Advertisement

ಬುರ್ಖಾ ಧರಿಸದ್ದಕ್ಕೆ ಪತ್ನಿಯನ್ನೇ ಕೊಂದ!

11:44 PM Sep 27, 2022 | Team Udayavani |

ಮುಂಬೈ: ಬುರ್ಖಾ ಧರಿಸಲಿಲ್ಲ ಎಂಬ ಕಾರಣಕ್ಕೆ ಮುಂಬೈನಲ್ಲಿ ಇಕ್ಬಾಲ್‌ ಶೇಖ್‌ (36) ಎಂಬಾತ ಪತ್ನಿ ರುಪಾಲಿ (20)ಯ ಗಂಟಲನ್ನು ಸೀಳಿ ಹತ್ಯೆ ಮಾಡಿದ್ದಾನೆ.

Advertisement

ಸೋಮವಾರ ರಾತ್ರಿ ಮಗ ಯಾರ ಜತೆಗೆ ಇರಬೇಕು ಹಾಗೂ ಮುಸ್ಲಿಂ ಸಮುದಾಯದ ನಿಯಮಗಳ ಪಾಲನೆ ವಿಚಾರವಾಗಿ ದಂಪತಿ ನಡುವೆ ಜಗಳ ಶುರುವಾಗಿತ್ತು. ಅಂತಿಮವಾಗಿ ಇಕ್ಬಾಲ್‌ ಶೇಖ್‌ ಪತ್ನಿಯನ್ನು ಕೊಲೆಗೈದಿದ್ದಾನೆ.

ಟ್ಯಾಕ್ಸಿ ಡ್ರೈವರ್‌ ಆಗಿರುವ ಇಕ್ಬಾಲ್‌ ಮತ್ತು ಹಿಂದೂ ಸಮುದಾಯಕ್ಕೆ ಸೇರಿದ ರುಪಾಲಿ ಅವರ ವಿವಾಹ 2019ರಲ್ಲಿ ನಡೆದಿತ್ತು.

ನಂತರ ಆಕೆ, ಹೆಸರನ್ನು ಜಾರಾ ಎಂದು ಬದಲಿಸಿಕೊಂಡಿದ್ದಳು. ಕೆಲವು ಸಮಯದಿಂದ ಇಕ್ಬಾಲ್‌ನ ಕುಟುಂಬ ಬುರ್ಖಾ ಧರಿಸಲು ಒತ್ತಡ ಹೇರುತ್ತಿತ್ತು. ಈಗ ಅದು ಆಕೆಯ ಕೊಲೆಯಲ್ಲಿ ಅಂತ್ಯವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next