Advertisement

ದಶಕ ಕಳೆದ್ರೂ ತೆರೆದಿಲ್ಲ ಜಿಮ್‌

07:55 AM Jan 26, 2019 | |

ಚನ್ನರಾಯಪಟ್ಟಣ: ತಾಲೂಕು ಕ್ರೀಡಾಂಗಣದಲ್ಲಿರುವ ಸಾರ್ವಜನಿಕ ಮಲ್ಟಿ ಜಿಮ್‌ ಬಳಕೆಗೆ ನೀಡದ ಕಾರಣ ಪಾಳು ಬಿದ್ದಿದೆ. ಕೊಠಡಿ ಬಾಗಿಲು ತೆರೆದು 10 ವರ್ಷಗಳೇ ಕಳೆದಿದ್ದು, ಅಲ್ಲಿನ ಪರಿಕರಗಳು ಧೂಳು ತುಂಬಿಕೊಂಡು ತಕ್ಕು ಹಿಡಿಯುತ್ತಿವೆ. ಲಕ್ಷಾಂತರ ರೂ. ಜನರ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

Advertisement

ಯುವಜನ ಮತ್ತು ಕ್ರೀಡಾ ಇಲಾಖೆಯು 10 ವರ್ಷಗಳ ಹಿಂದೆ 5 ಲಕ್ಷ ರೂ. ವೆಚ್ಚ ಮಾಡಿ ಮಲ್ಟಿ ಜಿಮ್‌ ಪ್ರಾರಂಭಿಸಿ, ಅಗತ್ಯ ಪರಿಕರಗಳನ್ನೂ ಒದಗಿಸಿದೆ. ಆದರೆ, ಜನರ ಧೂಳು ತುಂಬಿಕೊಂಡು ತುಕ್ಕು ಹಿಡಿಯುತ್ತಿವೆ. ಒಂದು ದಶಕದಿಂದ ಜಿಮ್‌ ಪರಿಕರವನ್ನು ಒಂದು ದಿನವೂ ಬಳಸದೆ ಕೊಠಡಿಯಲ್ಲಿ ಇರಿಸಲಾಗಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿಕೂತಿದ್ದಾರೆ.

ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ತಾಲೂಕು ಕ್ರೀಡಾಂಗಣದ ಒಂದು ಕೋಣೆಯನ್ನು ಮಲ್ಟಿಜಿಮ್‌ ಮಾಡಿ ಅಲ್ಲಿಗೆ ಅಗತ್ಯವಿರುವ ಪರಿಕರವನ್ನು ಲಕ್ಷಾಂತರ ರೂ. ವೆಚ್ಚ ಮಾಡಿ ಪೂರೈಕೆ ಮಾಡಿದೆ. ಆದರೆ, ಇದು ಸಾರ್ವಜನಿಕರ ಉಪಯೋಗಕ್ಕೆ ನೀಡದಿರುವುದರಿಂದ ಕೋಣೆಯ ಒಳಗೆ ಇಲಿ ಹೆಗ್ಗಣಗಳ ವಾಸ ಮಾಡುತ್ತಿವೆ.

ಪಾಳು ಬಿದ್ದಿವೆ: ಹಣವಂತರು ಖಾಸಗಿ ಜಿಮ್‌ಗಳಿಗೆ ತೆರಳಿ ಸದೃಢ ದೇಹ ಹೊಂದಿ, ಉತ್ತಮ ಕ್ರೀಡಾಪಟುಗಳಾಗಿ ಹೊರ ಹೊಮ್ಮುತ್ತಾರೆ. ಆದರೆ, ಬಡ ಕೂಲಿ ಕಾರ್ಮಿಕರ ಮಕ್ಕಳು, ಬಡವರಿಗೆ ಸೂಕ್ತ ಸೌಲಭ್ಯವಿಲ್ಲದೆ ಕ್ರೀಡಾ ಚಟುವಟಿಕೆಗಳಿಂದ ದೂರ ಉಳಿಯುತ್ತಾರೆ. ಇಂತಹವರಿಗಾಗಿ ಸರ್ಕಾರ ಜಿಮ್‌ ಪ್ರಾರಂಭಿಸಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೊಠಡಿ ಬಾಗಿಲು ತೆರೆಯದೇ ಪಾಳು ಬಿದ್ದಿದೆ.

ಕೊಠಡಿಯಲ್ಲಿ ದಶಕದಿಂದ ಧೂಳು ಹಿಡಿಯುತ್ತಿರುವ ಜಿಮ್‌ ಪರಿಕರದ ಬಗ್ಗೆ ಕ್ರೀಡಾಸಕ್ತರು, ಯುವಕರು ತಹಶೀಲ್ದಾರ್‌ ಹಾಗೂ ತಾಪಂ ಇಒ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಯುವಜನ ಮತ್ತು ಕ್ರೀಡಾ ಇಲಾಖೆ ಕಚೇರಿ ಜಿಲ್ಲಾ ಕೇಂದ್ರದಲ್ಲಿದೆ. ಇದರ ಜವಾಬ್ದಾರಿ ಅವರದ್ದು ಎಂದು ಹೇಳಿ ಕೈ ತೊಳೆದುಕೊಳ್ಳುತ್ತಿದೆ.

Advertisement

ಓರ್ವ ಸಿಬ್ಬಂದಿ ನೇಮಿಸಬಹುದು

ಅಭಿವೃದ್ಧಿ ಹೆಸರಿನಲ್ಲಿ ಎರಡು ದಶಕದಿಂದ ತಾಲೂಕು ಕ್ರೀಡಾಂಗಣಕ್ಕೆ 3 ಕೋಟಿ ರೂ. ವೆಚ್ಚ ಮಾಡಿದ್ದರೂ ಅಗತ್ಯ ಇರುವ ಜಿಮ್‌ ಕೊಠಡಿ ನಿರ್ಮಾಣಕ್ಕೆ ಮುಂದಾಗಲಿಲ್ಲ. ಪಾಳು ಬಿದ್ದಿರುವ ಜಿಮ್‌ ಕೊಠಡಿ ಬಾಗಿಲು ತೆರೆದು ಮಾಸಿಕ ಇಂತಿಷ್ಟು ಹಣ ನಿಗದಿ ಮಾಡಿ ಅದರಲ್ಲಿ ಬರುವ ಹಣದಿಂದ ಓರ್ವ ಕೆಲಸಗಾರರ ನೇಮಿಸಿ ಉಪಯೋಗಕ್ಕೆ ಅವಕಾಶ ಕಲ್ಪಿಸಬಹುದು. ಇದನ್ನು ಮಾಡುವಲ್ಲಿಯೂ ಅಧಿಕಾರಿಗಳು ವಿಫ‌ಲರಾಗಿದ್ದಾರೆ.

ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next