Advertisement

ಬಹುಭಾಷಾ ಕವಿಗೋಷ್ಠಿ

10:26 AM Jan 01, 2018 | |

ಮಹಾನಗರ: ಇಂದು ಸಮಾಜದ ಎಲ್ಲ ರಂಗಗಳಲ್ಲಿ ಅಶಾಂತಿ ತುಂಬಿಕೊಂಡಿರುವಂತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ದಣಿದ ಮನಗಳಿಗೆ, ನೊಂದ ಸಮಾಜಕ್ಕೆ ಸಾಂತ್ವನ ನೀಡುವುದು ಸಾಹಿತ್ಯದ ಜವಾಬ್ದಾರಿಯಾಗಬೇಕು ಎಂದು ಹಿರಿಯ ಸಾಹಿತಿ ಡಾ| ವಸಂತಕುಮಾರ ಪೆರ್ಲ ಹೇಳಿದರು.

Advertisement

ಕರಾವಳಿ ಉತ್ಸವದ ಅಂಗವಾಗಿ ಕನ್ನಡ ಬಳಗ ನಗರದ ಲಾಲ್‌ಬಾಗ್‌ನ ಉತ್ಸವ ಮೈದಾನದಲ್ಲಿ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿಯನ್ನು ಅವರು ಉದ್ಘಾಟಿಸಿದರು. ಕಾವ್ಯವೆಂದರೆ ಅಮೃತಕ್ಕೆ ಹಾರುವ ಗರುಡ ಎನ್ನಲಾಗಿದೆ. ಅಮೃತವನ್ನು ಹಂಚುವುದು, ಅಂದರೆ ವೈಚಾರಿಕ ಚಿಂತನೆಗಳ ಮೂಲಕ ಸಮಾಜವನ್ನು ಮೇಲೆತ್ತುವುದು ಕಾವ್ಯ- ಸಾಹಿತ್ಯದ ಕೆಲಸ. ಒಳ್ಳೆಯ ಚಿಂತನೆಗಳನ್ನು ಹರಡುವ ಮೂಲಕ ಇಡೀ ಸಮಾಜವನ್ನು ಒಗ್ಗೂಡಿಸುವ ಮತ್ತು ಬೆಳೆಸುವ ಕಾರ್ಯ ಸಾಹಿತ್ಯದಿಂದ ಆಗಲಿ ಎಂದರು.

ಬಹುಭಾಷಾ ಕವಿಗೋಷ್ಠಿಯಲ್ಲಿ ಕವಿಗಳಾದ ಡಾ| ರಮಾನಂದ ಬನಾರಿ, ಡಾ| ಎಂ. ಆರ್‌.ರವಿ, ಡಾ| ಸೋಮಣ್ಣ, ಡಾ| ಮೀನಾಕ್ಷಿ ರಾಮಚಂದ್ರ, ಶಶಿಲೇಖಾ ಬಿ, ಜ್ಯೋತಿ ಚೇಳಾರು, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಶ್ರೀಕೃಷ್ಣಯ್ಯ ಅನಂತಪುರ,
ವಿಲ್ಸನ್‌ ಕಟೀಲು, ಮಹಮ್ಮದ್‌ ಬಡ್ದೂರು, ಎನ್‌. ಸುಬ್ರಾಯ ಭಟ್‌ ಮತ್ತು ಡಾ| ಶಿವ ಕುಮಾರ್‌ ಮಗದ ಸ್ವರಚಿತ ಕವನಗಳನ್ನು ವಾಚಿಸಿದರು.

ಕನ್ನಡ ಬಳಗದ ಅಧ್ಯಕ್ಷ ಎಂ.ಆರ್‌. ವಾಸುದೇವ ಅವರು ಅಧ್ಯಕ್ಷತೆ ವಹಿಸಿ, ಸಾಹಿತ್ಯ ಕಾರ್ಯಕ್ರಮಗಳ ವಿವರ ನೀಡಿದರು. ಗುಣಾಜೆ ರಾಮಚಂದ್ರ ಭಟ್‌ ಸ್ವಾಗತಿಸಿದರು. ಕಾಸರ ಗೋಡು ಅಶೋಕ್‌ಕುಮಾರ್‌ ನಿರ್ವಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next