Advertisement
ಮುಂಬೈ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭದಲ್ಲಿ ಪೂಜಾರಿ ಪರ ವಕೀಲ ಪೊಲೀಸ್ ಕಸ್ಟಡಿಯನ್ನು ಇನ್ನೂ ಮುಂದುವರಿಸಬಾರದು ಎಂದು ಪೂಜಾರಿ ಪರ ವಕೀಲ ವಾದಿಸುತ್ತಿದ್ದರು, ಆಗ ಪೂಜಾರಿ ಮುಂದೆ ಬಂದು ನಾನು ಪೊಲೀಸರೊಂದಿಗೆ ಹೋಗುತ್ತೇನೆ ಎಂದು ಹೇಳಿ ಇಡಿ ನ್ಯಾಯಾಲಯವೇ ಅಚ್ಚರಿ ಆಗುವಂತೆ ಮಾಡಿದ್ದಾರೆ.
Related Articles
Advertisement
ಈ ಸಂದರ್ಭದಲ್ಲಿ, ರವಿ ಪೂಜಾರಿ, ನನ್ನನ್ನು ಕಸ್ಟಡಿಗೆ ಬಿಡಬೇಕು. ನನಗೆ ಇನ್ನೂ ಕೆಲವು ವಿಷಯಗಳನ್ನು ಹೇಳುವುದಕ್ಕಿದೆ ಎಂದು ಕೋರ್ಟ್ ಮುಂದೆ ಮನವಿ ಮಾಡಿಕೊಂಡಿದ್ದಾರೆ.
2016ರ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂಜಾರಿಯನ್ನು ಪೊಲೀಸ್ ತನಿಖೆಗೊಳಪಡಿಸಿತ್ತು. ಹಲವು ಅಪರಾಧಗಳಿಗೆ ನೇತ್ರತ್ವ ನೀಡಿರುವ ರವಿ ಪೂಜಾರಿ ಮೇಲೆ ಒಟ್ಟು 52 ಕ್ರಿಮಿನಲ್ ಪ್ರಕರಣಗಳಿವೆ. ಕಳೆದ ಒಂದು ವರ್ಷದಿಂದ ಬೆಂಗಳೂರಿನ ಸೆರೆಮನೆಯಲ್ಲಿದ್ದ ರವಿ, ಕೊಚ್ಚಿಯ ಬ್ಯೂಟಿ ಪಾರ್ಲರ್ ಬಾಂಬ್ ದಾಳಿ ಪ್ರಕರಣದಲ್ಲೂ ಆರೋಪಿಯಾಗಿದ್ದರು.
ಓದಿ : ಯುವತಿಯ ಮೂಗಿಗೆ ಡಿಚ್ಚಿ ಕೊಟ್ಟ ಫುಡ್ ಡೆಲಿವರಿ ಬಾಯ್..! ಕಾರಣ ?