ನಿಲ್ದಾಣ ಹಾಗೂ ಬಪ್ಪನಾಡು ಜಂಕ್ಷನ್ ಈ ನಾಲ್ಕು ಕಡೆಗಳಲ್ಲಿ ನಿತ್ಯವೂ ಅಪಘಾತ ನಡೆಯುತ್ತಿದ್ದು ಅಪಘಾತ ವಲಯವಾಗಿ
ಗುರುತಿಸಿಕೊಂಡಿದೆ.ಕೆಲವೊಂದು ಅಧಿಕಾರಿಗಳ ಹಾಗೂ ವ್ಯಕ್ತಿಗಳ ನಿರ್ಲಕ್ಷ್ಯದ ನಿರ್ಧಾರದಿಂದ ರಸ್ತೆ ಅವೈಜ್ಞಾನಿಕವಾಗಿ ನಿರ್ಮಾಣಗೊಂಡು ಅಫಘಾತ ವಲಯವಾಗಿ ಮಾರ್ಪಟ್ಟಿದೆ.
Advertisement
ರಸ್ತೆ ಬದಿಯಲ್ಲೇ ಪಾರ್ಕಿಂಗ್: ಇಲಾಖೆಯು ದಿವ್ಯ ನಿರ್ಲಕ್ಷ್ಯದ ಜತೆಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಜನರು ತಮ್ಮ ವಾಹನಗಳನ್ನು ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣವಾಗಿದೆ. ಬೆಳಗ್ಗೆಯಿಂದ ರಾತ್ರಿಯವರೆಗೆ ಈ ವಾಹನಗಳು ರಸ್ತೆಯ ಬದಿಯಲ್ಲೆ ಇರುತ್ತವೆ.
ಆಗಾಗ್ಗೆ ಅಪಘಾತದಲ್ಲಿ ಸಿಲುಕಿಕೊಳ್ಳುತ್ತಾರೆ.
Related Articles
ಮೂಲ್ಕಿ ಬಿಲ್ಲವ ಸಂಘದ ಎದುರಿನ ಕಿನ್ನಿಗೋಳಿಯತ್ತ ಹೋಗುವ ತಿರುವು ಕೂಡ ಸಮಸ್ಯೆಯಿಂದ ಕೂಡಿದೆ. ಅದರ ಜತೆಗೆ ಇಲ್ಲಿ ಮಂಗಳೂರಿನತ್ತ ಹೋಗುವ ಬಸ್ ನಿಲ್ದಾಣವಾಗಿರುವ ಕಾರಣ ಸರ್ವಿಸ್ ರಸ್ತೆಯಲ್ಲಿ ಎಕ್ಸ್‌ಪ್ರೆಸ್ ಬಸ್ ನಿಲ್ಲಿಸುವಾಗ ಮತ್ತೆ ಬೇರೆ ವಾಹನಗಳು ಹೋಗದಂತೆ ಅಡ್ಡವಾಗುವುದರಿಂದ ಇಲ್ಲಿಯೂ ಟ್ರಾಫಿಕ್ ಜಾಮ್ ಉಂಟಾಗಿ ಅಪಘಾತಕ್ಕೆ ಕಾರಣವಾಗುತ್ತಿದೆ. ವಿಜಯ ಬ್ಯಾಂಕ್ ಬಳಿಯ ಇಲ್ಲಿ ಸರ್ವಿಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಹಾಗು ಇತರ ವಾಹನಗಳನ್ನು
ನಿಲ್ಲಿಸಲಾಗುವುದರಿಂದಾಗಿ ಇಲ್ಲಿಯೂ ಸುಗಮ ಸಂಚಾ ರಕ್ಕೆ ಅಡ್ಡಿಯಾಗುತ್ತಿದೆ.
