Advertisement

ಕೊನೆಗೂ ಪಂದ್ಯ ಆರಂಭ: ಭಾರತ ತಂಡದಲ್ಲಿ 3 ಬದಲಾವಣೆ, ಕಿವೀಸ್ ಗೂ ಹೊಸ ನಾಯಕ

11:37 AM Dec 03, 2021 | Team Udayavani |

ಮುಂಬೈ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಇಂದು ಮುಂಬೈನ ವಾಂಖಡೆ ಅಂಗಳದಲ್ಲಿ ಆರಂಭವಾಗಿದೆ. ಒದ್ದೆಪಿಚ್ ಕಾರಣದಿಂದ ತಡವಾಗಿ ಟಾಸ್ ಪ್ರಕ್ರಿಯೆ ನಡೆದಿದೆ. ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ನಡೆಸಲು ತೀರ್ಮಾನಿಸಿದೆ.

Advertisement

ಗಾಯಗೊಂಡಿರುವ ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ ಮತ್ತು ಇಶಾಂತ್ ಶರ್ಮಾ ತಂಡದಿಂದ ಹೊರಬಿದ್ದಿದ್ದಾರೆ. ಕಾನ್ಪುರ ಟೆಸ್ಟ್ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಆಗಮಿಸಿದ್ದಾರೆ.

ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಅವರು ಗಾಯದಿಂದ ಹೊರಬಿದ್ದಿದ್ದು, ಟಾಮ್ ಲ್ಯಾಥಂ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

ಇದನ್ನೂ ಓದಿ:1963ರಲ್ಲೇ ಬಂದಿತ್ತು “ಒಮಿಕ್ರಾನ್‌ ವೇರಿಯಂಟ್‌’!

ಕಾನ್ಪುರ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಿತ್ತು. ಎರಡು ಪಂದ್ಯಗಳ ಸರಣಿ ಆದ ಕಾರಣ ಈ ಪಂದ್ಯ ಗೆದ್ದವರು ಸರಣಿ ಜಯ ಸಾಧಿಸುತ್ತಾರೆ.

Advertisement

ತಂಡಗಳು

ಭಾರತ: ಮಯಾಂಕ್ ಅಗರ್ವಾಲ್, ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ(ನಾ), ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ(ವಿ.ಕೀ), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್

ನ್ಯೂಜಿಲ್ಯಾಂಡ್: ಟಾಮ್ ಲ್ಯಾಥಮ್ (ನಾ), ವಿಲ್ ಯಂಗ್, ರಾಸ್ ಟೇಲರ್, ಡ್ಯಾರೆಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್, ರಚಿಮ್ ರವೀಂದ್ರನ್, ಕೈಲ್ ಜೇಮಿಸನ್, ಟಿಮ್ ಸೌಥಿ, ಅಜಾಜ್ ಪಟೇಲ್, ವಿಲ್ ಸೋಮರ್ವಿಲ್ಲೆ.

Advertisement

Udayavani is now on Telegram. Click here to join our channel and stay updated with the latest news.

Next