ಮುಂಬೈ: ಸಂಚಾರಿ ನಿಯಮ ಉಲ್ಲಂಘಿಸಿದರೆ, ಕೊರೊನಾ ಮುನ್ನೆಚ್ಚರಿಕೆ ಮರೆತರೆ ದಂಡ ಹಾಕುವುದನ್ನು ನೋಡಿರುತ್ತೀರಿ. ಆದರೆ ಮಹಾರಾಷ್ಟ್ರದ ಮುಂಬೈನ ಕಾಂಪ್ಲೆಕ್ಸ್ ಒಂದು ಬೀದಿ ನಾಯಿಗಳಿಗೆ ಅನ್ನ ಹಾಕಿದವರಿಗೆ ಲಕ್ಷ ಲಕ್ಷ ರೂ. ದಂಡ ಹಾಕಲಾರಂಭಿಸಿದೆ!
ನವಿ ಮುಂಬೈನ ಎನ್‌ಆರ್‌ಐ ಕಾಂಪ್ಲೆಕ್ಸ್‌ನಲ್ಲಿ ಸುಮಾರು 40 ಬಿಲ್ಡಿಂಗ್‌ಗಳಿದ್ದು, ನೂರಾರು ಅಪಾರ್ಟ್‌ಮೆಂಟ್ ಗಳಿವೆ. ಈ ಕಾಂಪ್ಲೆಕ್ಸ್ ಆವರಣದಲ್ಲಿ ಬೀದಿ ನಾಯಿಗಳಿಗೆ ಅನ್ನ ಹಾಕಿದರೆ ಒಂದು ದಿನಕ್ಕೆ 5000 ರೂ. ದಂಡ ವಿಧಿಸಲಾಗುತ್ತಿದೆ.
ಇಲ್ಲಿನ ನಿವಾಸಿ ಅಂಶು ಸಿಂಗ್ ಎಂಬ ಮಹಿಳೆ 2021ರ ಜುಲೈನಿಂದ ಪ್ರತಿದಿನ ಬೀದಿನಾಯಿಗಳಿಗೆ ಅನ್ನ ಹಾಕುತ್ತಿದ್ದರು.
ಇದನ್ನೂ ಓದಿ:ದೆಹಲಿ: ಮಹಿಳೆಯನ್ನು ಸ್ಕೂಟರ್ ನಲ್ಲೇ ರಸ್ತೆಯುದ್ದಕ್ಕೂ ಎಳೆದೊಯ್ದ ಕಳ್ಳರು
ಹೀಗಾಗಿ ಅವರಿಗೆ 8 ಲಕ್ಷ ರೂ. ದಂಡ ವಿಧಿಸಲಾಗಿದೆ. ಹಾಗೆಯೇ ಅದೇ ಕಾಂಪ್ಲೆಕ್ಸ್‌ನ ಮತ್ತೊಬ್ಬ ಮಹಿಳೆ ಲೀನಾ ವರ್ಮಾ ಅವರ ದಂಡದ ಮೊತ್ತ 6 ಲಕ್ಷ ರೂ. ದಾಟಿದೆಯಂತೆ.