Advertisement

ಅದಾನಿ ಭಾರತದ ನಂ.2 ಸಿರಿವಂತ ಉದ್ಯಮಿ; ನಿತ್ಯದ ಗಳಿಕೆ 163 ಕೋಟಿ ರೂಪಾಯಿ

10:02 AM Oct 01, 2021 | Team Udayavani |

ಹೊಸದಿಲ್ಲಿ: ದೇಶದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾದ ಗೌತಮ್‌ ಅದಾನಿ, ಭಾರತದ 2ನೇ ಅತೀ ದೊಡ್ಡ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

“2021ರ ಐಐಎಫ್ಎಲ್‌ ವೆಲ್ತ್‌ ಹೊರೂನ್‌ ಇಂಡಿಯಾ ರಿಚ್‌ ಲಿಸ್ಟ್‌’ ಎಂಬ ಏಷ್ಯಾದ ಸಿರಿವಂತರ ಪಟ್ಟಿ ಯೊಂದು ಬಿಡುಗಡೆಯಾಗಿದ್ದು, ಅದರಲ್ಲಿ ಅದಾನಿ ಮತ್ತು ಕುಟುಂಬ ಕಳೆದ ವರ್ಷ ದಿನಕ್ಕೆ 1,002 ಕೋಟಿ ರೂ. ಆದಾಯಗಳಿಸಿದ್ದಾರೆ. ಈ ಗಳಿಕೆಯಿಂದಾಗಿ ಅವರ ಸಮಸ್ತ ಆಸ್ತಿಯ ಮೌಲ್ಯ 1,40,200 ಕೋಟಿ ರೂ.ಗಳಿಂದ 5,05,900 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.

ಹಾಗಾಗಿ, ಕಳೆದ ವರ್ಷ ಈ ಪಟ್ಟಿಯ ನಾಲ್ಕನೇ ಸ್ಥಾನದಲ್ಲಿದ್ದ ಗೌತಮ್‌, ಈ ವರ್ಷ ಟಾಪ್‌ 2ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಮತ್ತೂಂದು ವಿಶೇಷವೇನೆಂದರೆ, ದುಬಾೖಯಲ್ಲಿ ವಾಸವಾಗಿರುವ ಗೌತಮ್‌ ಅದಾನಿ ಯವರ ಸಹೋದರ ಹಾಗೂ ಉದ್ಯಮಿ ವಿನೋದ್‌ ಶಾಂತಿಲಾಲ್‌ ಅದಾನಿ, ಈ ಪಟ್ಟಿಯ ಟಾಪ್‌ 10ರಲ್ಲಿ ಕಾಣಿಸಿ ಕೊಂಡಿದ್ದಾರೆ.

ಕಳೆದೊಂದು ವರ್ಷದಲ್ಲಿ ವಿನೋದ್‌ ಅವರ ಆದಾಯ ಶೇ. 21.20ಯಷ್ಟು ಏರಿಕೆ ಯಾಗಿದ್ದು ಅವರ ಆಸ್ತಿ ಮೌಲ್ಯ 1,31,600 ಕೋಟಿ ರೂ.ಗಳಿಗೆ ಮುಟ್ಟಿದೆ. ಹೀಗಾಗಿ, ಅವರು ಸಿರಿವಂತರ ಪಟ್ಟಿಯಲ್ಲಿ 12 ಸ್ಥಾನಗಳ ಏರಿಕೆ ಕಂಡು, ಸದ್ಯಕ್ಕೆ ಟಾಪ್‌ 8ರಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತದ ಟಾಪ್‌ 10 ಸಿರಿವಂತರು :

Advertisement

ಸಂ.       ಹೆಸರು ಆಸ್ತಿ ಮೌಲ್ಯ

( ಕೋಟಿ ರೂ.ಗಳಲ್ಲಿ)                                                             ಏರಿಕೆ (ಶೇ.)

  1. ಮುಕೇಶ್‌ ಅಂಬಾನಿ ಮತ್ತು ಕುಟುಂಬ 7,18,000               9
  2. ಗೌತಮ್‌ ಅದಾನಿ ಮತ್ತು ಕುಟುಂಬ 5,05,900               261
  3. ಶಿವ ನಾದಾರ್‌ ಮತ್ತು ಕುಟುಂಬ 2,36,600 67
  4. ಎಸ್‌ಪಿ ಹಿಂದೂಜಾ ಮತ್ತು ಕುಟುಂಬ 2,20,000               53
  5. ಎಲ್‌ಎನ್‌ ಮಿತ್ತಲ್‌ ಮತ್ತು ಕುಟುಂಬ 1,74,400               187
  6. ಸೈರಸ್‌ ಎಸ್‌ ಪೂನಾವಾಲಾ ಮತ್ತು ಕುಟುಂಬ 1,63,700               74
  7. ರಾಧಾಕೃಷ್ಣನ್‌ ದಮನಿ ಮತ್ತು ಕುಟುಂಬ 1,54,300               77
  8. ವಿನೋದ್‌ ಶಾಂತಿಲಾಲ್‌ ಮತ್ತು ಕುಟುಂಬ 1,31,600               212
  9. ಕುಮಾರ ಮಂಗಳಂ ಬಿರ್ಲಾ ಮತ್ತು ಕುಟುಂಬ 1,22,000               230
  10. ಜೇ ಚೌಧರಿ 1,21,600              85
Advertisement

Udayavani is now on Telegram. Click here to join our channel and stay updated with the latest news.

Next