Advertisement
ಅಪರಾಹ್ನ 2ರಿಂದ ಉದ್ಘಾಟನ ಸಮಾರಂಭ ಜರಗಲಿದೆ. ಅನಂತರ ಗಾನ ವೈಭವ ಮತ್ತು ನಾಟ್ಯ ವೈಭವ ಜರಗಲಿದೆ. ಸಂಜೆ ನಡೆಯಲಿರುವ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಎಂ. ಆರ್. ಜಿ. ಗ್ರೂಪ್ ಬೆಂಗಳೂರು ಇದರ ಮುಖ್ಯ ಆಡಳಿತ ನಿರ್ದೇಶಕ ಪ್ರಕಾಶ್ ಕೆ. ಶೆಟ್ಟಿ ಅವರು ವಹಿಸಲಿದ್ದಾರೆ. ತಾರಾ ಆಕರ್ಷಣೆಯಾಗಿ ಬಾಲಿವುಡ್ ನಟ ಸುನಿಲ್ ವಿ. ಶೆಟ್ಟಿ, ಗೌರವ ಅತಿಥಿಯಾಗಿ ಚರಿಷ್ಮಾ ಬಿಲ್ಡರ್ನ ಮುಖ್ಯ ಆಡಳಿತ ನಿರ್ದೇಶಕ ಸುಧೀರ್ ವಿ. ಶೆಟ್ಟಿ ಅವರು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಪ್ರಸಿದ್ಧ ಯಕ್ಷಗಾನ ಭಾಗವತ ನಾದಲೋಲ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರಿಗೆ ಸಂಸ್ಥೆಯ ಪ್ರತಿಷ್ಠಿತ ಯಕ್ಷಧ್ರುವ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು. ತಾಳಮದ್ದಳೆಯ ಅರ್ಥದಾರಿ ಚಿಕ್ಕಯ್ಯ ಶೆಟ್ಟಿ, ಯಕ್ಷಗಾನ ವಿಮರ್ಶಕ, ಅರ್ಥದಾರಿ ಕೊಲ್ಯಾರು ರಾಜು ಶೆಟ್ಟಿ, ಚೆಂಡೆವಾದಕ ಕೆ. ಕೆ. ದೇವಾಡಿಗ, ಪ್ರಸಂಗಕರ್ತ ಎಂ. ಟಿ. ಪೂಜಾರಿ, ಭಾಗವತ ದೇವಲ್ಕುಂದ ಭಾಸ್ಕರ ಶೆಟ್ಟಿ, ವೇಷಧಾರಿ ಭೋಜ ಬಂಗೇರ ಇವರನ್ನು ಪ್ರತಿಷ್ಠಿತ ಯಕ್ಷಧ್ರುವ ಕಲಾ ಗೌರವ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು.
Related Articles
ಸಮಾರೋಪ ಸಮಾರಂಭದ ಬಳಿಕ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ವಿರೋಚನ ಕಾಳಗ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ, ಸತ್ಯನಾರಾಯಣ ಪುಣಿಚಿತ್ತಾಯ, ಗಣೇಶ್ ಹೆಬ್ರಿ ಹಾಗೂ ಚೆಂಡೆ-ಮದ್ದಳೆಯಲ್ಲಿ ಪದ್ಮನಾಭ ಉಪಾಧ್ಯಾಯ, ಚೈತನ್ಯ ಕೃಷ್ಣ ಪದ್ಯಾಣ, ಗುರುಪ್ರಸಾದ್ ಬೊಳಿಂಜಡ್ಕ, ಪ್ರಶಾಂತ್ ಶೆಟ್ಟಿ ವಗೆನಾಡು ಇವರು ಸಹಕರಿಸಲಿದ್ದಾರೆ. ಕಲಾವಿದರಾಗಿ ಉಜಿರೆ ಅಶೋಕ್ ಭಟ್, ರಾಧಾಕೃಷ್ಣ ನಾವಡ, ಸರಪಾಡಿ ಅಶೋಕ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಹರಿನಾರಾಯಣ ಭಟ್ ಎಡನೀರು, ಶಶಿಧರ ಕುಲಾಲ್ ಕನ್ಯಾನ, ಮಾಧವ ಕೊಳತ್ತಮಜಲು, ಪ್ರಜ್ವಲ್ ಕುಮಾರ್, ಹರಿರಾಜ್, ಲೋಕೇಶ್ ಮುಚ್ಚಾರು, ರಾಜೇಶ್, ರಾಹುಲ್, ಅರುಣ್ ಜಾರ್ಕಳ, ಪೂರ್ಣೇಶ್ ಆಚಾರ್ಯ, ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಅಕ್ಷಯ್ ಮಾರ್ನಾಡ್ ಅವರು ಪಾಲ್ಗೊಳ್ಳಲಿದ್ದಾರೆ.
Advertisement
ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮುಂಬಯಿ ಘಟಕದ ಗೌರವಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ ಅವರ ಮಾರ್ಗದರ್ಶನದಲ್ಲಿ, ಉಪಾಧ್ಯಕ್ಷರಾದ ಕೈರಬೆಟ್ಟು ವಿದ್ವಾನ್ ವಿಶ್ವನಾಥ್ ಭಟ್, ಉಳೂ¤ರು ಮೋಹನ್‌ದಾಸ್ ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ಅಶೋಕ್ ಪಕ್ಕಳ, ಸುರೇಶ್ ಬಿ. ಶೆಟ್ಟಿ ಮರಾಠ, ಸಂಚಾಲಕರುಗಳಾದ ಐಕಳ ಗಣೇಶ್ ಶೆಟ್ಟಿ, ಅಶೋಕ್ ಶೆಟ್ಟಿ ಪೆರ್ಮುದೆ, ಗೌರವ ಕಾರ್ಯದರ್ಶಿ ಕರ್ನೂರು ಮೋಹನ್ ರೈ, ಕೋಶಾಧಿಕಾರಿಗಳಾದ ಬಾಬು ಎನ್. ಶೆಟ್ಟಿ ಪೆರಾರ, ಸಿಎ ಸುರೇಂದ್ರ ಶೆಟ್ಟಿ, ಜೊತೆ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅಜೆಕಾರು ಹಾಗೂ ಸರ್ವ ಸದಸ್ಯರ ನೇತೃತ್ವದಲ್ಲಿ ಸಮಾರಂಭವು ಜರಗಲಿದೆ. ಕಲಾಭಿಮಾನಿಗಳು ಪಾಲ್ಗೊಂಡು ಸಮಾರಂಭದ ಯಶಸ್ಸಿಗೆ ಸಹಕರಿಸುವಂತೆ ಮುಂಬಯಿ ಘಟಕದ ಪ್ರಕಟನೆ ತಿಳಿಸಿದೆ.