Advertisement

ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದ ಟೆಂಪೋ: ಚಾಲಕ ಸಾವು

11:18 PM Jun 30, 2022 | Team Udayavani |

ಮೂಲ್ಕಿ : ಕಾರ್ನಾಡು ಕೈಗಾರಿಕಾ ಪ್ರದೇಶದ ಬಳಿಯ ರಸ್ತೆಯಲ್ಲಿ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ 407 ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಚಾಲಕ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

Advertisement

ವಿದ್ಯುತ್‌ ತಂತಿಗಳು ಢಿಕ್ಕಿಯ ಪರಿಣಾಮ ತುಂಡಾಗಿ ಬಿದ್ದಿವೆ.

ಚಾಲಕ, ಕಾರ್ನಾಡು ಬಿಜಾಪುರ ಕಾಲನಿಯ ನಿವಾಸಿ, ಮೂಲತಃ ಕಲಬುರಗಿಯ ಯಶವಂತರಾಯ (43) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಗಾಯಗೊಂಡಿದ್ದ ಭಗವಂತರಾಯ (60) ಕುಮಾರ (45) ಚೇತರಿಸಿಕೊಳ್ಳುತ್ತಿದ್ದಾರೆ.

ಮಂಗಳೂರು ಉತ್ತರ ಟ್ರಾಫಿಕ್‌ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ :  ಮೂಡಿಗೆರೆ : ಕಾಡಾನೆ ದಾಳಿ, ಪ್ರಾಣಪಾಯದಿಂದ ಪಾರದ ಎಂಎಸ್ಐಎಲ್ ನೌಕರ

Advertisement
Advertisement

Udayavani is now on Telegram. Click here to join our channel and stay updated with the latest news.

Next