ಮುಂಬಯಿ: ಮುಂಬಯಿ ಕನ್ನಡ ಸಂಘ ಇದರ ಮಹಿಳಾ ವಿಭಾಗದ ವತಿಯಿಂದ ಶ್ರೀ ಶಾರದಾ ಪೂಜಾ ಮಹೋತ್ಸವವು ಸೆ. 27 ರಂದು ಸಂಜೆ ಮಾಟುಂಗ ಪೂರ್ವದ ಸಂಘದ ಕಚೇರಿಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕವಿ ಮತ್ತು ಸಮಾಜ ಸೇವಕಿ ಪ್ರಭಾ ಎನ್. ಸುವರ್ಣ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು.
ಸಾಂಸಕೃತಿಕ ಕಾರ್ಯಕ್ರಮದ ಅಂಗವಾಗಿ ಮಹಿಳಾ ಸದಸ್ಯೆಯರಿಂದ ಅರಸಿನ ಕುಂಕುಮ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಮೊದಲಾದ ಕಾರ್ಯಕ್ರಮಗಳು ನೇರವೇರಿತು. ಶಾಲಿನಿ ಪೈ ಮತ್ತು ಬಳಗ ಥಾಣೆ ಇವರಿಂದ ಭಜನೆ ಮತ್ತು ಭಕ್ತಿಗೀತೆ ಕಾರ್ಯಕ್ರಮ ನಡೆಯಿತು. ಪ್ರಕಾಶ್ ನಾಯ್ಕ ಅವರು ತಬಲಾದಲ್ಲಿ ಮತ್ತು ಬಾಜಿ ರಾವ್ ಇವರು ಹಾರ್ಮೋನಿಯಂನಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಡಾ| ಎಸ್. ಕೆ. ಭವಾನಿ, ಕೋಶಾಧಿಕಾರಿ ಸುಧಾಕರ ಪೂಜಾರಿ, ಎಸ್. ಕೆ. ಪದ್ಮನಾಭ, ಮಹಿಳಾ ವಿಭಾಗ ಉಪ ಕಾರ್ಯಧ್ಯಕ್ಷೆ ನರ್ಮಾದಾ ಎಸ್. ಕಿಣಿ, ಕಾರ್ಯದರ್ಶಿ ಸುಗುಣಾ ವಿ. ಶೆಟ್ಟಿ ಸೇರಿದಂತೆ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಜನಿ ಪೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಿನಿ ಪೈ ಅವರು ಪ್ರಾರ್ಥನೆಗೈದರು. ಕಾರ್ಯಕಾರಿ ಸಮಿತಿಯ ಸದಸ್ಯೆ ಶಾರದಾ ಅಂಬೆಸಂಗೆ ಅವರು ಅತಿಥಿಗಳನ್ನು ಪರಿಚಯಿಸಿ ವಂದಿಸಿದರು. ಸಂಘದ ಅಧ್ಯಕ್ಷ ಗುರುರಾಜ್ ಎಸ್.ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯೆಯರು, ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.