Advertisement

ಸನಾತನ ಸಂಸ್ಥೆ ನಿಷೇಧಿತ …ಸಂಘಟನೆ ಅಲ್ಲ: ಬಾಂಬೆ ಹೈಕೋರ್ಟ್, ಏನಿದು ಪ್ರಕರಣ?

11:46 AM Mar 25, 2023 | Team Udayavani |

ಮುಂಬೈ: 2018ರ ನಲ್ಲಾಸೋಪಾರ ಶಸ್ತ್ರಾಸ್ತ್ರ ಸಾಗಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಶುಕ್ರವಾರ (ಮಾರ್ಚ್ 24) ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.

Advertisement

ಇದನ್ನೂ ಓದಿ:2019 ವಿಶ್ವಕಪ್ ತಂಡದಲ್ಲಿದ್ದ ಸಮಸ್ಯೆಯೇ ಈಗಲೂ ಇದೆ; ಜಹೀರ್ ಖಾನ್ ಕಳವಳ

ಸನಾತನ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಆರೋಪಿಗಳಾದ ಲೀಲಾಧರ್ ಲೋಧಿ ಮತ್ತು ಪ್ರತಾಪ್ ಹಜ್ರಾಗೆ ಜಾಮೀನು ನೀಡುವ ವೇಳೆ ಕೋರ್ಟ್ ಸೂಕ್ಷ್ಮ ಅವಲೋಕನ ಮಾಡುವ ಮೂಲಕ ಅಭಿಪ್ರಾಯವ್ಯಕ್ತಪಡಿಸಿದೆ.

ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಉದ್ದೇಶದಿಂದ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಹಾಳುಗೆಡುವ ಮೂಲಕ ದೇಶವನ್ನು ಅಸ್ಥಿರಗೊಳಿಸುವ ಗುರಿಯೊಂದಿಗೆ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವ ಸನಾತನ ಸಂಸ್ಥೆಯ ಸದಸ್ಯರನ್ನು ಬಂಧಿಸಲಾಗಿದೆ. ಆದರೆ ಸತಾತನ ಸಂಸ್ಥೆಯನ್ನು ನಿಷೇಧಿತ ಅಥವಾ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲಾಗಿಲ್ಲ ಎಂದು ಬಾಂಬೆ ಹೈಕೋರ್ಟ್ ಪೀಠದ ಜಸ್ಟೀಸ್ ಸುನೀಲ್ ಶುಖ್ರೆ ಮತ್ತು ಜಸ್ಟೀಸ್ ಕಮಲ್ ಖಾಟಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

2004ರ ಕಾನೂನು ಬಾಹಿರ ಚಟುವಟಿಕೆಗಳ (ನಿಗ್ರಹ) ಕಾಯ್ದೆಯ ಪ್ರಕಾರ ಸನಾತನ ಸಂಸ್ಥೆಯನ್ನು ನಿಷೇಧಿತ  ಗುಂಪಿನ ಸಂಘಟನೆ ಎಂದು ಘೋಷಿಸಲಾಗಿಲ್ಲ ಎಂದು ಪೀಠ ತಿಳಿಸಿದೆ. ಇಬ್ಬರು ಆರೋಪಿಗಳು ತಲಾ 50,000 ರೂಪಾಯಿ ವೈಯಕ್ತಿಕ ಬಾಂಡ್ ಆಧಾರದ ಮೇಲೆ ಬಿಡುಗಡೆಗೊಳಿಸುವಂತೆ ಆದೇಶ ನೀಡಿದೆ.

Advertisement

ನಲ್ಲಾಸೋಪಾರ ಪ್ರಕರಣವು 2018ರಲ್ಲಿ ವೈಭವ್ ರಾವತ್ ಅವರ ನಿವಾಸದಲ್ಲಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿದ್ದಾಗಿದೆ. ರಾವತ್ ಮತ್ತು ಇತರರು ಸನಾತನ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದು,  ದಾಳಿಗೆ ಸಂಚು ರೂಪಿಸುತ್ತಿದ್ದಾರೆ ಎಂದು ATS ಆರೋಪಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next