Advertisement

ಮುಂಬಯಿ-ಕನ್ಯಾಕುಮಾರಿ ಸಾಪ್ತಾಹಿಕ ವಿಶೇಷ ರೈಲು

01:21 AM Jan 03, 2023 | Team Udayavani |

ಮಂಗಳೂರು: ಮುಂಬಯಿ ಸಿಎಸ್‌ಎಂಟಿ ಹಾಗೂ ಕನ್ಯಾಕುಮಾರಿ ಮಧ್ಯೆ ಮಂಗಳೂರು ಮೂಲಕವಾಗಿ ಸಾಪ್ತಾಹಿಕ ವಿಶೇಷ ರೈಲು ಸಂಚರಿಸಲಿದೆ.

Advertisement

ನಂ. 01461 ಮುಂಬಯಿ ಸಿಎಸ್‌ಎಂಟಿ-ಕನ್ಯಾಕುಮಾರಿ ಸಾಪ್ತಾಹಿಕ ಸೂಪರ್‌ಫಾಸ್ಟ್‌ ರೈಲು ಮುಂಬಯಿ ಸಿಎಸ್‌ಎಂಟಿಯಿಂದ ಜ. 5ರ ಮಧ್ಯಾಹ್ನ 3.30ಕ್ಕೆ ಹೊರಟು ಮರುದಿನ ರಾತ್ರಿ 11.20ಕ್ಕೆ ಕನ್ಯಾಕುಮಾರಿ ತಲಪಲಿದೆ.

ಈ ರೈಲು ಮಂಗಳೂರು ಜಂಕ್ಷನ್‌ಗೆ ಶುಕ್ರವಾರ 8ಕ್ಕೆ ಆಗಮಿಸಿ, 8.10ಕ್ಕೆ, ಕಾಸರಗೋಡು ಸ್ಟೇಷನ್‌ಗೆ 8.49ಕ್ಕೆ ಆಗಮಿಸಿ 8.50ಕ್ಕೆ, ಕಣ್ಣೂರಿಗೆ 9.57ಕ್ಕೆ ಆಗಮಿಸಿ 10ಕ್ಕೆ ತೆರಳುವುದು.
ನಂ. 01462 ಕನ್ಯಾಕುಮಾರಿ ಮುಂಬಯಿ ಸಿಎಸ್‌ಎಂಟಿ ಸಾಪ್ತಾಹಿಕ ಸೂಪರ್‌ಫಾಸ್ಟ್‌ ವಿಶೇಷ ರೈಲು ಕನ್ಯಕುಮಾರಿಯಿಂದ ಜ. 7ರಂದು ಮಧ್ಯಾಹ್ನ 2.15ಕ್ಕೆ ಹೊರಟು ಮುಂಬಯಿ ಸಿಎಸ್‌ಎಂಟಿಗೆ ಮರುದಿನ ರಾತ್ರಿ 11.50ಕ್ಕೆ ತಲಪುವುದು.

ಈ ರೈಲು ಕಣ್ಣೂರಿಗೆ ರವಿವಾರ ಮುಂಜಾನೆ 2ಕ್ಕೆ ಆಗಮಿಸಿ 2.03ಕ್ಕೆ, ಕಾಸರಗೋಡಿಗೆ 3.05ಕ್ಕೆ ಆಗಮಿಸಿ 3.07ಕ್ಕೆ ಹಾಗೂ ಮಂಗಳೂರು ಜಂಕ್ಷನ್‌ಗೆ ಮುಂಜಾನೆ 4.10ಕ್ಕೆ ಆಗಮಿಸಿ 4.20ಕ್ಕೆ ತೆರಳಲಿದೆ.

ಥಾಣೆ, ಪನ್ವೇಲ್‌, ರೋಹ, ಚಿಪುನ್‌, ರತ್ನಗಿರಿ, ಕಂಕಾವಲಿ, ಸಿಂಧುದುರ್ಗ, ಸಾವಂತವಾಡಿ ರೋಡ್‌, ಮಡಗಾಂವ್‌, ಕಾರವಾರ, ಉಡುಪಿ, ಮಂಗಳೂರು ಜಂಕ್ಷನ್‌, ತೃಶ್ಶೂರ್‌, ಎರ್ನಾಕುಲಂ ಟೌನ್‌, ಕೊಟ್ಟಾಯಂ, ತಿರುವಲ್ಲ, ಚೆಂಗನ್ನೂರು, ಕಾಯಂಕುಳಂ, ಕೊಲ್ಲಂ, ತಿರುವನಂತಪುರ ಸೆಂಟ್ರಲ್‌, ಕುಲಿತುರಯ್‌, ನಾಗರಕೋವಿಲ್‌ಗ‌ಳಲ್ಲಿ ನಿಲುಗಡೆ ಹೊಂದಿದೆ.

Advertisement

ಈ ರೈಲು ಎರಡು ಎಸಿ 2 ಟೈರ್‌, 2 ಎಸಿ 3 ಟೈರ್‌, 9 ಸ್ಲಿàಪರ್‌, 4 ಸೆಕೆಂಡ್‌ ಸಿಟಿಂಗ್‌, ಎರಡು ವಿಶೇಷ ಚೇತನ ಸ್ನೇಹಿ, ಲಗೇಜ್‌ ಕೋಚ್‌ಗಳನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next