Advertisement

ರಾಧಿಕಾ ಮರ್ಚೆಂಟ್ ಜೊತೆ ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ನಿಶ್ಚಿತಾರ್ಥ

04:51 PM Dec 29, 2022 | Team Udayavani |

ಮುಂಬೈ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿ ಕಿರಿಯ ಪುತ್ರ ಅನಂತ್ ಅಂಬಾನಿ(27ವರ್ಷ) ನಿಶ್ಚಿತಾರ್ಥ ಗುರುವಾರ (ಡಿಸೆಂಬರ್ 29) ರಾಧಿಕಾ ಮರ್ಚೆಂಟ್ ಜೊತೆ  ನೆರವೇರಿದೆ.

Advertisement

ಇದನ್ನೂ ಓದಿ:ಸುಮ್ಮನಿದ್ದ ಹಾವಿಗೆ ಗುಂಡು ಹೊಡೆಯಲು ಹೋಗಿ ತನ್ನ ಜೀವವನ್ನೇ ಅಪಾಯಕ್ಕೆ ಸಿಲುಕಿಸಿಕೊಂಡ…

ಇಂದು ರಾಜಸ್ಥಾನದ ನಾಥ್ ದ್ವಾರದಲ್ಲಿರುವ ಶ್ರೀನಾಥಜೀ ದೇವಾಲಯದಲ್ಲಿ ಅನಂತ್ ಹಾಗೂ ರಾಧಿಕಾ ನಿಶ್ಚಿತಾರ್ಥ ನಡೆದಿದ್ದು, ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು, ಸ್ನೇಹಿತರು ಹಾಜರಿದ್ದರು.

ಶೈಲಾ ಮತ್ತು ವಿರೇನ್ ಮರ್ಚೆಂಟ್ ದಂಪತಿ ಪುತ್ರಿ ರಾಧಿಕಾ ಮರ್ಚೆಂಟ್. ಅನಂತ್ ಅಂಬಾನಿ ಹಾಗೂ ರಾಧಿಕಾ ಕಳೆದ ಹಲವಾರು ವರ್ಷಗಳಿಂದ ಆತ್ಮೀಯವಾಗಿದ್ದರು. ಇಂದು ಅವರಿಬ್ಬರ ನಿಶ್ಚಿತಾರ್ಥ ನಡೆಯುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡಲು ದಾರಿ ಮಾಡಿಕೊಟ್ಟಂತಾಗಿದೆ. ಈ ನಿಟ್ಟಿನಲ್ಲಿ ಇಬ್ಬರ ಜೀವನ ಮುಂಬರುವ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಸಾಗುವಂತಾಗಲಿ ಎಂದು ಎರಡೂ ಕುಟುಂಬಗಳ ಹಿರಿಯ ಸದಸ್ಯರು ಆಶೀರ್ವದಿಸಿ ಶುಭ ಹಾರೈಸಿರುವುದಾಗಿ ವರದಿ ತಿಳಿಸಿದೆ.

Advertisement

ಅನಂತ್ ಅಂಬಾನಿ ಅಮೆರಿಕ ಬ್ರೌನ್ ಯೂನಿರ್ವಸಿಟಿಯಲ್ಲಿ ವಿದ್ಯಾಭ್ಯಾಸ ಪಡೆದಿದ್ದರು. ಬಳಿಕ ಜಿಯೋ ಪ್ಲ್ಯಾಟ್ ಫಾರಂ ಮತ್ತು ರಿಯಲನ್ಸ್ ರೀಟೈಲ್ ವೆಂಚರ್ಸ್ ನ ಮಂಡಳಿಯ ಸದಸ್ಯರಾಗಿ, ವಿವಿಧ ಸ್ತರಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಅನಂತ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಇಂಧನ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ರಾಧಿಕಾ ಮರ್ಚೆಂಟ್ ನ್ಯೂಯಾರ್ಕ್ ಯೂನಿರ್ವಸಿಟಿಯಲ್ಲಿ ಪದವೀಧರೆಯಾಗಿದ್ದು, ಎನ್ಕೋರ್ ಹೆಲ್ತ್ ಕೇರ್ ಮಂಡಳಿಯ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next