ನವನಟ ಅಭಯ್ ನಾಯಕರಾಗಿ ನಟಿಸುತ್ತಿರುವ “ಮಂಡ್ಯ ಹೈದ’ ಚಿತ್ರದ ಮುಹೂರ್ತ ಇತ್ತೀಚೆಗೆ ನಗರದ ಬಂಡಿ ಮಾಂಕಾಳಮ್ಮ ದೇವಸ್ಥಾನದಲ್ಲಿ ನಡೆ ಯಿತು.
ಮಾಜಿ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್, ಶಾಸಕ ರವಿ ಸುಬ್ರಮಣ್ಯ ಮುಖ್ಯಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಇದನ್ನೂ ಓದಿ:‘ಆತ ಯಾರೆಂದು ಗೊತ್ತಿಲ್ಲ’ ಎಂದಿದ್ದ ಅಸ್ಸಾಂ ಸಿಎಂಗೆ ಮಧ್ಯರಾತ್ರಿ ಕರೆ ಮಾಡಿದ ಶಾರುಖ್ ಖಾನ್
ಯುವನಟ ಅಭಯ್ ಚಂದ್ರಶೇಖರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ಕಿರುತೆರೆನಟಿ ಭೂಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಅಭಯ್ ತಂದೆ ಚಂದ್ರಶೇಖರ್ ಅವರೇ ನಿರ್ಮಾಣ ಮಾಡುತ್ತಿದ್ದು, ಈ ಚಿತ್ರಕ್ಕೆ ವಿ.ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.