Advertisement
ನೂರಾರು ಸಂಖ್ಯೆಯಲ್ಲಿ ಆಗ ಮಿಸಿದ ಮೃತರ ಹಿತೈಷಿಗಳು, ಸಮಾಜದವರು, ವಿವಿಧ ಸಂಘ ಟನೆಗಳ ಪದಾಧಿಕಾರಿಗಳು, ಕಾರ್ಯ ಕಾರಿ ಸಮಿತಿಯ ಸದಸ್ಯರು, ತುಳು- ಕನ್ನಡಿಗರು, ಮೃತರ ಅಭಿಮಾನಿಗಳು ಸುಮಲತಾ ಸಿ. ಶೆಟ್ಟಿ ಮತ್ತು ಸುಜಾತಾ ಪಿ. ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ಕಂಬನಿ ಮಿಡಿದರು.
Related Articles
Advertisement
ಮುಗಿಲು ಮುಟ್ಟಿದ ಮಕ್ಕಳ ಕೂಗು…ವಿಕ್ರೋಲಿ ಬಂಟ್ಸ್‌ನ ಎಲ್ಲ ಕಾರ್ಯಕ್ರಮಗಳಲ್ಲಿ ಸುಮಲತಾ ಸಿ. ಶೆಟ್ಟಿ ಮತ್ತು ಸುಜಾತಾ ಪಿ. ಶೆಟ್ಟಿ ಅವರಲ್ಲದೆ ಅವರ ಮಕ್ಕಳು ಕೂಡಾ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಶ್ರದ್ಧಾಂಜಲಿ ಸಭೆಯಲ್ಲೂ ಭಾಗ ವಹಿಸಿದ ಇಬ್ಬರು ಮಕ್ಕಳು ಹಾಗೂ ಕುಟುಂಬದ ಸದಸ್ಯರು ಸಭಾಂಗಣದಲ್ಲಿ ಇಟ್ಟಂತಹ ಮೃತರ ಭಾವಚಿತ್ರವನ್ನು ನೋಡುತ್ತಿದ್ದಂತೆ ಅವರ ಕೂಗು ಮುಗಿಲುಮುಟ್ಟಿತು. ಸೇರಿದ ನೂರಾರು ಮಂದಿ ಮಕ್ಕಳ ರೋದನವನ್ನು ಕಂಡು ಮೂಕ ವಿಸ್ಮಿತರಾಗಿ ಕಣ್ಣೀರು ಸುರಿಸಿದರು. ಪಾಲ್ಗೊಂಡವರ ಬಾಯಲ್ಲಿ ಒಂದೇ ಶಬ್ದ ದೇವರೆಲ್ಲಿದ್ದಾನೆ…? ದುರಂತ ಸಾವನ್ನಪ್ಪುವ ಎರಡು ದಿನಗಳ ಹಿಂದೆ ಮುಂಬಯಿಯ ಒಂಬತ್ತು ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದಿದ್ದ ಸುಮಲತಾ ಮತ್ತು ಸುಜಾತಾ ಶೆಟ್ಟಿ ಕೊನೆಗೂ ನವರಾತ್ರಿಯ ಒಂಬತ್ತನೇ ದಿನ ದುರಂತ ಸಾವಿಗೆ ಕೊರಳೊಡ್ಡಿದರು. ಒಂದು ಹೊತ್ತಿನ ಊಟದೊಂದಿಗೆ ನವರಾತ್ರಿ ವ್ರತ ಕೈಗೊಂಡಿದ್ದ ಇವರ ಜೀವವನ್ನು ಉಳಿಸಲಾಗದ ದೇವರು ಎಲ್ಲಿದ್ದಾನೆ…ಎಂದು ಪಾಲ್ಗೊಂಡವರು ಒಬ್ಬರನ್ನೊಬ್ಬರು ಪ್ರಶ್ನಿಸುತ್ತಿದ್ದರು. ಬಿಡದ ಸ್ನೇಹದ ನಂಟು…!
