Advertisement

‘ಅಪ್ಪೆ ಟೀಚರ್‌’ಹೇಳುವ ‘ಮಾಲ್ಗುಡಿ ಡೇಸ್‌’ಕಥೆ!

07:16 AM Feb 07, 2019 | Team Udayavani |

ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಮನ್ವಂತರ ಸೃಷ್ಟಿಸಿದ ಸಿನೆಮಾ ‘ಅಪ್ಪೆ ಟೀಚರ್‌’. ವಿಭಿನ್ನ ಮ್ಯಾನರಿಸಂನಲ್ಲಿ ಮೂಡಿಬಂದ ಈ ಸಿನೆಮಾ ತುಳು ಸಿನೆಮಾ ಲೋಕದಲ್ಲಿ ಹೊಸ ಜಮಾನವನ್ನೇ ಸೃಷ್ಟಿಸಿತು. ಕಿಶೋರ್‌ ಮೂಡುಬಿದಿರೆ ಆ್ಯಕ್ಷನ್‌ ಕಟ್ ಹೇಳಿದ ಈ ಸಿನೆಮಾವನ್ನು ಸ್ಯಾಂಡಲ್‌ವುಡ್‌ ಮಂದಿ ಕೂಡ ಬೆರಗುಗಣ್ಣಿನಿಂದ ನೋಡಿದ್ದರು. ಕರಾವಳಿ ಭಾಗದಲ್ಲಂತು ಬಹಳಷ್ಟು ಸಕ್ಸಸ್‌ ಬರೆದ ಈ ಸಿನೆಮಾಕ್ಕೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಹೀಗಾಗಿ ಕಿಶೋರ್‌ ಅವರು ಮುಂದೆ ಏನು ಮಾಡಲಿದ್ದಾರೆ ಎಂಬ ಕುತೂಹಲ ಸಹಜವಾಗಿಯೇ ಕೇಳಿಬಂದಿತ್ತು.

Advertisement

ಮತ್ತೊಂದು  ತುಳು ಸಿನೆಮಾ ಮಾಡುತ್ತಾರೆ ಎಂಬ ಬಗ್ಗೆ ಗುಸು ಗುಸು ಕೇಳಿ ಬಂದಿತ್ತಾದರೂ, ಕಿಶೋರ್‌ ಅವರು ಮಾತ್ರ ಅದನ್ನು ನಗುವಿನಲ್ಲೇ ‘ಸದ‌್ಯಕ್ಕೆ ಪ್ಲ್ಯಾನ್‌ ಏನೂ ಇಲ್ಲ’ ಎನ್ನುತ್ತಲೇ ದೂರ ತಳ್ಳುತ್ತಿದ್ದರು. ವಿಶೇಷವೆಂದರೆ ಹೀಗೆ ಹೇಳುತ್ತಲೇ ಕಿಶೋರ್‌ ಇದೀಗ ಭರ್ಜರಿ ಎಂಟ್ರಿ ಕೊಡಲು ಅಣಿಯಾಗಿದ್ದಾರೆ. ಅದು ಕೂಡ ಕನ್ನಡದಲ್ಲಿ. ಅದರಲ್ಲಿಯೂ ಸ್ಯಾಂಡಲ್‌ವುಡ್‌ನ‌ ಬಹುತೇಕ ಕಲಾವಿದರು ಹಾಗೂ ಇನ್ನೂ ಫಿಕ್ಸ್‌ ಆಗದ ಕುಡ್ಲದ ಕಲಾವಿದರನ್ನೆಲ್ಲ ಜತೆಯಾಗಿಸಿಕೊಂಡು ಸ್ಯಾಂಡಲ್‌ವುಡ್‌ನ‌ಲ್ಲಿ ಹೊಸ ಸಿನೆಮಾ ಮಾಡಲು ರೆಡಿಯಾಗಿದ್ದಾರೆ. ಅಂದಹಾಗೆ ಈ ಸಿನೆಮಾಕ್ಕೆ ‘ಮಾಲ್ಗುಡಿ ಡೇಸ್‌’ ಎಂದು ಹೆಸರು ಫಿಕ್ಸ್‌ ಮಾಡಲಾಗಿದೆ. ಶಂಕರ್‌ ನಾಗ್‌ ನಿರ್ದೇಶನದ ‘ಮಾಲ್ಗುಡಿ ಡೇಸ್‌’ ಹೆಸರು ಕೇಳದವರಿಲ್ಲ. ಈಗ ಅದೇ ಶೀರ್ಷಿಕೆಯಲ್ಲಿ ಸಿನೆಮಾರೂಪ ಪಡೆಯುತ್ತಿರುವುದು ಹೊಸ ಸಂಚಲನ ಸೃಷ್ಟಿಸಿದೆ.

ಇತ್ತೀಚೆಗಷ್ಟೇ ಪುನೀತ್‌ ರಾಜ್‌ಕುಮಾರ್‌ ಅವರು ಸಿನೆಮಾ ಮೊದಲ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ವಿಜಯ ರಾಘವೇಂದ್ರ ಚಿತ್ರದ ನಾಯಕ ನಟನಾಗಿದ್ದಾರೆ. ಇನ್ನೊಂದು ವಿಶೇಷವೆಂದರೆ ‘ಅಪ್ಪೆ ಟೀಚರ್‌’ನ ನಿರ್ಮಾ ಪಕ ಕೆ.ರತ್ನಾಕರ ಕಾಮತ್‌ ಅವರೇ ಈ ಸಿನೆಮಾವನ್ನು ನಿರ್ಮಿಸುತ್ತಿ ದ್ದಾರೆ. ಸಂಗೀತ ನಿರ್ದೇಶಕ ಗಗನ್‌ ಬಡೇರಿಯ, ಛಾಯಾಚಿತ್ರಗ್ರಾಹಕ ಉದಯ್‌ ಲೀಲ, ಕಾರ್ಯಕಾರಿ ನಿರ್ಮಾಪಕ ರವಿ ಶಂಕರ್‌ ಪೈ, ಸಂಕಲನಕಾರ ಪ್ರದೀಪ್‌ ನಾಯಕ್‌, ಸಹ ನಿರ್ದೇಶಕರಾದ ಸಾತ್ವಿಕ್‌ ಹೆಬ್ಟಾರ್‌, ಶಶಾಂಕ್‌ ನಾರಾಯಣ, ಸಂದೀಪ್‌ ಬೆದ್ರ, ಕರುಣಾಕರ್‌ ಉಡುಪಿ ಹಾಗು ಪ್ರಚಾರ ಕಲಾವಿದರಾದ ಅಶ್ವಿ‌ನ್‌ ರಮೇಶ್‌ ಸಿನೆಮಾದಲ್ಲಿ ಕೈಜೋಡಿಸಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next