Advertisement

ಅಮೆರಿಕಾದ ನೈಟ್ ಕ್ಲಬ್ ನಲ್ಲಿ ಗುಂಡಿನ ದಾಳಿ: ಐವರು ಸಾವು, ಹದಿನೈದಕ್ಕೂ ಹೆಚ್ಚು ಗಾಯ

05:24 PM Nov 20, 2022 | Team Udayavani |

ಅಮೆರಿಕಾ: ಶನಿವಾರ ಮಧ್ಯರಾತ್ರಿ ಅಮೆರಿಕಾದ ಕೊಲೊರಾಡೋ ಸ್ಪ್ರಿಂಗ್ಸ್‌ನಲ್ಲಿರುವ ನೈಟ್‌ಕ್ಲಬ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು ಘಟನೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದು ಹದಿನೈದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ದಿ ಮಿರರ್ ವರದಿ ಮಾಡಿದೆ.

Advertisement

ಘಟನೆ ನಡೆದ ಬಳಿಕ ನೈಟ್‌ಕ್ಲಬ್‌ನ ಕ್ಲಬ್ ನ ಹೊರಗೆ ಬೃಹತ್ ಪೊಲೀಸ್ ಪಡೆಗಳನ್ನು ನಿಯೋಜನೆಗೊಳಿಸಿದ್ದು ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್‌ಗಳು ಸಾಲುಗಟ್ಟಿ ನಿಂತಿರುವುದನ್ನು ಕಾಣಬಹುದು.

ನೈಟ್ ಕ್ಲಬ್ ನಲ್ಲಿ ಟ್ರಾನ್ಸ್‌ಜೆಂಡರ್ ಡೇ ಆಫ್ ರಿಮೆಂಬರೆನ್ಸ್ ಆಯೋಜಿಸಲಾಗಿತ್ತು ಈ ವೇಳೆ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ಅನಂತನಾಗ್: ಉಗ್ರರ ಅಡಗುತಾಣದ ಬಳಿ ಹೈಬ್ರಿಡ್ ಭಯೋತ್ಪಾದಕನ ಅಂತ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next