Advertisement

ಖರ್ಚಿಲ್ಲದೆ ಮುಂಬಯಿಯಿಂದ ಅಬುಧಾಬಿಗೆ ಹೋದ!

11:45 PM Dec 14, 2021 | Team Udayavani |

ಮುಂಬಯಿ: ವಿಮಾನಗಳಿಗೆ ಲಗೇಜ್‌ ತುಂಬುವ ಲೋಡರ್‌ ಒಬ್ಬ ಖರ್ಚಿಲ್ಲದೆ ಮುಂಬಯಿಯಿಂದ ಅಬುಧಾಬಿಗೆ ಹೋಗಿ ಬಂದಿದ್ದಾನೆ! ಹೌದು.

Advertisement

ರವಿವಾರ ಮುಂಬಯಿಯಿಂದ ಅಬುಧಾಬಿಗೆ ಹೊರಟಿದ್ದ ವಿಮಾನಕ್ಕೆ ಲಗೇಜ್‌ ತುಂಬಲೆಂದು ಆತ ವಿಮಾನದ ಸರಕು ಕಂಪಾರ್ಟ್‌ಮೆಂಟ್‌ಗೆ ತೆರಳಿದ್ದಾನೆ. ಆಗ ಅವನಿಗೆ ನಿದ್ರೆ ಬಂದಿದ್ದು ಅಲ್ಲೇ ಮಲಗಿಬಿಟ್ಟಿದ್ದಾನೆ.

ಇದನ್ನರಿಯದ ಪೈಲಟ್‌, ಆ ಕಂಪಾರ್ಟ್‌ ಮೆಂಟ್‌ ಬಾಗಿಲು ಮುಚ್ಚಿ, ಅಬುಧಾಬಿಗೆ ವಿಮಾನ ಹಾರಿಸಿದ್ದಾನೆ. ವಿಮಾನ ಲ್ಯಾಂಡ್‌ ಆದ ಮೇಲೆ ಈ ವಿಚಾರ ಬೆಳಕಿಗೆ ಬಂದಿದ್ದು, ಲೋಡರ್‌ ಆರೋಗ್ಯವಾ ಗಿರುವುದಾಗಿ ಹೇಳಲಾಗಿದೆ. ಅದೇ ವಿಮಾನದಲ್ಲಿ ಆತನನ್ನು ಪ್ರಯಾಣಿಕನಾಗಿ ವಾಪಸ್‌ ಮುಂಬಯಿಗೆ ಕಳುಹಿಸಿಕೊಡಲಾಗಿದೆ.

ಇದನ್ನೂ ಓದಿ:ರಾಷ್ಟ್ರಪತಿ ರಾಮನಾಥ ಕೋವಿಂದ್‌ 3 ದಿನಗಳ ಕಾಲ ಬಾಂಗ್ಲಾ ಪ್ರವಾಸ

Advertisement

Udayavani is now on Telegram. Click here to join our channel and stay updated with the latest news.

Next