Advertisement

ರಿಯಾಗೆ ಜೈಲೋ, ಜಾಮೀನೋ?: ಇಂದು ಮುಂಬೈ ಸೆಷನ್ಸ್‌ ಕೋರ್ಟ್‌ ನಿಂದ ನಿರ್ಧಾರ

12:56 AM Sep 10, 2020 | mahesh |

ಮುಂಬೈ: ಡ್ರಗ್‌ ಪ್ರಕರಣದಲ್ಲಿ ಬಂಧಿತರಾಗಿ ಮಂಗಳವಾರ ರಾತ್ರಿ ಎನ್‌ಸಿಬಿ ಪ್ರಧಾನ ಕಚೇರಿಯಲ್ಲೇ ಕಳೆದ ಬಾಲಿವುಡ್‌ ನಟಿ ರಿಯಾ ಚಕ್ರವರ್ತಿ ಅವರನ್ನು ಬುಧವಾರ ಬೈಕುಲ್ಲಾ ಮಹಿಳಾ ಜೈಲಿಗೆ ಸ್ಥಳಾಂತರಿಸಲಾಗಿದೆ. ಇದೇ ವೇಳೆ, ರಿಯಾ ಅವರು ಜಾಮೀನಿಗಾಗಿ ಮುಂಬೈ ಸೆಷನ್ಸ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಗುರುವಾರ ಅದರ ವಿಚಾರಣೆ ನಡೆಯುವ ಸಾಧ್ಯತೆಯಿದೆ.

Advertisement

ಮಂಗಳವಾರ ಬೆಳಗ್ಗೆ 10.30ಕ್ಕೆ ಎನ್‌ಸಿಬಿ ಅಧಿಕಾರಿಗಳು ರಿಯಾ ರನ್ನು ಜೈಲಿಗೆ ಕರೆದೊಯ್ದರು. ಪುತ್ರಿ ಶೀನಾ ಬೋರಾ ಹತ್ಯೆ ಪ್ರಕರಣದ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿ ಕೂಡ ಇದೇ ಜೈಲಿನಲ್ಲಿದ್ದಾರೆ. ಹೊಸ ವಿಚಾರಣಾಧೀನ ಕೈದಿಗಳನ್ನು ಇರಿಸುವ ಜನರಲ್‌ ಬ್ಯಾರಕ್‌ನಲ್ಲೇ ರಿಯಾರನ್ನೂ ಇರಿಸಲಾಗಿದೆ. ಜೈಲಿನಲ್ಲಿ ಒಟ್ಟು 6 ಬ್ಯಾರಕ್‌ಗಳಿದ್ದು, ಪ್ರತಿ ಬ್ಯಾರಕ್‌ನಲ್ಲೂ 40ರಿಂದ 50 ಕೈದಿಗಳನ್ನು ಇರಿಸಲಾಗುತ್ತದೆ.

ಮಧ್ಯಾಹ್ನ ರಿಯಾಗೆ ಎರಡು ಚಪಾತಿ, ಅನ್ನ, ದಾಲ್‌ ಮತ್ತು ಪಲ್ಯವನ್ನು ನೀಡಲಾಗಿದೆ. ಈ ಜೈಲಿನೊಳಗೆಯೇ ಕ್ಯಾಂಟೀನ್‌ ವ್ಯವಸ್ಥೆಯೂ ಇದ್ದು, ಬಿಸ್ಕಿಟ್‌ ಮತ್ತಿತರ ಆಹಾರ ಪದಾರ್ಥಗಳನ್ನು ಖರೀದಿಸ ಬಹುದಾಗಿದೆ.

ಇಂದು ನಿರ್ಧಾರ: ಮಂಗಳವಾರವಷ್ಟೇ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ರಿಯಾಗೆ ಜಾಮೀನು ನಿರಾಕರಿಸಿತ್ತು. ಹೀಗಾಗಿ ಬುಧವಾರ ರಿಯಾ ಮುಂಬೈನ ಸೆಷನ್ಸ್‌ ಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಗುರುವಾರ ಇದರ ವಿಚಾರಣೆ ನಡೆಯುವ ಸಾಧ್ಯತೆಯಿದೆ. ಇನ್ನೊಂದೆಡೆ, ರಿಯಾ ಸಹೋದರ ಶೋವಿಕ್‌ ಸೇರಿದಂತೆ ಇತರೆ ಆರೋಪಿಗಳನ್ನೂ ಕೋರ್ಟ್‌ 14 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು, ಇವರ ಜಾಮೀನು ಅರ್ಜಿಯೂ ಗುರುವಾರ ವಿಚಾರಣೆಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next