ಮುಂಬೈ: 53 ವರ್ಷದ ಮಹಿಳೆಯೊಬ್ಬರ ದೇಹದ ಕೊಳೆತ ಭಾಗಗಳು ಶೌಚಾಗಾರ ಮತ್ತು ನೀರಿನ ಟ್ಯಾಂಕ್ ನಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬುಧವಾರ (ಮಾರ್ಚ್ 15) 22 ವರ್ಷದ ಯುವತಿಯನ್ನು ಬಂಧಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಈ ಚಿತ್ರದ ಯಶಸ್ಸಿನಿಂದ ‘ಬಾಯ್ಕಾಟ್ ಸಂಸ್ಕೃತಿ’ ಕೊನೆಗೊಳ್ಳಬಹುದು: ಶಬಾನಾ ಅಜ್ಮಿ
ಮೃತ ಮಹಿಳೆಯನ್ನು ವೀಣಾ ಪ್ರಕಾಶ್ ಜೈನ್ (53 ವರ್ಷ) ಎಂದು ಗುರುತಿಸಲಾಗಿದೆ. ಶಂಕಿತ ಆರೋಪಿ ಮಹಿಳೆಯ ಪುತ್ರಿ (22ವರ್ಷದ ಯುವತಿ)ಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶವದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹರಿತವಾದ ಆಯುಧದಿಂದ ಮಹಿಳೆಯ ಕೈ ಮತ್ತು ಕಾಲುಗಳನ್ನು ಕತ್ತರಿಸಿ ಹಾಕಲಾಗಿದೆ. ಕಪಾಟಿನೊಳಗೆ ಮಹಿಳೆಯ ಶವವನ್ನು ಪ್ಲ್ಯಾಸ್ಟಿಕ್ ನಿಂದ ಸುತ್ತಿ ಇಡಲಾಗಿತ್ತು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಪ್ರಕರಣದ ಬಗ್ಗೆ ಕಾಲಾಚೌಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ. ಘಟನೆ ಕುರಿತು ಪೊಲೀಸರು ಮೃತಳ ಮಗಳನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.