Advertisement

ಎಸ್‌. ಎಸ್‌ ಪ್ರಕಾಶ್‌ ರಾಜ್‌ ನಿರ್ದೇಶನದ ‘ಶರ’ ಚಿತ್ರಕ್ಕೆ ಮುಹೂರ್ತ

01:16 PM Sep 24, 2022 | Team Udayavani |

ನವನಟ ಪ್ರಶಾಂತ ಜೈ ನಾಯಕನಾಗಿ ಮತ್ತು ರಕ್ಷಾ ಡಿ. ಎನ್‌ ಹಾಗೂ ಲಾವಣ್ಯ ನಾಯಕಿಯರಾಗಿ ಅಭಿನಯಿಸುತ್ತಿರುವ ಹೊಸಚಿತ್ರ “ಶರ’ದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು.

Advertisement

“ಡ್ರೀಮ್ಸ್ ಕ್ಯಾಪ್ಚರ್‌ ಮೂವಿ ಮೇಕರ್’ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ “ಶರ’ ಸಿನಿಮಾಕ್ಕೆ ಎಸ್‌. ಎಸ್‌ ಪ್ರಕಾಶ್‌ ರಾಜ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. “ಶರ’ ಸಿನಿಮಾದ ಶೀರ್ಷಿಕೆಗೆ “ತಾಯಿಯಿಂದ ಜನನ, ಪ್ರೇಯಸಿಯಿಂದ ಮರಣ’ ಎಂಬ ಅಡಿಬರಹವಿದ್ದು, ಲವ್‌ ಕಂ ಥ್ರಿಲ್ಲರ್‌ ಕಥೆಯೊಂದನ್ನು ಚಿತ್ರತಂಡ ತೆರೆಮೇಲೆ ಹೇಳಲು ಹೊರಟಿದೆ.

ಇದನ್ನೂ ಓದಿ:ಸಿಕ್ಸರ್ ಶರ್ಮಾ; ಭರ್ಜರಿ ಸಿಕ್ಸರ್ ಗಳ ಮೂಲಕ ಮಾರ್ಟಿನ್ ಗಪ್ಟಿಲ್ ದಾಖಲೆ ಮುರಿದ ರೋಹಿತ್

“ಶರ’ ಸಿನಿಮಾದ ಹಾಡುಗಳಿಗೆ ಅಭಿಷೇಕ್‌ ಸಂಗೀತ ಸಂಯೋಜನೆಯಿದ್ದು, ಚಿತ್ರಕ್ಕೆ ಸಾಮ್ರಾಟ್‌ ನಾಗರಾಜ್‌ ಛಾಯಾಗ್ರಹಣವಿದೆ. ಸದ್ಯ “ಶರ’ ಸಿನಿಮಾದ ಮುಹೂರ್ತವನ್ನು ನೆರವೇರಿಸಿಕೊಂಡಿರುವ ಚಿತ್ರತಂಡ, ಅಕ್ಟೋಬರ್‌ ಮೊದಲ ವಾರದಿಂದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹಂಚಿನ ಸಿದ್ದಾಪುರ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷದ ಆರಂಭದಲ್ಲಿ ಹೊಸಬರ “ಶರ’ ತೆರೆಗೆ ಬರುವ ಸಾಧ್ಯತೆ ಇದೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next