Advertisement

ಮುಂಬೈಗೆ ಗೆಲುವು; ಕೆಕೆಆರ್‌ ಔಟ್‌

09:06 AM May 07, 2019 | Team Udayavani |

ಮುಂಬಯಿ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್‌ ತಂಡವು ಐಪಿಎಲ್‌ ಕೂಟದ ಅಂತಿಮ ಲೀಗ್‌ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಪ್ಲೇ ಆಫ್ಗೆ ತೇರ್ಗಡೆಯಾಯಿತು.

Advertisement

ಮುಂಬೈ ಗೆಲುವಿನಿಂದ ಕೆಕೆಆರ್‌ ಕೂಟದಿಂದ ಹೊರಬಿತ್ತು. ಹೈದರಾಬಾದ್‌, ಕೆಕೆಆರ್‌ ಮತ್ತು ಪಂಜಾಬ್‌ ತಲಾ 12 ಅಂಕ ಗಳಿಸಿದ್ದು ಉತ್ತಮ ರನ್‌ಧಾರಣೆಯ ಆಧಾರದಲ್ಲಿ ಹೈದರಾಬಾದ್‌ ತಂಡವು ನಾಲ್ಕನೇ ತಂಡವಾಗಿ ಪ್ಲೇ ಆಫ್ಗೆ ತೇರ್ಗಡೆಯಾಯಿತು. ಅಗ್ರಸ್ಥಾನಿ ಮುಂಬೈ. ದ್ವಿತೀಯ ಸ್ಥಾನಿ ಚೆನ್ನೈ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇ ಆಫ್ಗೆ ತೇರ್ಗಡೆಯಾದ ಇನ್ನಿತರ ಮೂರು ತಂಡಗಳಾಗಿವೆ. ಪ್ಲೇ ಆಫ್ನಲ್ಲಿ ಮುಂಬೈ ತಂಡವು ಚೆನ್ನೈ ತಂಡವನ್ನು ಎದುರಿಸಲಿದ್ದರೆ ಡೆಲ್ಲಿ ತಂಡವು ಹೈದರಾಬಾದ್‌ ತಂಡದ ಸವಾಲಿಗೆ ಉತ್ತರಿಸಲಿದೆ.

ಚೆನ್ನೈನ 7ಕ್ಕೆ 133 ರನ್ನಿಗೆ ಉತ್ತರವಾಗಿ ಮುಂಬೈ ಇನ್ನೂ 3.5 ಓವರ್‌ ಬಾಕಿ ಇರುತ್ತಲೇ ಒಂದು ವಿಕೆಟ್‌ ನಷ್ಟದಲ್ಲಿ ಜಯಭೇರಿ ಬಾರಿಸಿತು. ರೋಹಿತ್‌ ಮತ್ತೂಂದು ಅರ್ಧಶತಕ ಹೊಡೆದರು.

ಕೋಲ್ಕತಾ ನೈಟ್‌ರೈಡರ್
ಶುಭಮನ್‌ ಗಿಲ್‌ ಎಲ್‌ಡಬ್ಲ್ಯು ಬಿ ಪಾಂಡ್ಯ 9
ಕ್ರಿಸ್‌ ಲಿನ್‌ ಸಿ ಡಿ ಕಾಕ್‌ ಬಿ ಹಾರ್ದಿಕ್‌ 41
ರಾಬಿನ್‌ ಉತ್ತಪ್ಪ ಸಿ ರೋಹಿತ್‌ ಬಿ ಬುಮ್ರಾ 40
ದಿನೇಶ್‌ ಕಾರ್ತಿಕ್‌ ಸಿ ಕೃಣಾಲ್‌ ಬಿ ಮಾಲಿಂಗ 3
ಆ್ಯಂಡ್ರೆ ರಸೆಲ್‌ ಸಿ ಡಿ ಕಾಕ್‌ ಬಿ ಮಾಲಿಂಗ 0
ನಿತೀಶ್‌ ರಾಣ ಸಿ ಪೊಲಾರ್ಡ್‌ ಬಿ ಮಾಲಿಂಗ 26
ರಿಂಕು ಸಿಂಗ್‌ ಸಿ ಹಾರ್ದಿಕ್‌ ಬಿ ಬುಮ್ರಾ 4
ಸುನಿಲ್‌ ನಾರಾಯಣ್‌ ಔಟಾಗದೆ 0
ಇತರ 10
ಒಟ್ಟು (7ವಿಕೆಟಿಗೆ) 133
ವಿಕೆಟ್‌ ಪತನ: 1-49, 2-56, 3-72, 4-73, 5-120, 6-133, 7-133.
ಬೌಲಿಂಗ್‌: ಮಿಚೆಲ್‌ ಮೆಕ್ಲೆನಗನ್‌ 4-1-19-0
ಕೃಣಾಲ್‌ ಪಾಂಡ್ಯ 4-0-14-0
ಲಸಿತ ಮಾಲಿಂಗ 4-0-35-3
ಜಸ್‌ಪ್ರೀತ್‌ ಬುಮ್ರಾ 4-0-31-2
ರಾಹುಲ್‌ ಚಹರ್‌ 1-0-12-0
ಹಾರ್ದಿಕ್‌ ಪಾಂಡ್ಯ 3-0-20-2

ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಔಟಾಗದೆ 55
ಕ್ವಿಂಟನ್‌ ಡಿ ಕಾಕ್‌ ಸಿ ಕಾರ್ತಿಕ್‌ ಬಿ ಕೃಷ್ಣ 30
ಸೂರ್ಯಕೆ. ಯಾದವ್‌ ಔಟಾಗದೆ 46
ಇತರ: 3
ಒಟ್ಟು (16.1 ಓವರ್‌ಗಳಲ್ಲಿ 1 ವಿಕೆಟಿಗೆ) 134
ವಿಕೆಟ್‌ ಪತನ: 1-46
ಬೌಲಿಂಗ್‌: ಸಂದೀಪ್‌ ವಾರಿಯರ್‌ 4-0-25-0
ಹ್ಯಾರಿ ಗರ್ನಿ 3-0-30-0
ಆ್ಯಂಡ್ರೆ ರಸೆಲ್‌ 2.1-0-34-0
ಸುನೀಲ್‌ ನಾರಾಯಣ್‌ 4-0-33-0
ಪ್ರಸಿದ್ಧ್ ಕೃಷ್ಣ 3-0-22-1

Advertisement
Advertisement

Udayavani is now on Telegram. Click here to join our channel and stay updated with the latest news.

Next