Advertisement

ವನಿತಾ ಪ್ರೀಮಿಯರ್‌ ಲೀಗ್‌: ಆರ್ ಸಿಬಿ ವಿರುದ್ಧ ಮುಂಬೈಗೆ ಭರ್ಜರಿ ಜಯ

11:03 PM Mar 06, 2023 | Team Udayavani |

ಮುಂಬೈ : ಇಲ್ಲಿನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ವನಿತಾ ಪ್ರೀಮಿಯರ್‌ ಲೀಗ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವನಿತೆಯರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 9 ವಿಕೆಟ್‌ಗಳಿಂದ ಅಮೋಘ ಗೆಲುವು ಸಾಧಿಸಿ ಸಂಭ್ರಮಿಸಿದ್ದಾರೆ.

Advertisement

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18.4 ಓವರ್ ಗಳಲ್ಲಿ 155 ರನ್ ಗಳಿಗೆ ಆಲೌಟಾಯಿತು. ಸ್ಮೃತಿ ಮಂಧಾನ 23, ಎಸ್ ಡಿವೈನ್ 16 ರನ್ ಗಳಿಸಿದರು. ರಿಚಾ ಘೋಷ್28, ಕನಿಕಾ ಅಹುಜಾ 22, ಶ್ರೇಯಾಂಕಾ ಪಾಟೀಲ್ 23, ಮೇಗನ್ ಶುಟ್ಸ್ಟ್ 20 ರನ್ ಗಳಿಸಿ ತಂಡ ಗೌರವಯುತ ಮೊತ್ತ ಕಲೆ ಹಾಕಲು ನೆರವಾದರು.

ಮುಂಬೈ ಪರ ಹೇಲಿ ಮ್ಯಾಥ್ಯೂಸ್ 3 ವಿಕೆಟ್ ಪಡೆದರು. ಸೈಕಾ ಇಶಾಕ್ ಮತ್ತು ಅಮೆಲಿಯಾ ಕೆರ್ ತಲಾ 2 ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ಮುಂಬೈ ಹೇಲಿ ಮ್ಯಾಥ್ಯೂಸ್ ಅವರ ಸ್ಪೋಟಕ ಆಟದಿಂದ ಭರ್ಜರಿ ಗೆಲುವು ಸಾಧಿಸಿತು. 38 ಎಸೆತಗಳಲ್ಲಿ 13 ಬೌಂಡರಿ 1 ಸಿಕ್ಸರ್ ಸಹಿತ ಮತ್ತು 77 ರನ್ ಚಚ್ಚಿದ ಅವರು ಅಜೇಯರಾಗಿ ಉಳಿದರು. ಯಾಸ್ತಿಕಾ ಭಾಟಿಯಾ 23 ರನ್ ಗಳಿಸಿ ಔಟಾದರು. ನ್ಯಾಟ್ ಸ್ಕೈವರ್ 29 ಎಸೆತಗಳಲ್ಲಿ 55 ರನ್ ಬಾರಿಸಿ ಭರ್ಜರಿ ಗೆಲುವು ತಂದಿಟ್ಟರು. 14.2 ಓವರ್ ಗಲ್ಲಿ 1 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಜಯಭೇರಿ ಬಾರಿಸಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೋಲು ಅನುಭವಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next