Advertisement

ಮೈಸೂರು ಮಹಾರಾಜರಿಗೆ ಔಷಧ

12:25 PM Dec 30, 2017 | |

ಮಲೆನಾಡಿನ ಪ್ರಸಿದ್ಧ ನಾಟಿ ವೈದ್ಯರ ಕುಟುಂಬವೆಂದರೆ, ಅದು  ಹೊಡಿಯಾಲ ಕುಟುಂಬ.ಶಿವಮೊಗ್ಗ-ತೀರ್ಥಹಳ್ಳಿ, ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಮಂಡಗದ್ದೆ ಸಮೀಪದ ಮುಡುಬ ಹೊಡೆಯಾಲ ಔಷಧಿ ಕೇಂದ್ರವು ಕೈಕಾಲು ಮೂಳೆ ಮುರಿತಕ್ಕೆ ರಾಮಬಾಣ ಇದ್ದಂತೆ.  ಕಳೆದೊಂದು ಶತಮಾನದಿಂದ  ರಾಜ್ಯದ ಮೂಲೆ ಮೂಲೆಯಿಂದ, ಹೊರ ರಾಜ್ಯಗಳಿಂದ ಜನ ಇಲ್ಲಿಗೆ ಬರುತ್ತಾರೆ. ಈ ಊರಿನಲ್ಲಿ ಸಿಗುವ ನಾಟಿ ಔಷಧಕ್ಕೆ ನೂರ ಐವತ್ತು ವರ್ಷಗಳ ಇತಿಹಾಸವಿದೆ. (ಹೊಡಿಯಾಲವೆಂದರೆ ಔಷಧ ನೀಡುವ ಪಂಡಿತರ ಊರಿನ ಹೆಸರು. ಇದು ಪಕ್ಕದ ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್‌.ಪುರ ತಾಲ್ಲೂಕಿಗೆ ಸೇರುತ್ತದೆ.) ಮುಡುಬದ ಪುಟ್ಟ ಔಷಧಿ ಕೇಂದ್ರ ಮುಖ್ಯ ರಸ್ತೆಯ ಪಕ್ಕದಲ್ಲೇ ಇರುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಆದರೆ ಈ ಔಷಧಿ ಕೇಂದ್ರದ ಜನಪ್ರಿಯತೆಗೆ ದೊಡ್ಡ ಇತಿಹಾಸವಿದೆ. 

Advertisement

ರಾಜ್ಯ ಪ್ರಶಸ್ತಿ ವಿಜೇತ ನಾಟಿ ವೈದ್ಯರಾದ ಪಂಡಿತರಾದ ದಿ.ಹೆಚ್‌.ಕೆ.ಸುಬ್ಬಯ್ಯ ನಾಯ್ಕರ ತಂದೆ ಕೊಲ್ಲಯ್ಯ ನಾಯ್ಕ, ಕೊಲ್ಲಯ್ಯ ನಾಯ್ಕರ ತಂದೆ ಅಣ್ಣಪ್ಪ ನಾಯ್ಕರು ಈ ನಾಟಿ ಔಷಧ ಪರಂಪರೆಗೆ ಬುನಾದಿ ಹಾಕಿದವರು. ಒಂದು ಕಾಲದಲ್ಲಿ ಕೈಕಾಲು ಮರಿತಕ್ಕೆ ಒಳಗಾದವರು ಇಲ್ಲಿಗೆ ಬಂದು ಪಟ್ಟ ಹಾಕಿಸಿಕೊಂಡು (ಬ್ಯಾಂಡೆಜ್‌) ಚಿಕಿತ್ಸೆ ಮಾಡಿಸಿಕೊಂಡು ಹೋಗುತ್ತಿದ್ದರು. ಪಟ್ಟ ಎಂದರೆ ಕೈ ಕಾಲಿಗೆ ದಬ್ಬೆ ಸುತ್ತಿ ನಡೆಸುವ ಕ್ರಿಯೆ ಇದು  ಆ ಕಾಲದಲ್ಲಿ ಜನಪ್ರಿಯವಾಗಿತ್ತು. ಮಲೆನಾಡಿನ ಭಾಗದಲ್ಲಿ ಮೂಲೆ ಮೂಲೆಯಿಂದಲೂ ರೋಗಿಗಳು ಎತ್ತಿನಗಾಡಿಯಲ್ಲಿ ಎರಡು ಮೂರು ದಿನಗಳ ಕಾಲ ಪ್ರಯಾಣ ಮಾಡಿ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರಂತೆ. 

ಈ ಚಿಕಿತ್ಸೆಯ ಜೊತೆಗೆ ಸೊಪ್ಪಿನ ತೈಲ ಪುಡಿ ಉಂಡೆಯನ್ನು ನೀಡುತ್ತಿದ್ದರು. ಕೈಕಾಲು ಮುರಿತಕ್ಕೆ ಒಳಗಾದ ರೋಗಿಗಳಿಗೆ ಇದೊಂದು ದಿವೌÂಷಧ ಇದ್ದ ಹಾಗೆ. ಇದಲ್ಲದೆ  ಆಸ್ತಮ, ಇಸುಬು, ಸರ್ಪಸುತ್ತು, ಗ್ಯಾಸ್ಟ್ರಿಕ್‌, ಬಿಳೆಸೆರಗು, ನರಸಮಸ್ಯೆ, ಸಂಧಿವಾತ ಮುಂತಾದ ರೋಗಗಳಿಗೆ ಇವರ ಮುಂದಿನ ಪೀಳಿಗೆ ಇಂದಿಗೂ ಔಷಧಿ ನೀಡುತ್ತಲೇ ಬಂದಿದೆ.

