Advertisement

ಮುಕೇಶ್‌ ಅಂಬಾನಿ ವೇತನ 15 ಕೋಟಿ

03:45 AM Jun 29, 2017 | |

ನವದೆಹಲಿ: ಬರೋಬ್ಬರಿ 15 ಕೋಟಿ ರೂ. ಸಂಬಳ. ಅದೂ, ಸತತ ಒಂಭತ್ತು ವರ್ಷಗಳಿಂದ. ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರ ವೇತನ ಇದು. 

Advertisement

ಇತರ ಕಂಪನಿಗಳ ಮುಖ್ಯಸ್ಥರ ಸಂಬಳದಲ್ಲಿ ಭಾರಿ ಪ್ರಮಾಣದಲ್ಲಿ ಭಾರಿ ಬದಲಾವಣೆಯಾಗಿದ್ದರೂ ಮುಕೇಶ್‌ ಮಾತ್ರ ತನ್ನ ಸಂಬಳವನ್ನು 15 ಕೋಟಿಗೆ ಸೀಮಿತಗೊಳಿಸಿದ್ದಾರೆ.  ಸಂಬಳದ ಜೊತೆಗೆ ಇತರ ವಿಶೇಷ ಸೌಲಭ್ಯಗಳು , ಭತ್ಯೆ ಗಳು ಸೇರಿದರೆ  ವಾರ್ಷಿಕ ವೇತನ 24 ಕೋಟಿರೂಗೆ ಮುಟ್ಟಲಿದೆ. ಕಳದೆ 2008 ಮತ್ತು 2009 ನೇ ಸಾಲಿನಿಂದಲೂ ಅವರು ವಾರ್ಷಿಕವಾಗಿ 15 ಕೋಟಿರೂ. ವೇತನ ಪಡೆಯುತ್ತಿದ್ದಾರೆ. ಎಂದು ಕಂಪನಿ ತನ್ನ ವಾರ್ಷಿಕ ವರದಿಯಲ್ಲಿ ಇದನ್ನು ಸ್ಪಷ್ಟಪಡಿಸಿದೆ.ಇತರೆ ಕಾರ್ಯಕಾರಿ ನಿರ್ದೇàಶಕರ ವೇತನದಲ್ಲಿ ಏರಿಕೆಯಾಗಿದ್ದರೂ ಅಂಬಾನಿ ಮಾತ್ರ ತನ್ನ ಸಂಬಳವನ್ನು ವಾರ್ಷಿಕವಾಗಿ 15 ಕೋಟರೂಗೆ ಸೀಮಿತ ಮಾಡಿಕೊಂಡಿದ್ದಾರೆ. ಅವರಿ ಪತ್ನಿ ನೀತಾ ಅಂಬಾನಿ ನಿರ್ದೇಶಕರಾಗಿಲ್ಲದೆ ಇದ್ದರೂ ನಾಲ್ಕು ಲಕ್ಷರೂ ಸಿಟ್ಟಂಗ್‌ ಫೀ ಮತ್ತು 1.35 ಕೋಟಿರೂ ಕಮೀಷನ್‌ ಪಡೆಯುತ್ತಿದ್ದಾರೆ. ಅಂಬಾನಿ ಅವರ ಸೋದರ ಸಂಬಂದಿ ನಿಖೀಲ್‌ ಆರ್‌.ಮೇಸ್ವಾನಿ ಮತ್ತು ಹಿತಲ್‌ ಆರ್‌ ಮೇಸ್ವಾನಿ ತಲಾ 16.58 ಕೋಟಿ ವೇತನ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next