Advertisement

ಮುಳಗುಂದ: ಪತ್ರಿಕೆಗಳು ಸಮಾಜದ ಶಕ್ತಿಯಾಗಿ ಬೆಳೆಯಲಿ-ಎಚ್‌.ಕೆ. ಪಾಟೀಲ

06:01 PM Aug 05, 2023 | Team Udayavani |

ಮುಳಗುಂದ: ಪತ್ರಿಕೆಗಳು ಸಮಾಜದ ಆತ್ಮದಂತಿದ್ದು, ಸಮಾಜದಲ್ಲಿ ನಡೆಯುವ ಅನ್ಯಾಯ ತಡೆಗಟ್ಟಲು ಯಾವುದೇ ಒತ್ತಡಕ್ಕೆ ಒಳಲಾಗದೆ ಸಮಾಜದ ಶಕ್ತಿಯಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ
ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

Advertisement

ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿ ಮಠದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮುಳಗುಂದ ಘಟಕದ ವತಿಯಿಂದ ಜರುಗಿದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಪತ್ರಕರ್ತರು ನಿಜ ಸಂಗತಿಗಳನ್ನು ಪ್ರಕಟಿಸುವ ಮೂಲಕ ಬದಲಾವಣೆಗೆ ಸಾಕ್ಷಿಯಾಗಿದ್ದಾರೆ. ಇಂದು
ಕೆಲ ಪತ್ರಿಕೆಗಳು ಮಾಲೀಕರ ಸ್ವತ್ತಾಗುತ್ತಿದ್ದು, ಪತ್ರಕರ್ತರ ಧ್ವನಿ ಅಡಗಿಸುವ ಹುನ್ನಾರ ನಡೆದಿದೆ.

ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ತಡೆಯುಂಟು ಮಾಡುವ ಪರಿಸ್ಥಿತಿ ಉಂಟಾಗುತ್ತಿದೆ ಎಂದರು. ವಿಪ ಸದಸ್ಯ ಎಸ್‌.ವಿ. ಸಂಕನೂರ
ಮಾತನಾಡಿ, ಸಾಂವಿಧಾನಿಕ ವ್ಯವಸ್ಥೆಯಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗವನ್ನು ಎಚ್ಚರಗೊಳಿಸುವ ನಿಟ್ಟಿನಲ್ಲಿ ಪತ್ರಿಕಾರಂಗ ಕೆಲಸ ಮಾಡುತ್ತಿದ್ದು, ಸರ್ಕಾರ ಹಾಗೂ ಸಮಾಜದ ಕೊಂಡಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿದೆ ಎಂದರು. ಉಪನ್ಯಾಸ ನೀಡಿದ ವಿಶ್ರಾಂತ ಪ್ರಾಧ್ಯಾಪಕ ಅನಿಲ ವೈದ್ಯ, ಪತ್ರಕರ್ತರು ಓದುಗರ ಅಭಿರುಚಿಗೆ ತಕ್ಕಂತೆ ಕೆಲಸ ಮಾಡಬೇಕು.

ಹೆಚ್ಚು ವಿಷಯಗಳನ್ನು ಆಲಿಸುವ, ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಪತ್ರಿಕಾ ಧರ್ಮದ ನಿಯಮಗಳನ್ನು ಪಾಲಿಸಿ ಸಮಾಜ ಸುಧಾರಣೆಗೆ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು. ಸಾನ್ನಿಧ್ಯವನ್ನು ಧಾರವಾಡ ಮುರುಘಾಮಠ, ಮುಳಗುಂದ ಗವಿಮಠಾಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮೀಜಿ ವಹಿಸಿದ್ದರು.

Advertisement

ಎಸ್‌.ಎಂ. ನೀಲಗುಂದ, ಎಂ.ಡಿ. ಬಟ್ಟೂರ, ಮಹಾಂತೇಶ ನೀಲಗುಂದ, ಬಸವರಾಜ ಬಡ್ನಿ, ನಾಗರಾಜ ದೇಶಪಾಂಡೆ, ಬಿ.ವಿ. ಸುಂಕಾಪುರ,  ಡಾ| ಎಸ್‌.ಸಿ. ಚವಡಿ, ಆರ್‌.ಸಿ. ಕಾಮಾಜಿ, ಸೈಯದಲಿ ಶೇಖ್‌, ಬುದ್ದಪ್ಪ ಮಾಡಳ್ಳಿ, ಮಲ್ಲಪ್ಪ ಕುಂದಗೋಳ, ಮಹದೇವಪ್ಪ ಗಡಾದ, ರಾಜು ಹೆಬ್ಬಳ್ಳಿ, ವಸಂತ ಮಡ್ಲೂರ, ವಿ.ಡಿ. ಕಣವಿ, ಎಂ.ಎಂ. ಜಮಾಲಸಾಬನವರ, ಸಿಪಿ ಅಶೋಕ
ಸದಲಗಿ, ಮಂಜುನಾಥ ಗುಳೇದ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮದಲ್ಲಿ ವಿವಿಧ  ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ಶ್ವೇತಾ ದೋಟಿಕಲ್‌, ವಿನೂತಾ ಹೂಗಾರ ಪ್ರಾರ್ಥಿಸಿದರು. ಎಸ್‌.ಎಂ. ಉಜ್ಜಣ್ಣವರ ಸ್ವಾಗತಿಸಿದರು. ಮಹೇಶ ನೀಲಗುಂದ
ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next