Advertisement
ಹೌದು. ಇದಕ್ಕೆ ಸಾಕ್ಷಿಯಾದದ್ದು ಜಿಲ್ಲಾ ಕೇಂದ್ರದಿಂದ ಕೇವಲ ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿರುವ ಶಾಗೋಟಿ ಗ್ರಾಮ. ಇಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಆದರೆ ಈ ಗ್ರಾಮದಲ್ಲಿ ಮುಸ್ಲಿಂ ಕುಟುಂಬಗಳೇ ಇಲ್ಲ.
Related Articles
Advertisement
ಮುಸ್ಲಿಮರಿಲ್ಲದಿದ್ದರೂ ಮೊಹರಂ ಆಚರಣೆ ಮುಂದುವರಿಸಿಕೊಡು ಧರ್ಮ ಸಾಮರಸ್ಯ, ಕೋಮು ಸೌಹಾರ್ದತೆ ಮೆರೆಯುವ ಇಂಥ ಹಳ್ಳಿಗಳು ಇಂದಿನ ದಿನಗಳಲ್ಲಿ ದೇಶದಲ್ಲಿ ವಿರಳಾತಿವಿರಳ ಎನ್ನಬಹುದು.
ಶಾಗೋಟಿ ಗ್ರಾಮದಲ್ಲಿ ನನ್ನ ತಾತ-ಮುತ್ತಜ್ಜ ಪ್ರತಿ ವರ್ಷ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರು. ಐದು ದಿನಗಳ ಕಾಲ ಗ್ರಾಮದಲ್ಲೇ ಉಳಿದುಕೊಂಡು ಪೂಜೆ ನೆರವೇರಿಸಲಾಗುತ್ತದೆ. ಪ್ರತಿದಿನ ಭಕ್ತರು ತಮ್ಮ ಮನೆಗೆ ಆಹ್ವಾನಿಸಿ ಊಟೋಪಚಾರ ಮಾಡುತ್ತಾರೆ. ಗ್ರಾಮಸ್ಥರು ಅಣ್ಣ-ತಮ್ಮಂದಿರಂತೆ ನೋಡಿಕೊಳ್ಳುತ್ತಾರೆ. –ಮುಕ್ತುಂಸಾಬ್ ಮುಲ್ಲಾನವರ, ಮೌಲಾನಾ, ಚಿಕ್ಕಹಂದಿಗೋಳ ಗ್ರಾಮ
ಈ ಸಂಪ್ರದಾಯ ನಮ್ಮ ಅಜ್ಜ-ಮುತ್ತಜ್ಜರ ಕಾಲದಿಂದಲೂ ನಡೆದುಕೊಂಡು ಬಂದಿದೆ. ನಮಗೆ ಆ ಧರ್ಮ, ಈ ಧರ್ಮ ಅಂತ ಭೇದಭಾವ ಇಲ್ಲ. ಎಲ್ಲರೂ ಒಂದೇ. ಈ ಕಾರಣಕ್ಕಾಗಿ ಇಲ್ಲಿ ಮುಸ್ಲಿಂ ಸಮಾಜದ ಯಾರೂ ಇರದಿದ್ದರೂ ನಾವೇ ಮೊಹರಂ ಹಬ್ಬ ಆಚರಿಸಿಕೊಂಡು ಹೋಗುತ್ತಿದ್ದೇವೆ. –ಮಾರ್ತಾಂಡಗೌಡ ನೀಲಪ್ಪಗೌಡರ, ಶಾಗೋಟಿ ಗ್ರಾಮದ ಹಿರಿಯರು
ಮೊಹರಂ ಹಬ್ಬದಂದು ಡೋಲಿ ಪಾಂಜಾಗಳ ಅದ್ಧೂರಿ ಮೆರವಣಿಗೆ ನಡೆಯುತ್ತದೆ. ಊರಿನ ಪ್ರತಿಯೊಬ್ಬರೂ ಹಬ್ಬದಲ್ಲಿ ಪಾಲ್ಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೆಜ್ಜೆ ಮಜಲು, ಅಲಾವಿ ಕುಣಿತದ ಮೂಲಕ ಮೆರವಣಿಗೆ ನಡೆಸಿ ದೇವರನ್ನು ಹೊಳೆಗೆ ಕಳುಹಿಸಲಾಗುತ್ತದೆ. –ಮಂಜುನಾಥ ಕೊರ್ಲಹಳ್ಳಿ, ಶಾಗೋಟಿ ಗ್ರಾಮಸ್ಥ.
-ಅರುಣಕುಮಾರ ಹಿರೇಮಠ