Advertisement
ಪ್ರಸ್ತುತ ಮುಕೇಶ್ ನಿವ್ವಳ ಸಂಪತ್ತಿನ ಮೌಲ್ಯ 5.617ಲಕ್ಷ ಕೋಟಿ ರೂ. (75.1 ಬಿಲಿಯನ್ ಡಾಲರ್). ಅವರು ಈಗ ಫೇಸ್‌ಬುಕ್ ಮಾಲಿಕ ಮಾರ್ಕ್ ಜುಕರ್ ಬರ್ಗ್ ನಂತರದ ಸ್ಥಾನದಲ್ಲಿದ್ದಾರೆ. ಜುಕರ್‌ಬರ್ಗ್ ಸಂಪತ್ತಿನ ಮೌಲ್ಯ 6.658 ಲಕ್ಷ ಕೋಟಿ ರೂ. (89 ಬಿಲಿಯನ್ ಡಾಲರ್). ವಾರೆನ್ ಬಫೆಟ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲೇ ಇದ್ದರು. ಆದರೆ ಅವರು 2006ರಿಂದ ತಮ್ಮ ಮಾಲಿಕತ್ವದ ಬರ್ಕ್ ಶೈರ್ ಹ್ಯಾಥ್‌ವೇನ 37 ಬಿಲಿಯನ್ ಡಾಲರ್ ಮೊತ್ತದ ಷೇರುಗಳನ್ನು ಸಾಮಾಜಿಕ ಕೆಲಸಗಳಿಗೆ ದಾನ ಮಾಡುತ್ತಿದ್ದಾರೆ. ಆದ್ದರಿಂದ ಅವರ ಶ್ರೀಮಂತಿಕೆ ಕುಸಿದಿದೆ. ಇನ್ನು ಅಗ್ರಸ್ಥಾನದಲ್ಲಿ ಅಮೆಜಾನ್ ಮಾಲಿಕ ಜೆಫ್ ಬಿಜೋಸ್ ಅವರೇ ಮುಂದುವರಿದಿದ್ದಾರೆ. ಅವರ ಸಂಪತ್ತಿನ ಮೌಲ್ಯ 13.89 ಲಕ್ಷ ಕೋಟಿ ರೂ. (185.8 ಬಿಲಿಯನ್ಡಾಲರ್).
ಮುಕೇಶ್ ಅಂಬಾನಿ ಮಾಲಿಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆ ಭಾರೀ ಪ್ರಮಾಣದಲ್ಲಿ ಏರಿದ್ದರ ಪರಿಣಾಮ ಇನ್ನೊಂದು ರೀತಿಯಲ್ಲಿ ಆಗಿದೆ. ಇದೀಗ ರಿಲಯನ್ಸ್ ವಿಶ್ವದ 49ನೇ ಮೌಲ್ಯಯುತ ಕಂಪನಿ ಎನಿಸಿಕೊಂಡಿದೆ. ಅದರ ಮಾರುಕಟ್ಟೆ ಮೌಲ್ಯ 13 ಲಕ್ಷ ಕೋಟಿ ರೂ. ಡಾಲರ್ ಲೆಕ್ಕಾಚಾರದಲ್ಲಿ 173 ಬಿಲಿಯನ್. 171.9 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿರುವ ಒರ್ಯಾಕಲ್ ಕಾರ್ಪೋರೇಷನ್ 50ನೇ ಸ್ಥಾನದಲ್ಲಿದೆ. ಚಿಲ್ಲರೆ ಮಾರಾಟ ಮಳಿಗೆಗಳು, ತೈಲೋದ್ಯಮ, ದೂರ ಸಂಪರ್ಕ ಕ್ಷೇತ್ರ, ತಂತ್ರಾಂಶ, ಜವಳಿ, ಮಾಧ್ಯಮ, ಕ್ರೀಡೆ, ಬ್ಯಾಂಕಿಂಗ್ ಹೀಗೆ ಹಲವಾರು ಉದ್ಯಮಗಳಲ್ಲಿ ರಿಲಯನ್ಸ್ ಮುಂಚೂಣಿಯಲ್ಲಿದೆ. ಪ್ರಸ್ತುತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್, 5ಜಿ ತರಂಗಾಂತರ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.