Advertisement

ಹಾಜಿ ಅಲಿ ದರ್ಗಾದಲ್ಲಿ ಎತ್ತರದ ಧ್ವಜಸ್ತಂಭ ಸ್ಥಾಪನೆ

07:13 PM Sep 08, 2022 | Team Udayavani |

ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿರುವ ಪ್ರಖ್ಯಾತ ಹಾಜಿ ಅಲಿ ದರ್ಗಾದಲ್ಲಿ ಜಗತ್ತಿನ ಅತಿ ಎತ್ತರದ ಧ್ವಜಸ್ತಂಭ ಸ್ಥಾಪಿಸಲು ಯೋಜನೆ ಸಿದ್ಧವಾಗಿದೆ.

Advertisement

ಇದರ ಮೇಲೆ ಭಾರತದ ರಾಷ್ಟ್ರ ಧ್ವಜ ಹಾರಲಿದೆ. ಪ್ರಸ್ತುತ ದರ್ಗಾದ ಪುನರ್‌ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಜಗತ್ತಿನ ಅತಿ ಎತ್ತರದ ಧ್ವಜಸ್ತಂಭದ ಉದ್ಘಾಟನೆಗೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲಾಗುವುದು ಎಂದು ಹಾಜಿ ಅಲಿ ದರ್ಗಾ ಟ್ರಸ್ಟ್‌ ತಿಳಿಸಿದೆ.

“ಪ್ರಸ್ತುತ ಈಜಿಪ್ಟ್ನ ಕೈರೋದಲ್ಲಿರವ ಧ್ವಜಸ್ತಂಭ ಪ್ರಪಂಚದ ಅತಿ ಎತ್ತರದ ಧ್ವಜಸ್ತಂಭವಾಗಿದೆ. ಇದರ ಎತ್ತರ 201.952 ಮೀಟರ್‌ ಇದೆ. ಹಾಜಿ ಅಲಿ ದರ್ಗಾದಲ್ಲಿ ಜಗತ್ತಿನ ಅತಿ ಎತ್ತರದ ಧ್ವಜಸ್ತಂಭದ ನಿರ್ಮಾಣಕ್ಕೆ ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದೆ ಎಂದು ದರ್ಗಾದ ಟ್ರಸ್ಟಿ ಸೊಹೇಲ್‌ ಖಂಡ್ವಾನಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next