ಆಪ್ತ ಸ್ನೇಹಿತೆಯರಾಗಿದ್ದ ಸುಮ ಲತಾ ಶೆಟ್ಟಿ ಮತ್ತು ಸುಜಾತಾ ಶೆಟ್ಟಿ ಅವರು ಸಾವಲ್ಲೂ ಒಂದಾಗಿದ್ದರೆ. ವಿಚಿತ್ರವಾದರೂ ಸತ್ಯ ಎಂಬಂತೆ ಅವರು ಚಿತೆಯಲ್ಲೂ ಒಬ್ಬರನ್ನೊಬ್ಬರು ಬಿಟ್ಟುಕೊಡಲೇ ಇಲ್ಲ. ಶುಕ್ರವಾರ ರಾತ್ರಿ 12.15ಕ್ಕೆ ಸುಮಲತಾ ಅವರ ಮೃತದೇಹಕ್ಕೆ ವಿಕ್ರೋಲಿಯ ಶ್ಮಶಾನದ ಚಿತಾಗಾರದಲ್ಲಿ ಅಗ್ನಿ ಸ್ಪರ್ಶಗೊಳಿಸಲಾಯಿತು. ಅವರ ಮೃತದೇಹವನ್ನಿಟ್ಟ ಅದೇ ಚಿತೆಯಲ್ಲಿ ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಸುಜಾತಾ ಶೆಟ್ಟಿ ಅವರ ಮೃತದೇಹಕ್ಕೆ ಅಗ್ನಿಸ್ಪರ್ಶಿಸಲಾಗಿದೆ. ವಿಸ್ಮಯವೆಂದರೆ ಇದರ ನಡುವೆ ಈ ಚಿತೆಯಲ್ಲಿ ಬೇರಾವುದೇ ಮೃತದೇಹಗಳನ್ನು ಸುಡಲಾಗಿಲ್ಲ ಎಂಬುದು. ಸಭೆಯಲ್ಲಿ ಸೇರಿದ ಎಲ್ಲರೂ ಇವರಿಬ್ಬರ ಸ್ನೇಹದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರು. ಮಕ್ಕಳ ಭವಿಷ್ಯಕ್ಕಾಗಿ ಏನಾದರೂ ಮಾಡಬೇಕು: ಚೌಟ
ಕಾಲ ಮಿಂಚಿ ಹೋಗಿದೆ. ಇಬ್ಬರು ಪ್ರತಿಭಾವಂತರನ್ನು ನಾವು ಕಳೆದುಕೊಂಡಿದ್ದೇವೆ. ಆ ದುಃಖ ವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಮಕ್ಕಳಿಗೆ, ಕುಟುಂಬಿಕರಿಗೆ ಭಗವಂತ ಕರುಣಿಸಲಿ. ಮುಂದಿರುವ ಪ್ರಶ್ನೆ ಮಕ್ಕಳ ಭವಿಷ್ಯ. ಮಕ್ಕಳ ಭವಿಷ್ಯವನ್ನು ರೂಪಿಸಲು ನಾವೇನಾದರೂ ಮಾಡ ಬೇಕಾಗಿದೆ. ಅಂತಹ ಯೋಚನೆ- ಯೋಜನೆಗಳಿಗೆ ನನ್ನ ಸಂಪೂರ್ಣ ಸಹಕಾರವಿದೆ. ನಾವೆಲ್ಲರು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಕಿಂಚಿತ್ತಾ ದರೂ ಸಹಕರಿಸೋಣ. ಇದರ ಬಗ್ಗೆ ಚಿಂತಿಸೋಣ ಎಂದು ಪತ್ರಕರ್ತ ದಯಾ ಸಾಗರ್ ಚೌಟ ಹೇಳಿದರು. ಚಿತ್ರ-ವರದಿ:ಸುಭಾಷ್ ಶಿರಿಯಾ