Advertisement

ರಾಧಿಕಾ ಕುಮಾರಸ್ವಾಮಿಯ ‘ಅಜಾಗ್ರತ’ ಸಿನಿಮಾಕ್ಕೆ ಮುಹೂರ್ತ

01:00 PM May 16, 2023 | Team Udayavani |

ನಟಿ ರಾಧಿಕಾ ಕುಮಾರಸ್ವಾಮಿ “ಅಜಾಗ್ರತ’ ಎಂಬ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳು ತ್ತಿರುವ ಸುದ್ದಿ ಇತ್ತೀಚೆಗಷ್ಟೇ ಹೊರ ಬಿದ್ದಿದ್ದು, ನಿಮಗೆ ಗೊತ್ತಿರಬಹುದು. ಸ್ವತಃ ಈ ಸುದ್ದಿಯನ್ನು ಖಚಿತಪಡಿಸಿದ್ದ ಚಿತ್ರತಂಡ, ಇದೀಗ “ಅಜಾಗ್ರತ’ ಸಿನಿಮಾದ ಮುಹೂರ್ತವನ್ನು ನೆರೆವೇರಿಸುವ ಮೂಲಕ ಸಿನಿಮಾದ ಚಿತ್ರೀಕರಣಕ್ಕೂ ಚಾಲನೆ ನೀಡಿದೆ.

Advertisement

ಹೈದರಾಬಾದ್‌ನ “ರಾಮನಾಯ್ಡು ಸ್ಟುಡಿಯೋ’ದಲ್ಲಿ “ಅಜಾಗ್ರತ’ ಸಿನಿಮಾದ ಮುಹೂರ್ತ ಸಮಾರಂಭ ಇದೇ ಮೇ. 13ರಂದು ಅದ್ಧೂರಿಯಾಗಿ ನೆರವೇರಿತು. ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಎ. ಎಂ. ರತ್ನಂ “ಅಜಾಗ್ರತ’ ಸಿನಿಮಾದ ಮೊದಲ ಸನ್ನಿವೇಶಕ್ಕೆ ಆರಂಭ ಫ‌ಲಕ ತೋರಿದರೆ, ಖ್ಯಾತ ವಿತರಕ ಟ್ಯಾಗೋರ್‌

ಮಧು ಕ್ಯಾಮೆರಾ ಚಾಲನೆ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಈ ವೇಳೆ ತೆಲುಗು ಮತ್ತು ಕನ್ನಡ ಚಿತ್ರರಂಗದ ಅನೇಕ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು, ಚಿತ್ರತಂಡಕ್ಕೆ ಶುಭ ಕೋರಿದರು.

ಇನ್ನು ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ಅಭಿನಯಿಸುತ್ತಿರುವ “ಅಜಾಗ್ರತ’ ನಿಮಾದಲ್ಲಿ ಬಾಲಿವುಡ್‌ ನಟ ಶ್ರೇಯಸ್‌ ತಲ್ಪಾಡೆ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಾವ್‌ ರಮೇಶ್‌, ಸುನೀಲ್, ಆದಿತ್ಯ ಮೆನನ್‌, ರಾಘವೇಂದ್ರ ಶ್ರವಣ್‌, ದೇವರಾಜ್‌, ಜಯಪ್ರಕಾಶ್‌, ವಿನಯಾ ಪ್ರಸಾದ್‌ ಮುಂತಾದವರು ಈ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಕನ್ನಡ, ತೆಲುಗು ಸೇರಿದಂತೆ ಏಳು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾವನ್ನು ರವಿರಾಜ್‌ ನಿರ್ಮಿಸುತ್ತಿದ್ದಾರೆ. ಎಂ. ಶಶಿಧರ್‌ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾಕ್ಕೆ ಸಂದೀಪ್‌ ವಲ್ಲೂರಿ ಛಾಯಾಗ್ರಹಣ, ಶ್ರೀಹರಿ ಸಂಗೀತ ಸಂಯೋಜನೆ, ರವಿವರ್ಮ ಸಾಹಸ ಸಂಯೋಜನೆ ಈ ಸಿನಿಮಾಕ್ಕಿದೆ. ಸದ್ಯ “ಅಜಾಗ್ರತ’ ಸಿನಿಮಾದ ಮುಹೂರ್ತ ನೆರವೇರಿಸಿರುವ ಚಿತ್ರತಂಡ, ಜೂನ್‌ ಮೊದಲ ವಾರದಿಂದ ಮೊದಲ ಹಂತದ ಚಿತ್ರೀಕರಣ ಆರಂಭಿಸುವ ಯೋಜನೆಯಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next