ ಝೀಕಾ ಪ್ರಕರಣವು 2021ರ ಜುಲೈಯಲ್ಲಿ ಪುಣೆ ಜಿಲ್ಲೆಯ ಪುರಂದರ್‌ ತಾಲೂಕಿನ ಬೆಲ್ಸರ್‌ನಲ್ಲಿ ವರದಿಯಾಗಿದ್ದು, 50 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ತಗಲಿತ್ತು.

Advertisement

Udayavani is now on Telegram. Click here to join our channel and stay updated with the latest news.

Next