Advertisement

ಗಳಿಕೆಯ ಪಾಲಿನಲ್ಲಿ ತುಳು ಸಿನೆಮಾಕ್ಕೆ ಗೋತಾ!

02:17 AM May 29, 2022 | Team Udayavani |

ಮಂಗಳೂರು: ಕರಾವಳಿಯಾದ್ಯಂತ ತುಳು ಸಿನೆಮಾಗಳ ಪ್ರದರ್ಶನ ಸಂಖ್ಯೆ ಏರಿಕೆ ಕಾಣುತ್ತಿದ್ದರೆ, ಮಲ್ಟಿಪ್ಲೆಕ್ಸ್‌ಗಳಲ್ಲಿ ಅದೇ ಸಿನೆಮಾ ಪ್ರದರ್ಶನದ ಗಳಿಕೆಯ ಪಾಲು ಮಾತ್ರ ಇಳಿಕೆಯಾಗುತ್ತಿದೆ.

Advertisement

ಕನ್ನಡ ಸಹಿತ ಇತರ ಭಾಷೆಗಳ ಸಿನೆಮಾಗಳಿಗೆ ಗಳಿಕೆಯ ಪಾಲಿನಲ್ಲಿ ಗರಿಷ್ಠ ಮೊತ್ತ ಸಿಕ್ಕರೂ ತುಳು ಸಿನೆಮಾಗಳಿಗೆ ಪಾಲು ಕಡಿಮೆ. ತುಳು ಸಿನೆಮಾ ಪ್ರದರ್ಶನಕ್ಕೆ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ ಕೊರತೆ ಎದುರಿಸುತ್ತಿರುವ ಕರಾವಳಿಯಲ್ಲಿ ಮಲ್ಟಿಪ್ಲೆಕ್ಸ್‌ನ ತಾರತಮ್ಯ ಚಿತ್ರೋದ್ಯಮದ ಆಕ್ರೋಶಕ್ಕೆ ಕಾರಣವಾಗಿದೆ. ತುಳು ಸಿನೆಮಾಕ್ಕೆ ಸೀಮಿತ ಪ್ರೇಕ್ಷಕರು ಇರುವಾಗ ಅವರಿಂದ ದುಪ್ಪಟ್ಟು ಪಾಲು ಪಡೆಯುವ ಮಲ್ಟಿಪ್ಲೆಕ್ಸ್‌ ನಿಯಮ ಸಿನೆಮಾ ನಿರ್ಮಾಪಕರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.

ತುಳು ಚಿತ್ರ ನಿರ್ಮಾಪಕ ಪ್ರಕಾಶ್‌ ಪಾಂಡೇಶ್ವರ ಅವರು “ಉದಯವಾಣಿ’ ಜತೆಗೆ ಮಾತನಾಡಿ, “ತುಳು ಚಿತ್ರಗಳಿಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ. ಕನ್ನಡ ಅಥವಾ ಪರ ಭಾಷೆಯ ಸಿನೆಮಾಗಳಿಗೆ ಗಳಿಕೆಯಲ್ಲಿ ಹೆಚ್ಚಿನ ಪಾಲು ಸಿಗುತ್ತಿದ್ದು ತುಳುವಿಗೆ ಮಾತ್ರ ಅನ್ಯಾಯವಾಗುತ್ತಿದೆ. ತುಳುವಿಗೂ ಅಷ್ಟೇ ಪಾಲನ್ನು ನೀಡಬೇಕು. ನಮ್ಮ ನೆಲದಲ್ಲಿರುವ ಮಲ್ಟಿಪ್ಲೆಕ್ಸ್‌ಗಳು ನಮಗೆ ಸಹಕಾರ ಮಾಡದಿದ್ದರೆ ಹೇಗೆ? ಸರಕಾರ, ಫಿಲಂ ಚೇಂಬರ್‌ ವಿಶೇಷವಾಗಿ ಗಮನಹರಿಸಬೇಕು’ ಎನ್ನುತ್ತಾರೆ.

ಪ್ರತ್ಯೇಕ ಥಿಯೇಟರ್‌
ಸಿಂಗಲ್‌ ಥಿಯೇಟರ್‌ ಕೊರತೆ ಜತೆಗೆ ಮಲ್ಟಿಪ್ಲೆಕ್ಸ್‌ನ ಶೇಕಡಾ ಪಾಲಿನಲ್ಲಿ ತಾರತಮ್ಯದ ವಿರುದ್ಧ ಸರaಕಾರದ ಗಮನಸೆಳೆಯುವ ಕಾರ್ಯವನ್ನು ಅಕಾಡೆಮಿ ನಡೆಸಲಿದೆ. ಜತೆಗೆ ತುಳು ಸಿನೆಮಾ ಪ್ರದರ್ಶನಕ್ಕೆ ಸೀಮಿತಗೊಳಿಸಿ ತುಳು ಸಾಹಿತ್ಯ ಅಕಾಡೆಮಿಯಲ್ಲಿ ಥಿಯೇಟರ್‌ ನಿರ್ಮಿಸುವ ಚಿಂತನೆಯಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್‌ ತಿಳಿಸಿದ್ದಾರೆ.

ಮಲ್ಟಿಪ್ಲೆಕ್ಸ್‌ಗಳಲ್ಲಿ ಇತರ ಭಾಷೆಯ ಸಿನೆಮಾಗಳಿಗೆ ದೊರಕುವ ಮಾದರಿಯಲ್ಲಿಯೇ ತುಳು ಸಿನೆಮಾಗಳಿಗೂ ಪಾಲು ದೊರೆಯಬೇಕು ಎಂಬ ನಿರ್ಮಾಪಕರ ಆಗ್ರಹ ಕೇಳಿಬಂದಿದೆ. ಈ ಬಗ್ಗೆ ತುಳು ಸಿನೆಮಾ ನಿರ್ಮಾಪಕರ ಜತೆಗೆ ಚರ್ಚಿಸಿ ಮಲ್ಟಿಪ್ಲೆಕ್ಸ್‌ ಪಾಲಿನಲ್ಲಿ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳಲಾಗುವುದು.
– ವಿ. ಸುನಿಲ್‌ ಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next