ಶಿರಸಿ: ರಾಜ್ಯದಲ್ಲಿ ಲೀಡರ್ ರೇ ಇಲ್ಲ. ಪ್ರಧಾನಿ ಮೋದಿ, ಅಮಿತ್ ಶಾ ಅವರೇ ಬಂದು ಗೊಂದಲ ಬಗೆ ಹರಿಸುವ ಸ್ಥಿತಿ ಬಂದಿದೆ. ಇಲ್ಲಿ ನಾಯಕರೇ ಇಲ್ಲ ಎಂದು ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಶುಕ್ರವಾರ ಅವರು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ,ಒಳ್ಳೆತನಕ್ಕೆ ಜಯನೂ ಆಗುತ್ತದೆ. ಬಿಜೆಪಿಯಲ್ಲಿ ನನಗಿಷ್ಟು ಹಂಚಿಕೊಂಡಾಗ ಮಾನದಂಡ ಎಲ್ಲಿ ಬರುತ್ತದೆ. ಯಡಿಯೂರಪ್ಪ ಅವರು ಮೊಬೈಲ್
ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ 50-70 ಸ್ಥಾನ ಬಿಜೆಪಿದು ದಾಟಲ್ಲ ಎಂದರು.
ನನಗೆ ಟಿಕೆಟ್ ತಪ್ಪಲು ಸಿ.ಟಿ.ರವಿ ಅವರು ಕಾರಣ. ಹುಚ್ಚನಾಯಿ ತರ ಸೀಟಿ ಹೊಡೆಸಿ ಓಡಿಸಿದಂತೆ ಅಟ್ಟಿಸಿಕೊಂಡು ಓಡಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷೇತರ ಸ್ಪರ್ಧೆ ಮಾಡುವುದಿಲ್ಲ. ಮೂಡಿಗೆರೆಯಲ್ಲಿ ನನ್ನದೇ ಗೆಲುವು, ನಾನೆ ಎಂಎಲ್ ಎ ಎಂದ ಅವರು, ಸೆಕ್ಯುಲರ್ ಕ್ಷೇತ್ರ . ನಾನಿಲ್ಲದೇ ಇದ್ದರೆ ಜೆಡಿಎಸ್ ಕಾಂಗ್ರೆಸ್ ಗೆಲ್ಲಬೇಕಿತ್ತು.ನಾನು ಸಚಿವರಿಗಿಂತ ಹೆಚ್ಚು ಕೆಲಸ ಮಾಡಿದ ತೃಪ್ತಿ ಇದೆ ಎಂದರು.
ಬಿಜೆಪಿಯ ಕೆಲವರು ಸಿ.ಟಿ.ರವಿ ಭ್ರಮೆಲಿ ಇದ್ದಾರೆ. ಅದೂ ಗೊತ್ತಾಗುತ್ತದೆ ಎಂದು ಹೇಳಿದರು. ಈ ವೇಳೆ ಧರ್ಮಪಾಲ ಇತರರು ಇದ್ದರು.