Advertisement

ಮೂಡಿಗೆರೆ : ಪೊಲೀಸರೆದುರೇ ಕೈ-ಕೈ ಮಿಲಾಯಿಸಿದ ಬಿಜೆಪಿಯ ಎರಡು ಬಣ

04:38 PM Mar 27, 2023 | Team Udayavani |

ಚಿಕ್ಕಮಗಳೂರು : ಭಿನ್ನಮತ ಭುಗಿಲೆದ್ದಿರುವ ಮೂಡಿಗೆರೆಯಲ್ಲಿ ಬಿಜೆಪಿಯ ಗುಂಪಿನ ಮಧ್ಯೆ ಗಲಾಟೆ ನಡೆದಿರುವ ಘಟನೆ ಸೋಮವಾರ ನಡೆದಿದೆ.

Advertisement

ಪೊಲೀಸ್ ಸ್ಟೇಷನ್ ಮುಂದೆ, ಪೊಲೀಸರೆದುರೇ ಶಾಸಕ ಎಂಪಿ. ಕುಮಾರಸ್ವಾಮಿ ಮತ್ತು ಎಂ.ಎಲ್.ಸಿ. ಪ್ರಾಣೇಶ್ ಬೆಂಬಲಿಗರು ಕೈ-ಕೈ ಮಿಲಾಯಿಸಿದ್ದಾರೆ.

ಸ್ಟೇಷನ್ ಎದುರಿನ ಆಟೋ ನಿಲ್ದಾಣದ ವಿಚಾರದಲ್ಲಿ ಗಲಾಟೆ ನಡೆದಿದ್ದು, ಹಲವು ದಿನಗಳಿಂದ ಇದ್ದ ಅಸಮಾಧಾನ ಸ್ಫೋಟಗೊಂಡಿದೆ. ಆಟೋ ನಿಲ್ದಾಣದ ಬಳಿ ನೆರಳಿಗಾಗಿ ಎಂ.ಎಲ್.ಸಿ. ಫಂಡ್ ನಲ್ಲಿ ಶೆಡ್ ನಿರ್ಮಾಣಮಾಡಲಾಗಿದ್ದು, ಶೆಡ್ ತೆರವಿಗೆ ಪಟ್ಣಣ ಪಂಚಾಯತ್ ಮುಂದಾಗಿದ್ದು, ಈ ವೇಳೆ ಇಬ್ಬರು ನಾಯಕರ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ.

ಮೂಡಿಗೆರೆ ಬಿಜೆಪಿ ಟಿಕೆಟ್ ವಿಚಾರಕ್ಕೆ ಭಾರಿ ಭಿನ್ನಮತ ಭುಗಿಲೆದ್ದಿದ್ದು, ಈ ಗಲಾಟೆಗೂ ಅದಕ್ಕೂ ಸಂಬಂಧದ ಶಂಕೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next