Advertisement
ನಗರ ಪಂಚಾಯತ್ ಮಾಸಿಕ ಸಭೆಯಲ್ಲಿ ಬಿಲ್ಲವ ಸಂಘದ ಬಳಿಯ ನಾರಾಯಣ ಗುರು ಶಾಲೆಯ ವಿದ್ಯಾರ್ಥಿಗಳಿಗೆ ಇಲ್ಲಿ ರಸ್ತೆ ಸಂಚಾರದ ಕಷ್ಟ ಮತ್ತು ತೊಂದರೆ ಆಗುತ್ತಿರುವುದನ್ನು ಸರಿಪಡಿಸಲು ಪೊಲೀಸ್ ಸಹಾಯವನ್ನು ಕೋರಿದ್ದರೂ ಈ ವರೆಗೆ ಪರಿಹಾರ ಸಿಕ್ಕಿಲ್ಲ. ನಗರ ಪಂಚಾಯತ್ ಸಭೆಗಳಲ್ಲಿ ಬಂದ ಸಲಹೆಯಂತೆ ಈ ಎಲ್ಲ ರಸ್ತೆ ಜಂಕ್ಷನ್‌ಗಳ ಬಗ್ಗೆ ಇಲಾಖೆಗೆ ಪತ್ರ ಬರೆದು ಇತ್ಯರ್ಥಕ್ಕಾಗಿ ತಿಳಿಸಲಾಗಿದೆ. ಆದರೆ ಪೂರ್ಣ ಪ್ರಮಾಣದ ಪರಿಹಾರ ಕಾಣುವುದು ಈ ವರೆಗೆ ಸಾಧ್ಯವಾಗಿಲ್ಲ. ಮೂಲ್ಕಿಯ ಜಂಕ್ಷನ್‌ಗಳು ಊರಿನ ಜನರಿಗೆ ಶಾಪವಾಗಿ ಪರಿಣಮಿಸಿದೆ.
ಸೂಕ್ತ ಕ್ರಮಹೆದ್ದಾರಿಯ ಪಕ್ಕದ ಸರ್ವಿಸ್ ರಸ್ತೆಯಲ್ಲಿ ವಾಹನ ನಿಲಗಡೆ ಕಾನೂನು ಪ್ರಕಾರ ಅಪರಾಧವಾಗಿದೆ. ಕೆಲವರು ತಮ್ಮ ವಾಹನಗಳನ್ನು ಮುಂಜಾನೆ ನಿಲ್ಲಿಸಿ ಕೆಲಸಕ್ಕೆ ಹೋಗಿ ಸಂಜೆ ವಾಪಾಸಾಗುತ್ತಾರೆ. ಇದು ಸರಿಯಲ್ಲ ಇದಕ್ಕೆ ನಮ್ಮ ಅಧಿಕಾರಿಗಳು ಪೊಟೋ ತೆಗೆದು ಕೇಸು ದಾಖಲಿಸಿ ದಂಡ ವಸೂಲಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮೂಲ್ಕಿಯ ರಸ್ತೆಯ ನಿರ್ವಹಣೆಗಾಗಿ ಒರ್ವ ಸಿಬಂದಿಯನ್ನು ನೇಮಿಸಲಾಗಿದೆ. ನಮ್ಮ ವಿಭಾಗ ಐದು ಠಾಣೆಗಳ ನಿರ್ವಹಣೆ ಮಾಡಬೇಕಾಗಿದೆ. ಹೆದ್ದಾರಿಯ ಸಮಸ್ಯೆ ಬಗ್ಗೆ ಹೆದ್ದಾರಿ ಇಲಾಖೆಗೆ ಸೂಕ್ತ ಸಲಹೆ ನೀಡಲಾಗುತ್ತದೆ. ನಗರ ಪಂಚಾಯತ್ ಈ ಬಗ್ಗೆ ಒದಗಿಸುವ ಮಾಹಿತಿಯ ಪ್ರಕಾರ ಕ್ರಮ ಜರಗಿಸಿ
ಪಾರ್ಕಿಂಗ್ ವ್ಯವಸ್ಥೆ ಮಾಡಬೇಕಾಗಿದೆ. ಈಗಾಗಲೇ ನಮ್ಮನ್ನು ಕರೆದು ಮೂಲ್ಕಿ ತಹಶೀಲ್ದಾರ್, ನ.ಪಂ. ಆಡಳಿತಾಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಅವರು ನೀಡುವ ಸೂಚನೆಯನ್ನು ಜಾರಿಗೆ ತರುವ ಕೆಲಸ ನಮ್ಮದು.
ಮೊಹಮ್ಮದ್ ಶರೀಫ್,
ಇನ್ಸ್‌ಸ್ಪೆಕ್ಟರ್ ಟ್ರಾಫಿಕ್ ಉತ್ತರ ವಿಭಾಗ ಪಣಂಬೂರು