Advertisement

Mukesh Ambani; ಬಾಕಿ ತೀರಿಸಲು 25000 ಕೋಟಿ ರೂ. ಸಾಲಕ್ಕೆ ರಿಲಯನ್ಸ್‌ ಯತ್ನ: ವರದಿ

11:51 PM Dec 10, 2024 | Team Udayavani |

ಮುಂಬಯಿ: ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿ ತನ್ನ ಬಾಕಿಗಳನ್ನು ತೀರಿಸಲು ಬ್ಯಾಂಕ್‌ಗಳಿಂದ ಸುಮಾರು 25,000 ಕೋ. ರೂ. ಸಾಲಕ್ಕೆ ಪ್ರಯತ್ನಿ ಸುತ್ತಿದೆ.

Advertisement

ಬಹುಶಃ ಭಾರತೀಯ ಕಂಪೆನಿಯೊಂದು ವರ್ಷದಲ್ಲಿ ವಿದೇಶಿ ಬ್ಯಾಂಕುಗಳಿಂದ ಪಡೆಯಲಿ ರುವ ಅತಿದೊಡ್ಡ ಸಾಲ ಎನಿಸಲಿದೆ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ. ಮುಂದಿನ ವರ್ಷಕ್ಕೆ ಕಂಪನಿಯ ಸಾಲದ ಬಾಕಿಯೂ 24,610 ಕೋಟಿ ರೂ. (2.9 ಬಿಲಿಯನ್‌ ಡಾಲರ್‌ಗೆ )ಏರಿಕೆಯಾಗಲಿದೆ ಎಂದು ವರದಿಯಲ್ಲಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ 12ಕ್ಕೂ ಹೆಚ್ಚು ಬ್ಯಾಂಕ್‌ಗಳೊಂದಿಗೆ ಕಂಪನಿ ಮಾತುಕತೆಯನ್ನು ನಡೆಸುತ್ತಿದೆ‌. ಕಂಪನಿಯು ಕಳೆದ ವರ್ಷ ಕೂಡ ಸುಮಾರು 800 ಕೋಟಿ ರೂ. ಸಾಲವನ್ನು ವಿದೇಶಗಳಿಂದ ಪಡೆದುಕೊಂಡಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next