Advertisement

ಅವಧೇಶ್ ರೈ ಹತ್ಯೆ ಪ್ರಕರಣ: ಮಾಜಿ ಶಾಸಕ- ಮಾಫಿಯಾ ಡಾನ್ ಮುಕ್ತಾರ್ ಅನ್ಸಾರಿ ದೋಷಿ ಸಾಬೀತು

12:38 PM Jun 05, 2023 | Team Udayavani |

ವಾರಾಣಸಿ: 32 ವರ್ಷದ ಹಿಂದಿನ ಅವಧೇಶ್ ರೈ ಹತ್ಯೆ ಪ್ರಕರಣದಲ್ಲಿ ಮಾಜಿ ಶಾಸಕ- ಮಾಫಿಯಾ ಡಾನ್ ಮುಕ್ತಾರ್ ಅನ್ಸಾರಿಗೆ ವಾರಾಣಸಿಯ ವಿಶೇಷ ಸಂಸದ- ಶಾಸಕ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.

Advertisement

ವಾರಾಣಸಿಯ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಮಧ್ಯಾಹ್ನ 2 ಗಂಟೆಗೆ ಪ್ರಕಟಿಸಲಿದೆ.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲವು ಮೇ 19ರಂದು ವಿಚಾರಣೆ ಅಂತ್ಯಗೊಳಿಸಿತ್ತು. ಜೂನ್ 5ಕ್ಕೆ ತೀರ್ಪುನ್ನು ಕಾಯ್ದಿರಿಸಿತ್ತು.

1991ರ ಆಗಸ್ಟ್ 3ರಂದು, ಕಾಂಗ್ರೆಸ್ ನಾಯಕ ಮತ್ತು ಮಾಜಿ ಶಾಸಕ ಅಜಯ್ ರೈ ಅವರ ಸಹೋದರ ಅವಧೇಶ್ ರೈ ಅವರನ್ನು ವಾರಾಣಸಿಯಲ್ಲಿ ಅವರ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಇದನ್ನೂ ಓದಿ:ದಾಂಪತ್ಯಕ್ಕೆ ಕಾಲಿಟ್ಟ ಅಂಬಿ ಪುತ್ರ ಅಭಿಷೇಕ್:‌ ರಜಿನಿಕಾಂತ್‌ ಸೇರಿ ಹಲವು ಗಣ್ಯರು ಭಾಗಿ

Advertisement

ಈ ಪ್ರಕರಣದಲ್ಲಿ ಮುಕ್ತಾರ್ ಅನ್ಸಾರಿ, ಭೀಮ್ ಸಿಂಗ್ ಮತ್ತು ಮಾಜಿ ಶಾಸಕ ಅಬ್ದುಲ್ ಕಲೀಂ ಅವರನ್ನು ಆರೋಪಿಗಳೆಂದು ಅಜಯ್ ಸಿಂಗ್ ಎಫ್ಐಆರ್ ನಲ್ಲಿ ನಮೂದಿಸಿದ್ದರು.

ಉತ್ತರ ಪ್ರದೇಶದ ಮೊಹಮ್ಮದಬಾದ್ ಏರಿಯಾದಲ್ಲಿ ನಡೆದ ಕೊಲೆ ಯತ್ನ ಸಂಚು ಪ್ರಕರಣದಲ್ಲಿ ಮುಕ್ತಾರ್ ಅನ್ಸಾರಿಯವರನ್ನು ಇದೇ ನ್ಯಾಯಾಲವು ಮೇ 17ರಂದು ಖುಲಾಸೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next