Advertisement

ಉಡುಪಿ, ದಕ್ಷಿಣಕನ್ನಡ ಜಿಲ್ಲೆಯ ನಾಲ್ವರು ಅಧಿಕಾರಿ, ಸಿಬಂದಿಗೆ ಮುಖ್ಯಮಂತ್ರಿ ಪದಕ

12:49 AM Mar 29, 2023 | Team Udayavani |

ನವೀನ್‌ಚಂದ್ರ ಜೋಗಿ
ಸುಳ್ಯ: ಇಲ್ಲಿ ವೃತ್ತ ನಿರೀಕ್ಷಕರಾಗಿದ್ದ ನವೀನ್‌ ಚಂದ್ರ ಜೋಗಿ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಗುಪ್ತವಾರ್ತೆಯಲ್ಲಿ ಇನ್‌ಸ್ಪೆಕ್ಟರ್‌ ಆಗಿದ್ದ ಇವರು 3 ವರ್ಷಗಳ ಹಿಂದೆ ಸುಳ್ಯ ಪೊಲೀಸ್‌ ವರ್ಗಾವಣೆಗೊಂಡು ಆಗಮಿಸಿದ್ದರು. ಸುಳ್ಯದಲ್ಲಿ ಹಲವಾರು ಪ್ರಕರಣಗಳನ್ನು ಬೇದಿಸಿದ್ದರು. ಉಡುಪಿ -ಕಾಪು ಮೂಲದವರಾದ ಅವರನ್ನು ಚುನಾವಣೆ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದಷ್ಟೇ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾಯಿಸಲಾಗಿದೆ.

Advertisement

ರಾಜೇಂದ್ರ ನಾಯ್ಕ
ಮಲ್ಪೆ: ರಾಜೇಂದ್ರ ನಾಯ್ಕ ಎಂ.ಎನ್‌. ಹೆಜಮಾಡಿ ಕರಾವಳಿ ಕಾವಲು ಪೊಲೀಸ್‌ ಠಾಣೆಯ ಉಪ ನಿರೀಕ್ಷಕರು. 12 ವರ್ಷಗಳ ಹಿಂದೆ ಪೊಲೀಸ್‌ ಇಲಾಖೆಗೆ ಸೇರಿದ ಅವರು ಹೊಸನಗರ ಠಾಣೆಯಿಂದ 6 ತಿಂಗಳ ಹಿಂದೆ ಹೆಜಮಾಡಿಗೆ ವರ್ಗಾವಣೆಗೊಂಡಿದ್ದರು. ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ಮಂಡಿಕೊಪ್ಪದವರು.

ಮಂಗಳೂರಿಗೆ 2 ಪದಕ
ಮಂಗಳೂರು: ಮಂಗಳೂರು ಸಂಚಾರ ದಕ್ಷಿಣ ಠಾಣೆಯಲ್ಲಿ ಪೊಲೀಸ್‌ ಉಪನಿರೀಕ್ಷಕರಾಗಿರುವ ಸಂತೋಷ್‌ ಕುಮಾರ್‌ ಕೆ. ಮತ್ತು ಸಂಚಾರ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಹೆಡ್‌ಕಾನ್‌ಸ್ಟೆಬಲ್‌ ಆಗಿರುವ ಮಣಿಕಂಠ ಅವರು 2022ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಸಂತೋಷ್‌ ಕುಮಾರ್‌ ಕೆ.
ಬಜಾಲ್‌ ಪಳ್ಳಕೆರೆ ನಿವಾಸಿ ಸಂತೋಷ್‌ 1993ರಲ್ಲಿ ಸೇವೆಗೆ ಸೇರ್ಪಡೆಗೊಂಡು ಹಿಂದೆ ಕುಂದಾಪುರ, ಬರ್ಕೆ, ಪುತ್ತೂರು, ಬರ್ಕೆ, ಪಾಂಡೇಶ್ವರ, ಕದ್ರಿಯಲ್ಲಿ ಸೇವೆ ಸಲ್ಲಿಸಿದ್ದರು. ಡಿಸಿಐಬಿಯಲ್ಲಿ ಸೇವೆ ಸಲ್ಲಿಸಿದ್ದ ಸಂದರ್ಭದಲ್ಲಿ ಹಲವು ಬಾರಿ ಪುರಸ್ಕಾರ ಪಡೆದುಕೊಂಡಿದ್ದರು.

ಮಣಿಕಂಠ
ಮಣಿಕಂಠ ಮಂಗಳೂರಿನ ಮಂದಾರಬೈಲು ನಿವಾಸಿ. 2000ರಲ್ಲಿ ಸೇವೆಗೆ ಸೇರ್ಪಡೆಗೊಂಡು ಪುತ್ತೂರು ಗ್ರಾಮಾಂತರ, ಬಂದರು, ಪಾಂಡೇಶ್ವರ, ಉರ್ವ ಠಾಣೆ, ಸಂಚಾರ ಪಶ್ಚಿಮ, ಬರ್ಕೆ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next