ದಿ.ಸುಬ್ಬಯ್ಯ ನಾಯ್ಕರ ಮೂವರು ಪುತ್ರರಲ್ಲಿ ಇಬ್ಬರು ನಿಧನರಾಗಿದ್ದಾರೆ. ಮೊದಲ ಪುತ್ರ ಪಂಡಿತ ದಿ.ಕುಮಾರ್‌ರವರ ಮಗ ಸಂದೇಶ್‌, ಎರಡನೇ ಪುತ್ರ ದಿ.ಚಂದ್ರಶೇಖರ್‌ ರವರ ಪತ್ನಿ ಜಯಲಕ್ಷಿ$¾ ಇದೇ ಮುಡುಬದ ಔಷಧಿ ಕೇಂದ್ರದಲ್ಲಿ ವರುಷದ 365 ದಿನವೂ ವೃತ್ತಿ ಸೇವೆಯಲ್ಲಿ ತೊಡಗಿದ್ದಾರೆ.  ಕೊನೆಯ ಪುತ್ರ ರಾಮಕೃಷ್ಣ, ಶಿವಮೊಗ್ಗದಲ್ಲಿ ನಾಟಿ ಪಂಡಿತ ವೃತ್ತಿಯನ್ನು ಮುಂದುವರಿಸಿದ್ದಾರೆ. 

ಮುಡುಬದ ಮುಖ್ಯ ರಸ್ತೆಯ ಪಕ್ಕದ ಪುಟ್ಟ ಚಿಕಿತ್ಸಾ ಕೇಂದ್ರದಲ್ಲಿರುವ ದಿ.ಸುಬ್ಬಯ್ಯ ನಾಯ್ಕರ ಮೊಮ್ಮಗ ಸಂದೇಶ್‌ ಹೇಳುತ್ತಾರೆ- ನಾನು ಬರೀ ಹಣಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಸಂಕಷ್ಟದಲ್ಲಿರುವವರು ಬಂದಾಗ ಸಹಾಯ ಮಾಡಬೇಕು ಎಂಬುದನ್ನು ನನ್ನ ಅಜ್ಜನಿಂದ ನಾನು ಕಲಿತಿದ್ದೇನೆ. ಈ ವೃತ್ತಿಯಿಂದ ನಮಗೆ ಒಳ್ಳೆಯದಾಗಿದೆ. 

Advertisement

ಮಹಾರಾಜರಿಗೆ ಔಷಧ
ಅಂದಾಜು ನೂರ ಐವತ್ತು ವರ್ಷಗಳ ಹಿಂದೆ ಮೈಸೂರು ರಾಜ ಮನೆತನದ ಒಡೆಯರಿಗೆ ಬೆನ್ನುಪಣಿಯಾಗಿ ಹಾಸಿಗೆ ಹಿಡಿದಿದ್ದರಂತೆ. ಯಾವ ಔಷಧಿಗೂ ರಾಜರ ಬೆನ್ನುನೋವು ವಾಸಿಯಾಗಿರಲಿಲ್ಲ. ಆಗ ರಾಜರು ನನ್ನ ಬೆನ್ನುಪಣಿ ರೋಗ ಗುಣಪಡಿಸಿದವರಿಗೆ ಇನಾಮು ನೀಡುತ್ತೇನೆ ಎಂದು ಡಂಗುರ ಸಾರಿಸಿದ್ದರಂತೆ. ಈ ವಿಷಯ ಹೇಗೋ ಅಣ್ಣಪ್ಪ ನಾಯ್ಕರ ಕಿವಿಗೆ ಬಿದ್ದು, ಅವರು ಮೈಸೂರಿಗೆ ಹೋಗಿ ಮಹಾರಾಜರಿಗೆ ಚಿಕಿತ್ಸೆಯ ನೀಡಿ, ಒಂದೇ ವಾರದಲ್ಲಿ ವಾಸಿ ಮಾಡಿ ಮಹಾರಾಜರು ನಡೆದಾಡುವಂತೆ ಮಾಡಿದ್ದರಂತೆ. ಆ ಮೂಲಕ ಮಹಾರಾಜರಿಂದ ಭೇಷ್‌ ಎನಿಸಿಕೊಂಡರಂತೆ. 
 ಚಿಕಿತ್ಸೆ ದಿನ- ವಾರ ಪೂರ್ತಿ
 ಮಾಹಿತಿಗೆ – 9591140283

ರಾಂಚಂದ್ರ ಕೊಪ್ಪಲು

Advertisement

Udayavani is now on Telegram. Click here to join our channel and stay updated with the latest news.

Next